ಹೈ ಕೋರ್ಟ್ 
ಜಿಲ್ಲಾ ಸುದ್ದಿ

ಅಂಧನಿಗೆ ನ್ಯಾಯಾಧೀಶ ಹುದ್ದೆ ಪರೀಕ್ಷೆ ಬರೆಯಲು ಹೈ ಅಸ್ತು

ಸಿವಿಲ್ ಜಡ್ಜ್ ಹುದ್ದೆಗಳ ನೇರ ನೇಮಕಕ್ಕೆ ಸಂಬಂಧಿಸಿದಂತೆ ಜು.25 ರಂದು ನಡೆಯುವ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಅಂಧ ಅಭ್ಯರ್ಥಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಐತಾಳ್...

ಬೆಂಗಳೂರು: ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿರುವ ಅಂಧ ಅಭ್ಯರ್ಥಿಗೆ ಸಹಾಯಕರನ್ನು ನೀಡುವ ಮೂಲಕ ಪರೀಕ್ಷೆ ಬರೆಸಲು ಹೈಕೋರ್ಟ್ ಅನುಮತಿ ನೀಡಿದೆ.
ಸಿವಿಲ್ ಜಡ್ಜ್ ಹುದ್ದೆಗಳ ನೇರ ನೇಮಕಕ್ಕೆ ಸಂಬಂಧಿಸಿದಂತೆ ಜು.25 ರಂದು ನಡೆಯುವ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಅಂಧ ಅಭ್ಯರ್ಥಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಐತಾಳ್ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾ.ಆರ್.ಎಸ್.ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠವು, ವಕೀಲ ಐತಾಳ್ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಅಲ್ಲದೇ ಆತ ಪರೀಕ್ಷೆಗೆ ಹಾಜರಾಗಿದ್ದೇ ಆದಲ್ಲಿ ಆತನಿಗೆ ಹೈಕೋರ್ಟ್ ನಿಂದಲೇ ಸಹಾಯಕನನ್ನು ನೀಡಿ, ಪರೀಕ್ಷೆ ಸಮಯದಲ್ಲಿ 30 ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಆದೇಶಿಸಿದೆ.
ಹೈಕೋರ್ಟ್‍ನಿಂದ ರೂಪುಗೊಂಡಿರುವ ನೇಮಕಾತಿ ಸಮಿತಿಯು 211 ಸಿವಿಲ್ ಜಡ್ಜ್ ಹುದ್ದೆಗಳಿಗೆ ಜು.25ರಂದು ಮಧ್ಯಾಹ್ನ ಬಿಷಪ್ ಕಾಟನ್ ಮಹಿಳಾ ಪಿ.ಯು ಕಾಲೇಜಿ ನಲ್ಲಿ ಪರೀಕ್ಷೆ ನಡೆಸುತ್ತಿದೆ. ಬೆಂಗಳೂರು ನಿವಾಸಿಯಾಗಿರುವ ಪೃಥ್ವಿರಾಜ್ ಶೇ. 75ರಷ್ಟು ಅಂಧತ್ವ ಹೊಂದಿದ್ದು, ವೃತ್ತಿಪರ ವಕೀಲರಾಗಿದ್ದು ಸಿವಿಲ್ ಜಡ್ಜ್ ಹುದ್ದೆಯ ಆಕಾಂಕ್ಷಿಯಾಗಿದ್ದರು.
ಹುದ್ದೆ ನೇಮಕಾತಿಗೆ ಅಂಗವಿಕಲರಿಗೆ ಮಾತ್ರ ಶೇ.1ರಷ್ಟು ಮೀಸಲು ಅವಕಾಶ ನೀಡಲಾಗಿದೆ. ಅದರಂತೆ ಅಂಧತ್ವ ಹೊಂದಿದ ಅಭ್ಯರ್ಥಿಗಳಿಗೂ ಶೇ.1ರಷ್ಟು ಮೀಸಲು ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಪ್ರಕರಣದ ವಿಚಾರಣೆ ವೇಳೆ ಪೃಥ್ವಿರಾಜ್ ಪರ ಪರ ವಕೀಲರಾದ ಎನ್. ಪಿ. ಅಮೃತೇಶ್ ಅವರು, ತಮ್ಮ ಕಕ್ಷಿದಾರನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ, ಸಹಾಯಕರನ್ನು
ನೀಡುವಂತೆ ನಿರ್ದೇಶಿಸಬೇಕು ಎಂದು ಕೋರಿದರು. ನೇಮಕಾತಿ ಸಮಿತಿಯ ಪರವಾಗಿ ಹಾಜರಾಗಿದ್ದ ಎ.ಜಿ.ಶಿವಣ್ಣ ಅವರು, ಈಗಾಗಲೇ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಮತ್ತು ಈ ಹಂತದಲ್ಲಿ ಏಕಾಏಕಿ ಅನುಕಂಪದ ಆಧಾರದಲ್ಲಿ ಮೀಸಲು ನೀಡುವುದು ಸಾಧ್ಯವಿಲ್ಲ' ಎಂದರು. ಶಿವಣ್ಣ ಅವರ ವಾದವನ್ನು ತಳ್ಳಿಹಾಕಿದ ಪೀಠ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್