ಕರ್ನಾಟಕ ಹೈಕೋರ್ಟ್ 
ಜಿಲ್ಲಾ ಸುದ್ದಿ

ಲಿಂಗಯ್ಯನ ಕೆರೆ ಅತಿಕ್ರಮಣ: ಸರ್ಕಾರ, ಡಿಸಿಗೆ ಹೈ ನೋಟಿಸ್

ಲಿಂಗಯ್ಯನ ಕೆರೆ ಅತಿಕ್ರಮಿಸಿ ಜೆ.ಪಿ. ನಗರದಲ್ಲಿ ಡಾಲರ್ಸ್ ಕಾಲೊನಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ಸಾರ್ವಜನಿಕ...

ಬೆಂಗಳೂರು: ಲಿಂಗಯ್ಯನ ಕೆರೆ ಅತಿಕ್ರಮಿಸಿ ಜೆ.ಪಿ. ನಗರದಲ್ಲಿ ಡಾಲರ್ಸ್ ಕಾಲೊನಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಹಾಗೂ ಬೆಂಗಳೂರು ನಗರ  ಜಿಲ್ಲಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಲಿಂಗಯ್ಯನ ಕೆರೆ ಜಾಗವನ್ನು ಅತಿಕ್ರಮಿಸಿ ಬಡಾವಣೆ ನಿರ್ಮಿಸಿದ್ದಾರೆಂದು ಆರೋಪಿಸಿ ಲಕ್ಷ್ಮಿ ನಾರಾಯಣ ಸೇರಿ ಐವರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಈ ನೋಟಿಸ್ ಜಾರಿ ಮಾಡಿದೆ. ಪುಟ್ಟೇನಹಳ್ಳಿ-ಸಾರಕ್ಕಿ ಕೆರೆ ಅತಿಕ್ರಮಿಸಿ ನಿರ್ಮಿಸಲಾಗಿದ್ದ ಮನೆಗಳನ್ನು ಕೆಡವಲಾಗಿದೆ. ಇದೇ ರೀತಿ ಲಿಂಗಯ್ಯನ ಕರೆ ಅಚ್ಚುಕಟ್ಟು ಪ್ರದೇಶವನ್ನು ಅತಿಕ್ರಮಿಸಿ ಬಡಾವಣೆ ನಿರ್ಮಿಸಲಾಗಿದೆ. ಈ ಕೆರೆ ಒಟ್ಟು 808 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ 167 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಲು ಅಧಿಸೂಚನೆ ಹೊರಡಿಸಿ, ತದನಂತರ ರದ್ದುಪಡಿಸಲಾಗಿದೆ. 56.37 ಎಕರೆ ಕೆರೆ ಪ್ರದೇಶವನ್ನು ಅತಿಕ್ರಮಿಸಿ ಬಡಾವಣೆ ನಿರ್ಮಿಸಿದ್ದು, ಸರ್ಕಾರದ ಪೂರ್ವಾನುಮತಿ ಕೂಡ ಪಡೆದಿಲ್ಲ. ಬಲಾಢ್ಯರೇ ಇಲ್ಲಿ ನಿವೇಶನ ಹೊಂದಿರುವುದರಿಂದ ಈ ಬಡಾವಣೆಯನ್ನು ರಕ್ಷಿಸಲಾಗುತ್ತಿದೆ. ಮನೆ ನಿರ್ಮಿಸಿರುವ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮಾಜಿ ಶಾಸಕರು, ಸಚಿವರು ಇದ್ದಾರೆಂದು ಅರ್ಜಿದಾರರು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು