ಶ್ರೇಯಾ, ಸ್ಕಂದ ಐತಾಳ್ ಗೆ ಒಲಿದ ಓಶನ್ ಪಾಲ್ಸ್ ಅಂತರ್ ರಾಷ್ಟ್ರೀಯ ಪ್ರಶಸ್ತಿ
ಓಶನ್ ಪಾಲ್ಸ್ ಅಂತರ್ ರಾಷ್ಟ್ರೀಯ ಪೋಸ್ಟರ್ ಸ್ಪರ್ಧೆ -2015 ಸಾಲಿನಲ್ಲಿ ಭಾಗವಹಿಸಿದ ಕರ್ನಾಟಕದ ಲಿಲಿತಾ ಕಲಾ ಸೆಂಟರ್ ಫಾರ್ ವಿಷುವಲ್ ಆರ್ಟ್ಸ್...
ಬೆಂಗಳೂರು: ಓಶನ್ ಪಾಲ್ಸ್ ಅಂತರ್ ರಾಷ್ಟ್ರೀಯ ಪೋಸ್ಟರ್ ಸ್ಪರ್ಧೆ -2015 ಸಾಲಿನಲ್ಲಿ ಭಾಗವಹಿಸಿದ ಕರ್ನಾಟಕದ ಲಿಲಿತಾ ಕಲಾ ಸೆಂಟರ್ ಫಾರ್ ವಿಷುವಲ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೇಯಾ ಗೋಪಕುಮಾರ್ ಮತ್ತು ಕೆಆರ್ ಸ್ಕಂದ ಐತಾಳ್ 3 ಮತ್ತು 4ನೇ ಸ್ಥಾನದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾನಿಡಿದ ವಿಶುಯಲ್ ಆರ್ಟ್ಸ್ ನ ಅಧ್ಯಕ್ಷ ಎಸ್.ಜಯವಿನುಕುಮಾರ್, ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಬಿನೀಥ್ ದಿ ಸೀ ಮತ್ತು ಓಶನ್ ಪಾಲ್ಸ್ ಪರಿಸರ ಸಂರಕ್ಷಣ ಸಂಸ್ಥೆ ಆಯೋಜಿಸಿದ್ದ 2015ನೇ ಸಾಲಿನ ಓಶನ್ ಪಾಲ್ಸ್ ಅಂತರ್ ರಾಷ್ಟ್ರೀಯ ಪೋಸ್ಟರ್ ಸ್ಪರ್ಧೆಗೆ ನಮ್ಮ ಸಂಸ್ಥೆಯಿಂದ 14 ವಿದ್ಯಾರ್ಥಿಗಳ ಕಲಾ ಕೃತಿಗಳನ್ನು ಕಳುಹಿಸಿಕೊಡಲಾಗಿತ್ತು. ಅಂತರ್ ಜಲ ಮತ್ತು ಜಲವೇ ಜೀವನ ಎಂಬ ವಿಷಯದ ಮೇಲೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಶ್ರೇಯಾ ಗೋಪಕುಮಾರ್ ಮತ್ತು ಕೆಆರ್ ಸ್ಕಂದ ಐತಾಳ್ ಅವರ ಕಲಾಕೃತಿಗೆ 3 ಮತ್ತು 4ನೇ ಸ್ಥಾನ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ವಿಜೇತರಾದ ಶ್ರೇಯಾ ಗೋಪಕುಮಾರ್ ಮತ್ತು ಕೆಆರ್ ಸ್ಕಂದ ಐತಾಳ್ ಹಾಜರಿದ್ದರು.