ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಆರ್.ದೇಶಪಾಂಡೆ 
ಜಿಲ್ಲಾ ಸುದ್ದಿ

ದೇಶಪಾಂಡೆ ರಾಜಿನಾಮೆ ದೃಢ ಇಂದು ಲೋಕಾಯುಕ್ತರಿಗೆ ಸಲ್ಲಿಕೆ

ಲೋಕಾಯುಕ್ತ ಕಚೇರಿ ಲಂಚ ಹಗರಣ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಆರ್.ದೇಶಪಾಂಡೆ ಅವರು ರಾಜಿನಾಮೆ ನೀಡಿರುವುದು ಅಂಗೀಕಾರವಾಗುವುದಷ್ಟೇ ಬಾಕಿ ಇದೆ...

ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಹಗರಣ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಆರ್.ದೇಶಪಾಂಡೆ ಅವರು ರಾಜಿನಾಮೆ ನೀಡಿರುವುದು ಅಂಗೀಕಾರವಾಗುವುದಷ್ಟೇ ಬಾಕಿ ಇದೆ.

ನಾಲ್ಕು ದಿನಗಳ ರಜೆ ಬಳಿಕ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್ ಅವರು ಸೋಮವಾರದಿಂದ ಕರ್ತವ್ಯಕ್ಕೆ ಮರಳುತ್ತಿರುವುದರಿಂದ ಅವರ ರಾಜಿನಾಮೆಗೆ ಆಗ್ರಹಿಸಿ ಮತ್ತೆ ಹೋರಾಟಗಳು ತೀವ್ರಗೊಳ್ಳಲಿವೆ. ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ರಿಜಿಸ್ಟ್ರಾರ್ ದೇಶಪಾಂಡೆ ಅವರ ರಾಜಿನಾಮೆ ಸಂಚಲನ ಮೂಡಿಸಿದೆ. ಲೋಕಾಯುಕ್ತ ಸಂಸ್ಥೆಯ ಕಾನೂನು ಘಟಕ ಮುಖ್ಯಸ್ಥರು ಆಗಿದ್ದ ದೇಶಪಾಂಡೆ ಅವರು ವೈಯಕ್ತಿಕ ಕಾರಣಗಳಿಂದ ಹಾಗೂ ಅನಾರೋಗ್ಯ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಬೆಳವಣಿಗೆಗಳಿಂದ ಅವರು ತೀವ್ರ ಬೇಸರಗೊಂಡಿದ್ದಾರೆ ಎಂದೂ ಹೇಳಲಾಗಿದೆ.

ದೇಶಪಾಂಡೆ ಅವರ ಮಗಳಿಗೆ ಹೆರಿಗೆಯಾಗಿದ್ದು ಮಗುವಿಗೆ ಅನಾರೋಗ್ಯ ಕಾಡುತ್ತಿರುವುದರಿಂದ ಅದನ್ನು ನೋಡಿಕೊಳ್ಳಲು ಪತ್ನಿ ಮಾತ್ರ ಇದ್ದಾರೆ. ಹೀಗಾಗಿ, ಅಲ್ಲಿಗೆ ತೆರಳಲು ಆಗದೆ ಕಚೇರಿ ವಿವಾದಗಳಿಂದ ಬೇಸತ್ತಿರುವ ಅವರು ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜು.1ರಿಂದ 13ರವರೆಗೆ ದೇಶಪಾಂಡೆ ಅವರು ರಜೆ ಮೇಲೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರ ಲೋಕಾಯುಕ್ತ ಲಂಚ ಪ್ರಕರಣವನ್ನು ಎಸ್‍ಐಟಿಗೆ ಒಪ್ಪಿಸಿತ್ತು. ವಾಪಸ್ ಬಂದ ಬಳಿಕ ಲಂಚ ಹಗರಣದ ಬಗ್ಗೆ ಎಸ್‍ಐಟಿ ಅಧಿಕಾರಿ ದೇಶಪಾಂಡೆ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಧಾರವಾಡ ಸಂಚಾರ ಪೀಠದಲ್ಲಿ ರಿಜಿಸ್ಟ್ರಾರ್ ಆಗಿದ್ದ ಎಚ್.ಆರ್.ದೇಶಪಾಂಡೆ ಅವರು 2013 ಅಕ್ಟೋಬರ್ 31ರಂದು ಲೋಕಾಯುಕ್ತ ರಿಜಿಸ್ಟ್ರಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ದೇಶಪಾಂಡೆ ಅವರ ಅವಧಿ 2015ರ ಅಕ್ಟೊಬರ್ 31ಕ್ಕೆ ಅಂತ್ಯಗೊಳ್ಳಲಿದೆ ಎಂದು ಲೋಕಾಯುಕ್ತ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.

ಪ್ರತಿಭಟನೆಗಳ ಸ್ವಾಗತ: ಸೋಮವಾರದಿಂದ ನ್ಯಾ.ಭಾಸ್ಕರ್‍ರಾವ್ ಅವರು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಹೀಗಾಗಿ, ವಕೀಲರ ಸಮುದಾಯ, ಹೋರಾಟಗಾರರು ರಾಜಿನಾಮೆಗೆ ಆಗ್ರಹಿಸಿ ಮತ್ತೊಮ್ಮೆ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ನೇಮಕ ಪ್ರಕ್ರಿಯೆಯಿಂದಲೇ ನ್ಯಾ.ಭಾಸ್ಕರ್‍ರಾವ್ ವಿರುದ್ಧ ಭ್ರಷ್ಟಾಚಾರ ಆರೋಪವಿದೆ. ಹೀಗಾಗಿ, ನೇಮಕದಿಂದ ಹಿಡಿದು ಇಂದಿನವರೆಗೂ ನಡೆದಿರುವ ಎಲ್ಲ ಹಗರಣಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಹೀಗಾಗಿ, ಅದನ್ನು ಸಿಬಿಐಗೆ ವಹಿಸಲೇಬೇಕು ಎಂದು ಲೋಕಾಯುಕ್ತರ ರಾಜಿನಾಮೆಗೆ ಆಗ್ರಹಿಸಿ ಸರಣಿ ಹೋರಾಟ ನಡೆಸುತ್ತಿರುವ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!