ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಅಕ್ರಮ ಆಸ್ತಿ, ದಾಳಿ: ಮಾಹಿತಿಗೆ ಸೂಚನೆ

ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಘಟಕದ ಕಾರ್ಯ ನಿರ್ವಹಣೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದ್ದ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅಕ್ರಮ ಆಸ್ತಿ ...

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಘಟಕದ ಕಾರ್ಯ ನಿರ್ವಹಣೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದ್ದ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅಕ್ರಮ ಆಸ್ತಿ ಸಂಪಾದನೆ ಹಾಗೂ ದಾಳಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ಲೋಕಾಯುಕ್ತ ಎಡಿಜಿಪಿ ಸೂಚನೆ ನೀಡಿದ್ದಾರೆ. ಎಷ್ಟು ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ. ಎಷ್ಟು ಪ್ರಕರಣಗಳಲ್ಲಿ ತನಿಖೆ ನಡೆಸಲಾಗಿದೆ. ಆರೋಪ ಪಟ್ಟಿ ಸಲ್ಲಿಕೆ, ನ್ಯಾಲಯದಲ್ಲಿ ವಿಚಾರಣೆ, ಹೀಗೆ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಎಲ್ಲಾ ಎಸ್ಪಿಗಳಿಗೂ ಎಡಿಜಿಪಿ ಮೀನಾಶಂಕರ್ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಅಧಿಕಾರಿಗಳ ವಿರುದ್ಧ ದೂರು ನೀಡಿದವರು ಯಾರು? ಅವರ ಹಿನ್ನೆಲೆ ಏನು? ಪ್ರಾಥಮಿಕ ತನಿಖೆ ವೇಳೆ ದೂರುದಾರರು ಆರೋಪಿಸಿದ್ದ ಅಕ್ರಮ  ಬಂದ ಆಸ್ತಿ ಪ್ರಮಾಣ ಎಷ್ಟು? ಹೀಗೆ ಹಲವು ಮಾಹಿತಿಗಳನ್ನು ಒದಗಿಸುವಂತೆ ಎಡಿಜಿಪಿಕೋರಿದ್ದಾರೆ ಎಂದು ತಿಳಿದು ಬಂದಿದೆ.  ಏಕೆ ಮಾಹಿತಿ? ಅಕ್ರಮ ಆಸ್ತಿ ಗಳಿಕೆ  ಆರೋಪದಲ್ಲಿ ದೂರುದಾರರು ನೀಡಿರುವ ಮಾಹಿತಿಯೇ ಒಂದು ಆಗಿರುತ್ತದೆ. ಆದರೆ, ದಾಳಿ ಬಳಿಕ ಲೋಕಾಯುಕ್ತ ಅಧಿಕಾರಿಗಳುನತೋರಿಸುವ ಮಾಹಿತಿಯೇ ಬೇರೆಯೇ  ಗಿರುತ್ತದೆ. ದಾಳಿ ಬಳಿಕ ಅಕ್ರಮ ಆಸ್ತಿ ಪ್ರಮಾಣ ಶೇಕಡವಾರು ಗಣನೀಯವಾಗಿ ಇಳಿಕೆಯಾಗಿರುತ್ತದೆ. ಅಲ್ಲದೇ, ಹಲವು ಪ್ರಕರಣಗಳ ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದೆ ಕಾಲ ತಳ್ಳುವುದು. ನ್ಯಾಯಾಲಯಕ್ಕೆ ಶೀಘ್ರ ಆರೋಪಪಟ್ಟಿ ಸಲ್ಲಿಸದೆ ಇರುವುದು. ಪ್ರಕರಣಗಳನ್ನು ಮುಚ್ಚಿಹಾಕಲು ಲಂಚ ಪಡೆಯುವ ಮೂಲಕ ಅಕ್ರಮ ಆಸ್ತಿ ಪ್ರಮಾಣವನ್ನು ಅಧಿಕಾರಿಗಳೇ ಕಡಿಮೆ ಮಾಡಿರುವ ಆರೋಪಗಳು ಲೋಕಾಯುಕ್ತ ಪೊಲೀಸ್ ಘಟಕದ ಮೇಲೆ ಇವೆ. ಇನ್ನು ಲಂಚ ಪಡೆಯುತ್ತಿರುವ ಸರ್ಕಾರಿ ಅ„ಕಾರಿಗಳನ್ನು ಟ್ರ್ಯಾಪ್ ಪ್ರಕರಣಗಳ ಬಗ್ಗೆಯೂ ಮಾಹಿತಿ ಕೋರಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲಂಚ ಆರೋಪ ಹೊರಿಸಿ ಟ್ರ್ಯಾಪ್ ಮಾಡಿಸುವ ಬೆದರಿಕೆ ಒಡ್ಡಿ ಸುಲಿಗೆ ಮಾಡಿರುವ ಆರೋಪಗಳು ಇವೆ. ಹೀಗಾಗಿ, ಒಟ್ಟಾರೆಯಾಗಿ ಕಳೆದ ಕೆಲವರ್ಷಗಳಲ್ಲಿ ಲೋಕಾಯುಕ್ತ ಪೊಲೀಸ್  ಘಟಕದಿಂದ ನಡೆದಿರುವ ಟ್ರ್ಯಾಪ್ ಹಾಗೂ ಅಕ್ರಮ ಆಸ್ತಿ ಪ್ರಕರಣಗಳ ಲೋಕಾಯುಕ್ತ ಎಡಿಜಿಪಿ  ಪ್ರೇಮ್ ಶಂಕರ್ ಮೀನಾ ಅವರು ಬಗ್ಗೆ ಸಮಗ್ರ ಮಾಹಿತಿ ಕೋರಲಾಗಿದೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಸಂಸ್ಥೆ ಕ್ಯಾನ್ಸರ್ ರೋಗ ದಿಂದ ಬಳಲುತ್ತಿದೆ. ದೂರು ದಾಖಲಾದರೆ ತನಿಖೆ ಪೂರ್ಣಗೊಳಿಸಲು ವಿಳಂಬ ಮಾಡುವ ಮೂಲಕ ಸಂಸ್ಥೆಯಲ್ಲಿನ ಹುಳುಕನ್ನು ಸಾರಿ ಹೇಳುತ್ತಿದೆ. ಇದರಿಂದ ಸಂಸ್ಥೆಯ ಮೇಲಿದ್ದ ಗೌರವ ಕಡಿಮೆ ಆಗುತ್ತಿದೆ ಎಂದು ಲೋಕಾಯುಕ್ತ  ಸಂಸ್ಥೆಗೆ ಹೈಕೋರ್ಟ್ ಚಾಟಿ  ಬೀಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್