ಜಿಲ್ಲಾ ಸುದ್ದಿ

ಕದೀಮ ಬ್ಯಾಂಕ್ ನೌಕರರು ಪೊಲೀಸ್ ಬಲೆಗೆ

ನಕಲಿ ಎಟಿಎಂ ಕಾರ್ಡ್ ಬಳಸಿ ಗ್ರಾಹಕರೊಬ್ಬರ ಖಾತೆಯಿಂದ ರು.6.96 ಲಕ್ಷ ಡ್ರಾ ಮಾಡಿದ್ದ ಆರೋಪಿಗಳನ್ನು...

ಹುಣಸೂರು: ನಕಲಿ ಎಟಿಎಂ ಕಾರ್ಡ್ ಬಳಸಿ ಗ್ರಾಹಕರೊಬ್ಬರ ಖಾತೆಯಿಂದ ರು.6.96 ಲಕ್ಷ ಡ್ರಾ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಎಸ್‌ಬಿಐ ಬ್ಯಾಂಕಿನ ಡಿ ಗ್ರೂಪ್ ನೌಕರ ಮಹದೇವಸ್ವಾಮಿ ಮತ್ತು ಮೈಸೂರು ಶ್ರೀರಾಂಪುರ ಶಾಕೆಯ ನೌಕರ ಮಹದೇವ ಬಂಧಿತ ಆರೋಪಿಗಳು. ಜ್ಯೋತಿನಗರ ನಿವಾಸಿ ರೂಪಾ ಪಟ್ಟಣದ ಎಸ್‌ಬಿಐ ಬ್ಯಾಂಕಿನ ತಮ್ಮ ಖಾತೆಯಲ್ಲಿ 8 ತಿಂಗಳ ಹಿಂದೆ ನೈಜೀರಿಯಾ ದೇಶಕ್ಕೆ ಹೋಗುವ ಮೊದಲು ರು.7.15 ಲಕ್ಷ ಜಮಾ ಮಾಡಿ ಹೋಗಿದ್ದರು.

ಸಂಕ್ರಾಂತಿ ಹಬ್ಬ ಆಚರಿಸಲು ಸ್ವದೇಶಕ್ಕೆ ಜನವರಿ ತಿಂಗಳಿನಲ್ಲಿ ಹಿಂದಿರುಗಿ ಬಂದ ಅವರು ತಮ್ಮ ಖಾತೆಯಲ್ಲಿ ಹಬ್ಬದ ಖರ್ಚಿಗಾಗಿ ಹಣ ಪಡೆಯಲು ಹೋದಾಗ ಕೇವಲ 21 ಸಾವಿರ ಇರುವುದು ಪತ್ತೆಯಾಗಿತ್ತು.

ಈ ಸಂಬಂಧ ಅವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದರು. ಬ್ಯಾಂಕಿನಿಂದ ಎಟಿಎಂ ಕಾರ್ಡ್ ಅಂಚೆ ಮೂಲಕ ರೂಪಾ ಅಳರ ಮನೆಗೆ ಕಳುಹಿಸಲಾಗಿತ್ತು.

ಆದರೆ ಯಾರೂ ಇಲ್ಲದಿದ್ದರಿಂದ ವಾಪಸ್ ಬ್ಯಾಂಕಿಗೆ ಬಂದಿತ್ತು. ಇದನ್ನರಿತ ಮಹದೇವಸ್ವಾಮಿ ತನ್ನ ಸಹೋದ್ಯೋಗಿ ಮಹದೇವನನ್ನು ಬಳಸಿಕೊಂಡು ಎಟಿಎಂನಿಂದ ಹಣ ಡ್ರಾ ಮಾಡಲು ಶುರುಮಾಡಿದ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