ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ವಜಾಕ್ಕೆ ಆಗ್ರಹಿಸಿ ರಾಜ್ಯದ ಆಮ್ ಆದ್ಮಿ ಪಾರ್ಟಿ ಮಿಸ್ಡ್ ಕಾಲ್ ಕ್ಯಾಂಪೇನ್ ಪ್ರಾರಂಭಿಸಿದೆ.
ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಮಾತನಾಡಿದ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆ ಹಾಗೂ ಸಾರ್ವಜನಿಕರಿಂದ ಒತ್ತಡ ಹೇರಲು ಲೋಕಾಯಕ್ತ ಹುದ್ದೆಯಿಂದ ಭಾಸ್ಕರ್ ರಾವ್ ಅವರನ್ನು ವಜಾಗೊಳಿಸುವಂತೆ ಸರ್ಕಾರ ಮತ್ತು ಶಾಸಕರ ಮೇಲೆ ಒತ್ತಡ ಹೇರಲು ಆಪ್ ಮಿಸ್ಡ್ ಕಾಲ್ ಕ್ಯಾಂಪೇನ್ ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾಯುಕ್ತ ಭಾಸ್ಕರ್ ರಾವ್ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಅಲ್ಲದೇ, ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣ ಸಂಬಂಧ ಯಾರು ಧನಿ ಎತ್ತುತ್ತಿಲ್ಲ. ಬಹುಶಃ ಭಾಸ್ಕರ್ ರಾವ್ ಅವರ ಪುತ್ರನಿಂದ ಶಾಸಕರು, ಸಚಿವರು ಅಥವಾ ಮುಖ್ಯಮಂತ್ರಿಗಳೇ ಬ್ಲಾಕ್ ಮೇಲ್ ತಂತ್ರಕ್ಕೆ ಒಳಪಟ್ಟಿರಬಹುದು ಅಥವಾ ಅವರು ನಡೆಸಿರುವ ಭ್ರಷ್ಟಾಚಾರದಲ್ಲಿ ಇವರು ಶಾಮೀಲಾಗಿದ್ದಾರೆಂದೆನಿಸುತ್ತಿದೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಈ ಮಿಸ್ಡ್ ಕಾಲ್ ಕ್ಯಾಂಪೇನ್ ಕೈಗೊಳ್ಳಲಾಗಿದೆ. ಭಾಸ್ಕರ್ ರಾವ್ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಬಯಸುವ ನಾಗರೀಕರು 080-67331890 ದೂರಾವಾಣಿಗೆ ಮಿಸ್ಡ್ ಕಾಲ್ ಕೊಡಬಹುದು ಎಂದು ಅವರು ತಿಳಿಸಿದ್ದಾರೆ.