ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಲೋಕಾ ಅಧಿಕಾರ ಸರ್ಕಾರವೇ ಸುಪ್ರೀಂ

ಲೋಕಾಯುಕ್ತರು ದುರಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೊಂದಿರುವ ಅಧಿಕಾರ ಕಿತ್ತುಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ತೆರೆದ ಮನಸು ಹೊಂದಿದ್ದು, ಗುರುವಾರದಿಂದ ಆರಂಭಗೊಳ್ಳುವ ವಿಶೇಷ ಅಧಿವೇಶನದಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ...

ಬೆಂಗಳೂರು: ಲೋಕಾಯುಕ್ತರು ದುರಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೊಂದಿರುವ ಅಧಿಕಾರ ಕಿತ್ತುಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ತೆರೆದ ಮನಸು ಹೊಂದಿದ್ದು, ಗುರುವಾರದಿಂದ ಆರಂಭಗೊಳ್ಳುವ ವಿಶೇಷ ಅಧಿವೇಶನದಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ಮೊದಲ ಬಾರಿಗೆ ತಂದ ಲೋಕಾಯುಕ್ತ ತಿದ್ದುಪಡಿ ವಿಚಾರದಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿತ್ತು. ಆದರೆ, ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ತಿದ್ದುಪಡಿ ವಿಧೇಯಕ ಮಂಡನೆ ಅಸಾಧ್ಯವಾದ್ದರಿಂದ, ಲೋಕಾಯುಕ್ತ ನೇಮಕ ಮತ್ತು ಪದಚ್ಯುತಿ ತಿದ್ದುಪಡಿಗೆ ಮಾತ್ರ ಇದನ್ನು ಸೀಮಿತಗೊಳಿಸಿ ಪರಿಷ್ಕೃತ ಪ್ರತಿ ತಲುಪಿಸಲಾಗಿತ್ತು. ಆದರೆ, ಈ ತಿದ್ದುಪಡಿ ವಿಧೇಯಕದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸರ್ಕಾರದ ವಾದವಾಗಿದ್ದು, ಲೋಕಾಯುಕ್ತದಲ್ಲಿ ನಿಯತವಾಗಿರುವ ದುರಾಡಳಿತ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಕಸಿದುಕೊಳ್ಳುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಈಗ ಮತ್ತೆ ಮಂಥನ ನಡೆಯುತ್ತಿದೆ.

ಏಕೀಕೋಪ?: ರಾಜ್ಯ ಸರ್ಕಾರದ ಪ್ರಕಾರ ಲೋಕಾಯುಕ್ತಕ್ಕೆ ದುರಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿರುವುದರಿಂದಲೇ ಸಂಸ್ಥೆಯ ಒಳಗಡೆ ಭ್ರಷ್ಟಾಚಾರ ನಡೆಯಲು ಅವಕಾಶ ನೀಡಿದಂತಾಗಿದೆ. ಲೋಕಾಯುಕ್ತಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ) ಮತ್ತು ಲೋಕಾಯುಕ್ತ ಕಾಯ್ದೆ (ಲೋಕಾಯುಕ್ತ ಆ್ಯಕ್ಟ್ ) ಪ್ರಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಅಧಿಕಾರ ಇದೆ. ಇದರ ಜತೆಗೆ ಬೇರೆ ರಾಜ್ಯಗಳಲ್ಲಿ ಇಲ್ಲದಂಥ ದುರಾಡಳಿತ ಮತ್ತು ಸ್ವಜನಪಕ್ಷಪಾತದ ವಿರುದ್ಧವೂ ಅದು ಶಿಸ್ತು ಕ್ರಮ
ತೆಗೆದುಕೊಳ್ಳಬಹುದು. ಕಾನೂನಿನ ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸರ್ಕಾರದ ಅಂಬೋಣ. ಲೋಕಾಯುಕ್ತ ನ್ಯಾ.ವೈ. ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್, ಪಿಆರ್‍ಒ ಸೈಯದ್ ರಿಯಾಜ್, ಪತ್ರಕರ್ತ ಶ್ರೀನಿವಾಸ್‍ಗೌಡ ಸೇರಿದಂತೆ ಈಗ ಲೋಕಾಯುಕ್ತದ ಬಲೆಗೆ ಬಿದ್ದ ಆರೋಪಿಗಳು ಯಾವುದೇ ದಾಖಲೆ ಸಿಗದಂತೆ ಕೃತ್ಯ ಎಸಗಿರುವುದಕ್ಕೆ ಇದರಿಂದ ಸಾಧ್ಯವಾಗಿದೆ. ತನ್ನ ಕರ್ತವ್ಯದಲ್ಲಿ ಚ್ಯುತಿ ಎಸಗಿದ ಅಧಿಕಾರಿಯನ್ನು ಕರೆಸಿ, ಬೆದರಿಸಿ ಸುಲಿಗೆ ಮಾಡುವುದಕ್ಕೆ ಇದರಿಂದ ಅನುಕೂಲವಾಗಿದೆ. ಲೋಕಾಯುಕ್ತದಲ್ಲಿ ಇದೇ ಅಧಿಕಾರವನ್ನು ಮುಂದುವರಿಸುವುದರಿಂದ ಭವಿಷ್ಯದಲ್ಲಿ ಇಂಥ ಕೃತ್ಯಗಳು ಮರುಕಳಿಸಬಹುದೆಂಬುದು ಕಾನೂನು ಇಲಾಖೆ ತಜ್ಞರ ಅಭಿಪ್ರಾಯ.

