ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಸೋಮವಾರ ಮತ್ತೆ ಏಳು ರೈತರು ಸಾವಿಗೆ ಶರಣು

ಸಾಲ ಎಂಬ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಾವಿನ ಸರಣಿ ರಾಜ್ಯದಲ್ಲಿ ಮುಂದು ವರಿದಿದ್ದು, ಸೋಮವಾರ ಹಾಸನ ಜಿಲ್ಲೆಯ ಮೂವರು...

ಬೆಂಗಳೂರು: ಸಾಲ ಎಂಬ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಾವಿನ ಸರಣಿ ರಾಜ್ಯದಲ್ಲಿ ಮುಂದು ವರಿದಿದ್ದು, ಸೋಮವಾರ ಹಾಸನ ಜಿಲ್ಲೆಯ ಮೂವರು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಸಾವಿಗೆ ಯತ್ನಿಸಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೆಣ್ಣೂಕೂಗಳಲೆ ಗ್ರಾಮದ ರೈತ ಕೇಶವಮೂರ್ತಿ (47) ವಿಷ ಸೇವಿಸಿದ್ದಾರೆ. ಅವರು ಗ್ರಾಮೀಣ ಬ್ಯಾಂಕ್‍ನಿಂದ ರೂ.3 ಲಕ್ಷ ಕೈಸಾಲ ಮಾಡಿದ್ದರು.

ಚನ್ನರಾಯಪಟ್ಟಣ ತಾಲೂಕಿನ ದೊಡ್ಡೇರಿಯ ಶಿವಣ್ಮಗೌಡ (70) ವಿಷ ಸೇವಿಸಿದ್ದಾರೆ. ಗ್ರಾಮೀಣ ಬ್ಯಾಂಕ್ ಹಾಗೂ ಕೈಸಾಲವಾಗಿ ಸುಮಾರು  4 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಬೇಲೂರು ತಾಲೂಕಿನ ಹಳೇಬೀಡಿನ ಬಂಡಿಲಕ್ಕನಕೊಪ್ಪಲಿನ ಜಗದೀಶ್ ಅಲಿಯಾಸ್ ಜಗಾನಾಯಕ (38) ನೇಣಿಗೆ ಕೊರಳೊಡ್ಡಿದ್ದಾರೆ. 20 ಗುಂಟೆ ಜಮೀನಿನಲ್ಲಿ ತರಕಾರಿ ಬೆಳೆದಿದ್ದ ಅವರಿಗೆ 3 ಲಕ್ಷದವರೆಗೆ ಸಾಲವಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಎಸ್.ಐ.ಹಾಗಲ ಹಳ್ಳಿಯ ರೈತ ಸಣ್ಣಬೋರೇಗೌಡ (45) ನೇಣು ಬಿಗಿದುಕೊಂಡಿ ದ್ದಾರೆ. ಹೈನುಗಾರಿಕೆಗಾಗಿ ಇವರು ಈಚೆಗೆ ಕೊಂಡಿದ್ದ ಎರಡು ಹಸುವಿನಲ್ಲಿ ಒಂದು ಮೃತಪಟ್ಟಿತ್ತು. 3 ಲಕ್ಷ ಸಾಲ ಇದ್ದು, ಕಬ್ಬಿನ ಬೆಳೆ ನೀರಿಲ್ಲದೆ ಒಣಗಿತ್ತು. ಹಾವೇರಿಯ ಹಿರೇಕೆರೂರು ತಾಲೂಕಿನ ಮೈದೂರಿನ ರೈತ ಗಿರೀಶ್ ಬಳ್ಳೇರ (36) ತಮ್ಮ ಹೊಲದಲ್ಲೇ ನೇಣಿಗೆ ಶರಣಾಗಿದ್ದಾರೆ. ಶುಂಠಿ ಬೇಸಾಯ ಕೈಕೊಟ್ಟಿತ್ತು. ರೂ.4.70 ಲಕ್ಷ ಸಾಲವಿತ್ತು. ಮಾನವಿ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ಚನ್ನಬಸವ (30) ಕ್ರಿಮಿನಾಶಕ ಸೇವಿಸಿದ್ದಾರೆ.
ಇವರಿಗೆ ಲಕ್ಷಕ್ಕೂ ಹೆಚ್ಚು ಕೃಷಿ ಸಾಲವಿತ್ತು. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮುಂಡಗೋಡಿನ ರೈತ ಫಕ್ಕೀರಪ್ಪ ರಾಮಣ್ಣ ಸಿರಗೇರಿ (40) ಸೋಮವಾರ ಹುಬ್ಬಳ್ಳಿ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಆತ್ಮಹತ್ಯೆ ಯತ್ನ: ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ದೇವೇಂದ್ರಪ್ಪ (39) ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಖಾಸಗಿ ಲೇವಾದೇವಿಗಾರರಿಂದ ರೂ. 2 ಲಕ್ಷ ಹಾಗೂ ಕಾರ್ಪೋರೇಷನ್  ಬ್ಯಾಂಕ್‍ನಲ್ಲಿ ರೂ.75 ಸಾವಿರ ಸಾಲ ಮಾಡಿದ್ದರು.

ಹಳ್ಳಿಹಳ್ಳಿಗೆ ಸಿಎಂ ಸಂದೇಶ
ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಹಳ್ಳಿ ಹಳ್ಳಿಗೆ ತಮ್ಮ ಸಂದೇಶ ರವಾನಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ರೈತ ಬಂಧುಗಳೇ ಸಮಸ್ಯೆಗೆ ಸಾವು ಪರಿಹಾರವಲ್ಲ. ಸರ್ಕಾರ ನಿಮ್ಮ ಜತೆಗೆ ಇದೆ. ನಿಮ್ಮ ಸಂಕಟ ನನಗೂ ನೋವು ತಂದಿದೆ. ರೈತರ ಸಾವಿಗೆ ಸಾಂತ್ವನ ಹೇಳುವುದಕ್ಕೆ ನನ್ನ ಬಳಿ ಶಬ್ದವಿಲ್ಲ. ನಿಮ್ಮ ನೆರವಿಗೆ ನಾನು ಸದಾ ಸಿದ್ಧ. ದುಡುಕಿ ಆತ್ಮಹತ್ಯೆಗೆ ಶರಣಾಗಬೇಡಿ ಎಂಬ ಸಂದೇಶವನ್ನು ರಾಜ್ಯದ 7,000 ಹಳ್ಳಿಗಳಿಗೆ ಮುಟ್ಟಿಸುವುದಕ್ಕೆ ಅವರು ಮುಂದಾಗಿದ್ದಾರೆ. ವಾರ್ತಾ ಇಲಾಖೆಯ ಮೂಲಕ ತಮ್ಮ ಸಂದೇಶವನ್ನು ದೃಶ್ಯೀಕರಿಸಿದ್ದು, ಆ.1ರಿಂದ ರಾಜ್ಯದ 7,000 ಹಳ್ಳಿಗಳಿಗೆ ಮುಖ್ಯಮಂತ್ರಿಗಳ ಆಡಿಯೋ ಮತ್ತು ವಿಡಿಯೋ ಸಂದೇಶ ಹೊತ್ತ ವಾಹನಗಳು ಪ್ರಯಾಣ ಬೆಳೆಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!