ಕಿಡ್ನಿ ಮಾರಾಟ (ಒಳಗಿನ ಫೋಟೋದಲ್ಲಿ ಶಶಿಕಲಾ) 
ಜಿಲ್ಲಾ ಸುದ್ದಿ

ಕಿಡ್ನಿಗೆ ಕೊಟ್ಟಿದ್ದು ಮೂರಲ್ಲ, ರು.13 ಲಕ್ಷಕ್ಕೆ

ಗ್ರಾಪಂ ಚುನಾವಣೆ ಖರ್ಚಿಗಾಗಿ ಸಾಲ ತೀರಿಸಲು ತಾಲೂಕಿನ ನಾಗಶೆಟ್ಟಿಹಳ್ಳಿ ಮಹಿಳೆಯೊಬ್ಬಳ ಕಿಡ್ನಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು...

ಮಾಗಡಿ: ಗ್ರಾಪಂ ಚುನಾವಣೆ ಖರ್ಚಿಗಾಗಿ ಸಾಲ ತೀರಿಸಲು ತಾಲೂಕಿನ ನಾಗಶೆಟ್ಟಿಹಳ್ಳಿ ಮಹಿಳೆಯೊಬ್ಬಳ ಕಿಡ್ನಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, 3 ವರೆ ಲಕ್ಷಕ್ಕೆ ಮಾರಾಟ ಮಾಡಿದ್ದು ಮೊದಲು ತಿಳಿದಿತ್ತು. ಈಗ ಪೊಲೀಸರ ತನಿಖೆಯಿಂದ 13 ಲಕ್ಷಕ್ಕೆ ಕಿಡ್ನಿ ಮಾರಾಟವಾಗಿರುವುದು ಬೆಳಕಿಗೆ ಬಂದಿದೆ.
ಕಿಡ್ನಿ ಮಾರಾಟ ಸೂತ್ರಧಾರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುರೇಶ್ (ಮೂಲತಃ ಶಿವಮೊಗ್ಗ ಜಿಲ್ಲೆಯ ನಲ್ಲೂರು ಗ್ರಾಮದವರು) ಪಾತ್ರಧಾರಿಯಾಗಿದ್ದು ಈ ಹಗರಣ ದಿಂದ 7 ಲಕ್ಷವರೆಗೂ ಹಣ ಪಡೆಯಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಈಗ ಸುರೇಶ್‍ನ ಹಿಡಿಯಲು ವಿಶೇಷ ತಂಡ ರಚನೆ ಮಾಡಿದ್ದಾರೆ.
ಸ್ಥಳೀಯರ ವಿಚಾರಣೆ : ನಾಗಶೆಟ್ಟಿಹಳ್ಳಿ ಮಹಿಳೆಯೊಬ್ಬಳ ಕಿಡ್ನಿಯನ್ನು ಪಡೆದಿರುವ ಶ್ರೀನಿವಾಸ್ ಪ್ರಕರಣದಲ್ಲಿ ಮಾಗಡಿಯ ಸ್ಥಳೀಯರು ಕೂಡ ಕಿಡ್ನಿ ಧಂದೆ ಆರೋಪಿ ಸುರೇಶ್‍ನ ಸಂಪರ್ಕ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಪಟ್ಟಣದ ಜ್ಯೋತಿನಗರದ ಕಿಡ್ನಿ ಮಂಜು ಮತ್ತು ಮತ್ತೊಬ್ಬ ಮಂಜುನಾಥ್ ಹಾಗೂ ಕಿಡ್ನಿ ಕೊಟ್ಟ ಮಹಿಳೆಯ ತಂಗಿ ಕರಗದಹಳ್ಳಿ ಉಮಾದೇವಿ ಕೂಡ ಸುರೇಶ್‍ನ ಸಂಪರ್ಕದಲ್ಲಿ ಇರುವುದು ಕಂಡು ಬಂದಿದ್ದು ಈ ಮೂವರನ್ನು ಮಾಗಡಿ ಪೊಲೀಸರು ವಿಚಾರಣೆಗೆ ಶನಿವಾರ ಒಳಪಡಿಸಿದ್ದರು.
ಮಲ್ಲಿಗೆ ಆಸ್ಪತ್ರೆಯಲ್ಲಿ ಭೇಟಿ: ಶ್ರಿನಿವಾಸ್‍ನ ತಾಯಿಗೆ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಾಗ ಸುರೇಶ್ ಅವರನ್ನು ಪರಿಚಯ ಮಾಡಿಕೊಂಡು ನಿಮ್ಮ ತಾಯಿಗೆ ಕಿಡ್ನಿ ಕೊಡಿಸುವುದಾಗಿ 13 ಲಕ್ಷದ ಡೀಲ್ ಕುದುರಿಸಿದ್ದಾನೆ. ಇದಕ್ಕಾಗಿ ಸುರೇಶ್ ಖುದ್ದಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದ ಎಂದು ಮಾಗಡಿ ಪೊಲೀಸರ ವಶದಲ್ಲಿರುವ ಶ್ರೀನಿವಾಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಾಗಡಿಯಲ್ಲಿ ಕಿಡ್ನಿ ರ್ಯಾಕೆಟ್ ಹೆಚ್ಚಾಗಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೃತ್ತ ನಿರೀಕ್ಷಕ ನಂದೀಶ್ ಕಿಡ್ನಿ ಉಖಿSಫಿಯಾವನ್ನು ಮಾಗಡಿಯಲ್ಲಿ ಬೇರು ಸಮೇತ ಹಿಡಿಯಬೇಕೆಂದು ಚುರುಕಿನ ಕಾರ್ಯಚರಣೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು