ಬೆಂಗಳೂರು: ಗೋಪಾಲನ್ ಮಾಲ್‍ನಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಶಾಪಿಂಗ್ ಉತ್ಸವ ಕೊನೆಗೊಂಡಿದೆ. ಶಾಪಿಂಗ್ ಉತ್ಸವದಲ್ಲಿ ಮೊದಲ ಬಹುಮಾನವನ್ನು ಗೋಪಾಲನ್ ಆರ್ಕೆಡ್ ಮಾಲ್‍ನಲ್ಲಿ ಶಾಪಿಂಗ್ ಮಾಡಿದ ಗ್ರಾಹಕ ಗುರು ರಾಘವೇಂದ್ರ ಪಡೆದಿದ್ದಾರೆ. ಎರಡನೇ ಬಹುಮಾನವನ್ನು ಗೋಪಾಲನ್ ಸಿಗ್ನೆಚರ್ ಮಾಲ್‍ನಲ್ಲಿ ಶಾಪಿಂಗ್ ಮಾಡಿದ ಮಲ್ಲಿಗ ಆರ್ ರವರು ಪಡೆದಿದ್ದಾರೆ ಹಾಗೂ ತೃತಿಯ ಬಹುಮಾನವನ್ನು ಗೋಪಾಲನ್ ಸಿಗ್ನೇಚರ್ ಮಾಲ್‍ನಲ್ಲಿ ಶಾಪಿಂಗ್ ಮಾಡಿದ ಸಂಜಿಬ್ ಸಾಹರವರು ಪಡೆದಿದ್ದಾರೆ.
ಲಕ್ಕಿ ಡ್ರಾ ಮೂಲಕ ಗೋಪಾಲನ್ ಆರ್ಕೆಡ್ ಮಾಲ್‍ನಲ್ಲಿ ಗೋಪಾಲನ್ ಎಂಟರ್‍ಪ್ರೈಸಸ್ ನಿರ್ದೇಶಕ ಡಾ. ಪ್ರಭಾಕರ್ ಪ್ರಕಟಿಸಿದರು. ಮೊದಲ ಬಹುಮಾನ ಪಡೆದವರಿಗೆ ಮಹೀಂದ್ರ ರೀವಾ ಕಾರ್ , ಎರಡನೇ ಬಹುಮಾನ ಪಡೆದವರಿಗೆ ಹೀರೊ ಝೆಡ್‍ಎಂಆರ್ ಬೈಕ್ ಹಾಗೂ ಮೂರನೇ ಬಹುಮಾನ ಪಡೆದವರಿಗೆ ಗೋಡ್ರೆಜ್ ರಿಕ್ಲೈನರ್ ನೀಡಿ ಜನವರಿ 25 ರಂದು ಹಳೆ ಮದ್ರಾಸ್ ರಸ್ತೆಯಲ್ಲಿರುವ ಗೋಪಾಲನ್ ಸಿಗ್ನೇಚರ್ ಮಾಲ್‍ನಲ್ಲಿ ಅಭಿನಂದಿಸಲಾಗುವುದು ಎಂದು ಪ್ರಭಾಕರ್ ತಿಳಿಸಿದರು. ಇದೇ ಸಂದರ್ಭದಲ್ಲಿ ಮಂಡ್ಯ ಟು ಮುಂಬೈ ಚಿತ್ರದ ಕಲಾವಿದರು ಹಾಜರಿದ್ದರು.