ಪತ್ರಿಕಾಗೋಷ್ಠಿಯಲ್ಲಿ ರೈತ ಸೇನಾ ಕರ್ನಾಟಕ ವಿರೇಶ ಸೋಬರದಮಠ ಮತ್ತಿತರರು ಹಾಜರಿದ್ದರು 
ಜಿಲ್ಲಾ ಸುದ್ದಿ

ಮಹಾದಾಯಿ ಹಾಗೂ ಮಲಪ್ರಭಾ ನದಿ ಜೋಡಣೆಗಾಗಿ ನಿರಂತರ ಧರಣಿ

ಮಹಾದಾಯಿ ಹಾಗೂ ಮಲಪ್ರಭಾ ನದಿ ಜೋಡಣೆಗಾಗಿ ಆಗ್ರಹಿಸಿ ರೈತ ಸೇನಾ ಕರ್ನಾಟಕ ಜುಲೈ 16ರಿಂದ ನಿರಂತರ ಧರಣಿಯನ್ನು...

ಬೆಂಗಳೂರು: ಮಹಾದಾಯಿ ಹಾಗೂ ಮಲಪ್ರಭಾ ನದಿ ಜೋಡಣೆಗಾಗಿ ಆಗ್ರಹಿಸಿ ರೈತ ಸೇನಾ ಕರ್ನಾಟಕ ಜುಲೈ 16ರಿಂದ ನಿರಂತರ ಧರಣಿಯನ್ನು ಹಮ್ಮಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವಿರೇಶ ಸೋಬರದಮಠ, ಜುಲೈ 21 ರೈತ ಹುತಾತ್ಮ ದಿನವನ್ನು 'ರೈತ ಸಂಕಲ್ಪ' ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜುಲೈ 16ರಂದು ನದಿ ಜೋಡಣೆಗಾಗಿ ಆಗ್ರಹಿಸರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಹಾದಾಯಿ ನೀರು ಹಂಚಿಕೆ ಹೋರಾಟದಲ್ಲಿ ಸಾಹಿತಿಗಳು, ಶಾಸಕರು, ಸಂಸದರು, ಸೇರಿದಂತೆ ವಿವಿಧ ಮುಖಂಡರು ಭಾಗವಿಸಬೇಕು ಎಂದು ಮನವಿ ಮಾಡಿದ ಅವರು, ಮಲಪ್ರಬೆಗೆ ಮಾಹಾದಾಯಿ ನದಿ ಜೋಡಿಸುವ ಕುರಿತು ನೀರು ಹಂಚಿಕೆಯ ವಿಷಯ ನ್ಯಾಯಾಧೀಕರಣದ ಮುಂದಿದ್ದು, ವಿಚಾರಣೆ ಅವಧಿ ಮುಗಿಯುತ್ತಾ ಬಂದಿದೆ. ಆದರೆ, ಇದರ ಬಗ್ಗೆ ಸರಿಯಾದ ಇತ್ಯರ್ಥ ಆಗುವ ಯಾವುದೇ ಸಾಧ್ಯತೆಗಳು ಕಂಡುಬಂದಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಗಮನ ಸೆಳೆಯಲು ಈ ಧರಣಿ ಹಮ್ಮಿಕೊಂಡಿದ್ದು, ಕೆಲವು ಹಕ್ಕೋತ್ತಾಯಗಳನ್ನು ಸರ್ಕಾರದ ಮುಂದಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಹಾದಾಯಿ ಹಾಗೂ ಮಲಪ್ರಭಾ ನದಿ ಜೋಡಣೆ ಕುರಿತು ಕೇಂದ್ರ ಸರ್ಕಾರಕ್ಕೆ ಭೇಟಿ ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಮಂತ್ರಿಮಂಡಲ ಸಹಿತ ಈ ಭಾಗದ ಜನಪ್ರತಿನಿದಿಗಳ ನಿಯೋಗ ರಚಿಸಬೇಕು ಹಾಗೂ ನಿಯೋಗವು ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಮಹಾದಾಯಿ ನೀರು ಹಂಚಿಕೆಯ ವಿಷಯವಾಗಿ ಮನವರಿಗೆ ಮಾಡುವುದರೊಂದಿಗೆ ಈ ಭಾಗದ ರೈತರ ಇತರೇ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಧರಣಿಯ ಮುಖ್ಯ ಹಕ್ಕೋತ್ತಾಯಗಳಾಗಿರುತ್ತವೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT