ಸಾಂಕೇತಿಕ ಚಿತ್ರ 
ಜಿಲ್ಲಾ ಸುದ್ದಿ

ಸಾವಲ್ಲೂ ಮಿಡಿದ ಹೃದಯ

ಬೆಂಗಳೂರಿನಲ್ಲಿ ಕೇವಲ ಐದು ದಿನಗಳಲ್ಲಿ ಎರಡು ಹೃದಯ ಕಸಿ ಆಗಿವೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಟ್ರಾವೆಲ್ಸ್ ಸಂಸ್ಥೆ ಉದ್ಯೋಗಿ ಇಳವರಸನ್...

ಬೆಂಗಳೂರು: ಬೆಂಗಳೂರಿನಲ್ಲಿ ಕೇವಲ ಐದು ದಿನಗಳಲ್ಲಿ ಎರಡು ಹೃದಯ ಕಸಿ ಆಗಿವೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಟ್ರಾವೆಲ್ಸ್ ಸಂಸ್ಥೆ ಉದ್ಯೋಗಿ ಇಳವರಸನ್ (32) ಅವರ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ಹಸ್ತಾಂತರಿಸಲಾಯಿತು.

ಬಿಜಿಎಸ್ ಆಸ್ಪತ್ರೆಗೆ ಲಿವರ್ ಹಾಗೂ 2 ಕಿಡ್ನಿಗಳ ಪೈಕಿ ಒಂದನ್ನು ಸಾಗರ್ ಅಪೋಲೋಗೆ, ಮತ್ತೊಂದನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡಲಾಯಿತು. ಕಣ್ಣುಗಳನ್ನು ಲಯನ್ಸ್ ಕ್ಲಬ್‍ಗಳಲ್ಲಿರುವ ರೋಗಿಗಳಿಗೆ ನೀಡಲಾಯಿತು.

ಇದಕ್ಕಾಗಿ ನಗರ ಸಂಚಾರ ಪೊಲೀಸರು ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಯಿಂದ ಹೊಸೂರು ರಸ್ತೆಯ ನಾರಾಯಣ ಹೃದಯಾಲಯದವರೆಗಿನ 24 ಕಿ.ಮೀ ಮಾರ್ಗವನ್ನು ಗ್ರೀನ್ ಕಾರಿಡಾರ್ (ತಡೆರಹಿತ) ಆಗಿ ಪರಿವರ್ತಿಸಿದ್ದರು. ಹೀಗಾಗಿ, ಕೇವಲ 17 ನಿಮಿಷಗಳಲ್ಲಿ ಆ್ಯಂಬುಲೆನ್ಸ್ ನಾರಾಯಣ ಹೃದಯಾಲಯ ತಲುಪಿತು.

ಬಹು ಅಂಗಾಂಗ ದಾನ: ವೆಲ್ಲೂರಿನ ಇಳವರಸನ್, 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಂದಿರಾನಗರದಲ್ಲಿನ ವಿನಾಯಕ ಟ್ರಾವೆಲ್ಸ್‍ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿಯ  ಕೊಠಡಿಯಲ್ಲಿ ಒಂಟಿಯಾಗಿ ವಾಸವಿದ್ದರು.
ಜು.22 ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಹೊಸೂರು ರಸ್ತೆ ದಾಟುವ ವೇಳೆ
ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಕೆಳಗೆ ಬಿದ್ದ ಇಳವರಸನ್ ತಲೆಗೆ ತೀವ್ರ ಗಾಯವಾಗಿತ್ತು. ತಕ್ಷಣ ಸ್ಥಳೀಯ ಆಸ್ಪತ್ರೆ
ದಾಖಲಿಸಲಾಗಿತ್ತು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಂತಿಮವಾಗಿ ಸಾUರ ಅಪೋಲೋಗೆ ದಾಖಲಿಸಲಾಗಿತ್ತು. ಗಾಯಾಳು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಅಪಘಾತದಲ್ಲಿ  ಇಳವರಸನ್ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಹೆತ್ತವರನ್ನು  ಅಂಗಾಂಗ ದಾನಕ್ಕೆ ಪೊಲೀಸರು ಮನವೊಲಿಸಿದರು.
ಬಿಲ್ ಪಾವತಿಸಿಲು ಒತ್ತಾಯ: ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ದೇಹದ ಪ್ರಮುಖ ಅಂಗಾಂಗಗಳನ್ನು ದಾನ ಮಾಡಿದ್ದರೂ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗೆ ತಗುಲಿರುವ ವೆಚ್ಚ ಭರಿಸುವಂತೆ ಕೇಳಿದ್ದರು.
ಆದರೆ, ಇಳವರಸನ್ ಪಾಲಕರು ಹಾಗೂ ವಿವಿಧ ಸಂಘಟನೆಗಳು ಆಸ್ಪತ್ರೆ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು. ಇದಕ್ಕೆ ಮಣಿದ ಆಸ್ಪತ್ರೆ ಕೊನೆಗೆ ಶವ ಕೊಂಡೊಯ್ಯಲು ಅನುಮತಿ ನೀಡಿತು.
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೃದಯ ತೆಗೆದ ನಂತರ ಬೇರೆ ವ್ಯಕ್ತಿಯ ದೇಹಕ್ಕೆ ಬೇಗ ಕಸಿ ಮಾಡಿದರೆ ಶಸ್ತ್ರಚಿಕಿತ್ಸೆ ಯಶಸ್ಸಾಗುತ್ತದೆ. ಬಾಳಿಕೆಯೂ ಹೆಚ್ಚು ಕಾಲ ಇರುತ್ತದೆ.
- ಡಾ. ಭಗೀರಥ, ಹೃದ್ರೋಗ ತಜ್ಞ, ನಾರಾಯಣ ಹೃದಯಾಲಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT