ಬಂಧಿತ ಶಂಕಿತ ಡಾ.ಅಫಕ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಪಾಕ್‌ನಲ್ಲಿ ತರಬೇತಿ

ಪಾಕಿಸ್ತಾನದಲ್ಲೇ ಡಾ.ಅಫಕ್ ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದ. ದುಬೈ, ಶಾರ್ಜಾ, ಮುಂತಾದ ಗಲ್ಫ್ ರಾಷ್ಟ್ರಗಳ ನಡುವೆ ಓಡಾಡುತ್ತಿದ್ದ..

ಬೆಂಗಳೂರು: ಪಾಕಿಸ್ತಾನದಲ್ಲೇ ಡಾ.ಅಫಕ್ ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದ. ದುಬೈ, ಶಾರ್ಜಾ, ಮುಂತಾದ ಗಲ್ಫ್ ರಾಷ್ಟ್ರಗಳ ನಡುವೆ ಓಡಾಡುತ್ತಿದ್ದ ಡಾ. ಅಫಕ್ ಪಾಕ್‌ನಲ್ಲಿ ಕೆಲ ದಿನಗಳ ಕಾಲ ಬಾಂಬ್ ತಯಾರಿಕೆಯ ತರಬೇತಿ ಪಡೆದುಕೊಂಡಿದ್ದ.

ಸರ್ಕಿಟ್ ಜೋಡಣೆ, ಟೈಮರ್, ಸ್ಫೋಟಕಗಳ ಅಳವಡಿಕೆ ಮುಂತಾದ ಎಲ್ಲದರ ಬಗ್ಗೆ ವ್ಯವಸ್ಥಿತ ತರಬೇತಿ ಹೊಂದಿದ್ದ. ಅನುಮಾನಗಳು ಉಂಟಾದಾಗ ಪಾಕ್ ನಾಯಕರನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ.

ಹೊರ ರಾಷ್ಟ್ರಗಳಿಗೆ ಹೋದಾಗಲೆಲ್ಲ ಉಗ್ರ ನಾಯಕರೊಂದಿಗೆ ಮಾತುಕತೆ ನಡೆಸಿ ವಿಧ್ವಂಸಕ ಕೃತ್ಯಗಳ ಬಗ್ಗೆ ಚರ್ಚಿಸುತ್ತಿದ್ದ. ದೇಶದಲ್ಲಿ ಐಎಂ ಸಂಘಟನೆಯ ಬೇರನ್ನು ಬಲವಾಗಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದ. ಆಫಕ್‌ನನ್ನು ಐಎಂನ ಭವಿಷ್ಯದ ನಾಯಕನನ್ನಾಗಿ ವಿದೇಶಿ ಉಗ್ರ ಮುಖಂಡರು ಬೆಳೆಸುತ್ತಿದ್ದರು ಎಂದು ಮೂಲಗಳು  ತಿಳಿಸಿವೆ.

3 ಸ್ಫೋಟಕ್ಕೆ ಬಾಂಬ್ ಸರಬರಾಜು ಖಚಿತ
2010 ಫೆ. 13ರಂದು ಪುಣೆಯ ಜರ್ಮನ್ ಬೇಕರಿಯಲ್ಲಿ ಬಾಂಬ್ ಸ್ಫೋಟಿಸಿತ್ತು. ಇಟಲಿ, ಇರಾನ್ ಹಾಗೂ ಸೂಡನ್ ದೇಶದ ನಾಗರೀಕರು ಸೇರಿದಂತೆ 17 ಜನ ಮೃತಪಟ್ಟು 60 ಮಂದಿ ಗಾಯಗೊಂಡಿದ್ದರು. 2011ರ ಜುಲೈ 13ರಂದು ಮುಂಬೈನ ದಾದರ್, ಓಪೆರಾ ಹೌಸ್, ಹಾಗೂ ಝವೇರಿ ಬಜಾರ್‌ನಲ್ಲಿ ಸರಣಿ ಬಾಂಬ್ ಸ್ಫೋಟಗೊಂಡಿದ್ದವು. 26 ಮಂದಿ ಮೃತಪಟ್ಟು 130 ಮಂದಿ ಗಾಯಗೊಂಡಿದ್ದರು.

ಉಳಿದಂತೆ ಹೈದ್ರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಸ್ಫೋಟಕಗಳನ್ನು ಪೂರೈಕೆ ಮಾಡಿರುವುದನ್ನು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದರೆ ಇವರು ಯಾವುದೇ ಜಾಗಕ್ಕೆ ತೆರಳಿ ನೇರವಾಗಿ ಬಾಂಬ್ ಇಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT