ಸ್ಯಾಟ್‌ಲೈಟ್ ಫೋನ್‌ 
ಜಿಲ್ಲಾ ಸುದ್ದಿ

ಸ್ಯಾಟಲೈಟ್ ಫೋನ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ

ರಾಜ್ಯದಲ್ಲಿ ಅನುಮತಿ ಪಡೆದು ಬಳಕೆಯಲ್ಲಿರುವ ಸ್ಯಾಟ್‌ಲೈಟ್ ಫೋನ್‌ಗಳ ಬಗ್ಗೆ ಮಾಹಿತಿ ನೀಡುವಂತೆ...

ಬೆಂಗಳೂರು: ರಾಜ್ಯದಲ್ಲಿ ಅನುಮತಿ ಪಡೆದು ಬಳಕೆಯಲ್ಲಿರುವ ಸ್ಯಾಟ್‌ಲೈಟ್ ಫೋನ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಗುಪ್ತಚರ ಇಲಾಖೆಗೆ ಇಲ್ಲಿನ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಇಂಡಿಯನ್ ಮುಜಾಹಿದ್ದಿನ್ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಭಟ್ಕಳ ಮೂಲದ ನಾಲ್ವರು ಶಂಕಿತ ಉಗ್ರರ ಬಳಿ ಸಂವಹನ ಸಾಧನ ದೊರಕಿದೆ. ಅದು ರೇಡಿಯೋ ಫ್ರೀಕ್ವೆನ್ಸಿ ಟ್ರಾನ್ಸ್‌ಮಿಟರ್ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆರೋಪಿಗಳು ಅದನ್ನು ಆನ್‌ಲೈನ್ ಶಾಪಿಂಗ್ ತಾಣ ಅಮೇಜಾನ್.ಕಾಮ್ 'ಇ ಬೇ' ನಿಂದ ಖರೀದಿಸಿರುವುದಾಗಿ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಂವಹನ ಸಾಧನವನ್ನು ಬಾಂಬ್ ಸ್ಫೋಟ ನಡೆಸಲು ಬಳಸಲಾಗುತ್ತಿತ್ತಾ? ಅಥವಾ ಬಾಂಬ್ ಸ್ಫೋಟದ ಬಗ್ಗೆ ಟ್ರಯಲ್‌ಗಾಗಿ ಇರಿಸಿಕೊಳ್ಳಲಾಗಿತ್ತಾ ಎನ್ನುವುದು ತಿಳಿದು ಬಂದಿಲ್ಲ. ಸ್ಯಾಟಲೈಟ್ ಫೋನ್‌ಗಳು ದೇಶದಲ್ಲಿ ಸಾರ್ವಜನಿಕರ ಬಳಕೆಗೆ ನಿಷಿದ್ಧವಾಗಿವೆ. ಆದರೆ, ಅನುಮತಿ ಪಡೆದು ಕೆಲ ಸಂಸ್ಥೆಗಳು, ಬಳಸುತ್ತಿವೆ. ಹೀಗಾಗಿ, ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಬಳಕೆ ಮಾಡಲಾಗುತ್ತಿರುವ ಸ್ಯಾಟ್‌ಲೈಟ್ ಫೋನ್‌ಗಳೆಷ್ಟು? ಅದನ್ನು ಪಡೆಯಲು ಬೇಕಾದ ಪ್ರಕ್ರಿಯೆಗಳೇನು? ಯಾರು ಅರ್ಹರಾಗಿರುತ್ತಾರೆ ಎಂಬುದರ ವಿವರ ಪಡೆಯಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

ಸ್ಫೋಟಕ ಸಾಧನಗಳ ಖರೀದಿ ಮಾಹಿತಿ: ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿರುವ ಸ್ಫೋಟಕ ಸಾಧನಗಳನ್ನು ಸ್ಥಳೀಯವಾಗಿ ಭಟ್ಕಳ ಹಾಗೂ ಸುತ್ತ ಮುತ್ತ ಖರೀದಿ ಮಾಡಲಾಗಿದೆ. ಆರೋಪಿಗಳು, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಹೆಸರಿನಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಮಾರಾಟ ಮಾಡಿದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!