ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜೀಪ್ ಪಲ್ಟಿ: ಸಂಚಾರ ಅಸ್ತವ್ಯಸ್ತ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಎಲಿವೇಟೆಡ್ ಫೈ ಓವರ್‍ನಲ್ಲಿ ಜೀಪ್ ಪಲ್ಟಿ...

ಸಾಂದರ್ಭಿಕ ಚಿತ್ರ
Updated On : 1 Feb 2015, 10:11 am

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಎಲಿವೇಟೆಡ್ ಫೈ ಓವರ್‍ನಲ್ಲಿ ಜೀಪ್ ಪಲ್ಟಿ ಹೊಡೆದು 1 ತಾಸು ಸಂಚಾರ ಅಸ್ತವ್ಯಸ್ತ ಗೊಂಡಿತ್ತು.

ಯಲಹಂಕದಿಂದ ನಗರದ ಕಡೆ ಬರುತ್ತಿದ್ದ ಜೀಪ್ ಬೆಳಗ್ಗೆ 11.45ರಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಉರುಳಿ ಬಿದ್ದಿದ್ದು, ಚಾಲಕ ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ. ಘಟನೆಯಿಂದ ಮೇಲ್ಸೇತು ವೆಯಲ್ಲಿ ಟ್ರಾಫಿಕ್ ಜಾಮ್ಉಂಟಾಗಿತ್ತು.

ಯಲಹಂಕದಿಂದ ಹೆಬ್ಬಾಳದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಯಲಹಂಕ ಮತ್ತು ಹೆಬ್ಬಾಳ ಸಂಚಾರ ಪೊಲೀಸರು ಮಧ್ಯಾಹ್ನ 12.15 ವೇಳೆಗೆ ಮೇಲ್ಸೇತುವೆಯಿಂದ ಜೀಪ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಮಾನ ನಿಲ್ದಾಣಕ್ಕೆ ಹೋಗಬೇಕಿದ್ದ ಪ್ರಯಾಣಿಕರು ಟ್ರಾಫಿಕ್ ಜಾಮ್ ನಿಂದ ತೊಂದರೆ ಅನುಭವಿಸಬೇಕಾಯಿತು.

ಜೂಜಾಟ: 10 ಮಂದಿ ಬಂಧನ
ಬೆಂಗಳೂರು ಜೂಜಾಟದಲ್ಲಿ ತೊಡಗಿದ್ದ 6 ವಕೀಲರು ಸೇರಿ 10 ಮಂದಿಯನ್ನು ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಸಂಜೆ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೊಟೇಲ್‍ನ ಕೊಠಡಿಯೊಂದರಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ದಾಳಿ ನಡೆಸಿ ರು 1.90 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement