ಬೆಂಗಳೂರು: ರಾಜ್ಯದಲ್ಲಿ ಸಾಲಭಾದೆಯಿಂದ ಬುಧವಾರ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಕುಮಾರ (50), ಎಚ್.ಡಿ. ಕೋಟೆ ತಾಲೂಕಿನ ಮಾದಾಪುರದ ನಟೇಶ್‍ಮೂರ್ತಿ(32), ಔರಾದ್ ತಾಲೂಕಿನ ಬಲ್ಲೂರ(ಜೆ) ಗ್ರಾಮದ ಸಂತೋಷ ಮಾಣಿಕರಾವ ಚಿಲ್ಲಾಳೆ (35), ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ರೈತ ಹನಮಪ್ಪ ಈಟ್ಟನ್ನವರ ಸಾವಿಗೆ ಶರಣಾದವರು.
ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಶಿಗ್ಗಾಂವಿ ತಾಲೂಕಿನ ಹಿರೇಮಲ್ಲೂರು ಗ್ರಾಮದ ತಿಪ್ಪಣ್ಣ ಕಟ್ಟೆಪ್ಪ ಕುಂಕೂರು(65) ಬೆಳೆ ಒಳಗಿರುವುದನ್ನು ಕಂಡು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.