ಕಾಮೆಡ್-ಕೆ ಕೌನ್ಸಿಲಿಂಗ್(ಸಂಗ್ರಹ ಚಿತ್ರ ) 
ಜಿಲ್ಲಾ ಸುದ್ದಿ

ದೃಢೀಕೃತ ಅಂಕಪಟ್ಟಿ ತರದೇ ಸೀಟು ಹಂಚಿಕೆಗೆ ಸಮಸ್ಯೆ

ದ್ವಿತೀಯ ಪಿಯುಸಿ ದೃಢೀಕೃತ ಅಂಕಪಟ್ಟಿ ತಾರದೇ ಎಂಜಿನಿಯರಿಂಗ್ ಸೀಟು ಹಂಚಿಕೆ ಸಾಧ್ಯವಿಲ್ಲ ಎಂದು ಕಾಮೆಡ್-ಕೆ ಆದೇಶ ಹೊರಡಿಸಿದ್ದರಿಂದಾಗಿ ವಿದ್ಯಾರ್ಥಿ-ಪೋಷಕರಲ್ಲಿ ಗೊಂದಲ ನಿರ್ಮಾಣವಾಗಿತ್ತು.

ಬೆಂಗಳೂರು: ದ್ವಿತೀಯ ಪಿಯುಸಿ ದೃಢೀಕೃತ ಅಂಕಪಟ್ಟಿ ತಾರದೇ ಎಂಜಿನಿಯರಿಂಗ್ ಸೀಟು ಹಂಚಿಕೆ ಸಾಧ್ಯವಿಲ್ಲ ಎಂದು ಕಾಮೆಡ್-ಕೆ ಆದೇಶ ಹೊರಡಿಸಿದ್ದರಿಂದಾಗಿ ವಿದ್ಯಾರ್ಥಿ-ಪೋಷಕರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈ ಮಧ್ಯೆ ಪದವಿಪೂರ್ವ ಶಿಕ್ಷಣ ಇಲಾಖೆ ಸಮಸ್ಯೆಗೆ ತೆರೆ ಎಳೆದಿದೆ.

ಕಾಮೆಡ್-ಕೆ ಯಿಂದ ಹಂಚಿಕೆಯಾಗುತ್ತಿರುವ ಇಂಜಿನಿಯರಿಂಗ್ ಸೀಟುಗಳಿಗೆ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರಿಂದ ದೃಢೀಕೃತ  ದ್ವಿತೀಯ ಪಿಯುಸಿ ತಾತ್ಕಾಲಿಕ ಅಂಕಪಟ್ಟಿಯನ್ನು ಮಾತ್ರ ತರುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ತಾತ್ಕಾಲಿಕ ಅಂಕಪಟ್ಟಿಯಲ್ಲಿ ಲೋಪದೋಷ ಕಂಡುಬಂದಿದ್ದರಿಂದ ಮೂಲ ಅಂಕಪಟ್ಟಿಯನ್ನು ಅಥವಾ ದೃಢೀಕೃತ ಅಂಕಪಟ್ಟಿಯನ್ನು ಮಾತ್ರ ತರುವಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಸೂಚಿಸಿತು. ಇದರಿಂದ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಅರಿತ ಇಲಾಖೆ ತಕ್ಷಣ ಪರಿಹಾರಕ್ಕೆ ಮುಂದಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಬೆಂಗಳುರಿನಲ್ಲಿ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ದೋಷಪೂರಿತ ಅಂಕಪಟ್ಟಿಯ ಆಧಾರದ ಮೇಲೆ ಸೀಟು ಹಂಚಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಜುಲೈ ಎರಡನೇ ವಾರದಲ್ಲಿ ಆರಂಭವಾಗುವ ಮೆಡಿಕಲ್ ಸೀಟು ಹಂಚಿಕೆಯಲ್ಲಿ ಈ ರೀತಿ ಗೊಂದಲವಾಗಬಾರದು. ಹೀಗಾಗಿ ಇಲಾಖೆ ದೃಢೀಕರಿಸಿದ ಅಂಕಪಟ್ಟಿಯನ್ನೇ ತರಬೇಕೆಂದು ಸೂಚಿಸಲಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಗಳು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 472ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!