ವಾಯ್ಸ್ ಆಫ್ ಸಾರಥಿ ಪತ್ರಿಕೆ ಬಿಡುಗಡೆ ಸಮಾರಂಭ
ಕರ್ನಾಟಕ ರಾಜ್ಯ ವಾಹನ ಚಾಲಕರ ಕೇಂದ್ರ ಸಂಘ ಜುಲೈ 12ರಂದು 'ವಾಯ್ಸ್ ಆಫ್ ಸಾರಥಿ' ಸಮಸ್ತ ಚಾಲಕರ...
ಬೆಂಗಳೂರು: ಕರ್ನಾಟಕ ರಾಜ್ಯ ವಾಹನ ಚಾಲಕರ ಕೇಂದ್ರ ಸಂಘ ಜುಲೈ 12ರಂದು 'ವಾಯ್ಸ್ ಆಫ್ ಸಾರಥಿ' ಸಮಸ್ತ ಚಾಲಕರ ಧ್ವನಿ ಪತ್ರಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಎಂ ಮಂಜುನಾಥ್, ಸಮಾರಂಭ ಜುಲೈ 12ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಸಚಿವ ರಾಮಲಿಂಗಾ ರೆಡ್ಡಿ ಮತ್ತು ನಾಡೋಜ್ ನ್ಯಾ.ಡಾ.ಎಸ್ ಆರ್ ನಾಯಕ್ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಮಾಣಿಕ ಚಾಲಕರಿಗೆ ಸನ್ಮಾನ ಮಾಡಲಿದ್ದು, ಮಾಜಿ ಸಚಿವ ಆರ್ ಅಶೋಕ್, ಐಪಿಎಸ್ ಓಂಪ್ರಕಾಶ್, ಶಾಸಕ ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.