ನಷ್ಟವೇನು?: ಆದರೆ, ಸರ್ಕಾರದ ಈ ಕ್ರಮ, ನೆಗಡಿಯಾಗಿದೆ ಎಂದು ಮೂಗು ಕುಯ್ದುಕೊಂಡಂತೆ. ಏಕೆಂದರೆ ನಿವೃತ್ತ ಲೋಕಾಯುಕ್ತರಾದ ನ್ಯಾ. ಸಂತೋಷ್ ಹೆಗ್ಡೆ ಹಾಗೂ ನ್ಯಾ. ಎನ್.ವೆಂಕಟಾಚಲ ಅವರು ಲೋಕಾಯುಕ್ತದಲ್ಲಿ ಅಡಕವಾಗಿರುವ ಈ ಕಾನೂನಿನ ಬಲದಿಂದಲೇ ಜನಸಾಮಾನ್ಯರಿಗೆ ಹತ್ತಿರವಾಗಿದ್ದರು. ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸಿದ್ದರು. ಸಾರ್ವಜನಿಕ ದುಃಖ-ದುಮಾ್ಮನಗಳಿಗೆ ಸಂಬಂಧಿಸಿದಂತೆ ದಾಖಲಾಗುವ ಪ್ರಕರಣಗಳ ಆಧಾರದ ಮೇಲೆ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಕೆಲಸ ಮಾಡಿಸಲು ಇದರಿಂದ ಸಾಧ್ಯವಾಗುತ್ತಿತ್ತು. ಆದರೆ, ನ್ಯಾ.ಭಾಸ್ಕರ್ ರಾವ್ ಅವಧಿಯಲ್ಲಿ ಇದೇ ನಿಯಮ ದುರ್ಬಳಕೆಯಾಗಿದೆ. ಹೀಗಾಗಿ ಇದೇ ಅವಕಾಶ ಬಳಸಿಕೊಂಡು ಸರ್ಕಾರಿ ಯಂತ್ರದ ಮೇಲೆ ಲೋಕಾಯುಕ್ತರು ಬಿಗಿಯುವ ಕುಣಿಕೆಯನ್ನು ಕತ್ತರಿಸಿ ಹಾಕುವುದಕ್ಕೆ ಸರ್ಕಾರ ಈಗ ಸದ್ದಿಲ್ಲದೇ ಚಿಂತನೆ ನಡೆಸುತ್ತಿದೆ.

ಒಂದೊಮ್ಮೆ ಸರ್ಕಾರ ಈ ರೀತಿ ಕಾನೂನು ತಿದ್ದುಪಡಿ ಮಾಡುವುದರಿಂದ ಲೋಕಾಯುಕ್ತ ಸಂಸ್ಥೆಯ ಹೆಸರೇ ಬದಲಾಯಿಸಬೇಕಾಗುತ್ತದೆ. ಏಕೆಂದರೆ ಈ ಹೆಸರಿನಲ್ಲೇ ಜನತೆಯ ಸಮಸ್ಯೆ ಬಗ್ಗೆ ಸ್ಪಂದಿಬೇಕೆಂಬ ಆಶಯ ಅಡಗಿದೆ. 1984ಕ್ಕೆ ಮೊದಲು ಕೇವಲ ವಿಜಿಲೆನ್ಸ್ ಸ್ವರೂಪ ಹೊಂದಿದ್ದ ಸಂಸ್ಥೆಗೆ ಲೋಕ (ಜನತೆ) ಆಯುಕ್ತ ಎಂದು ಮರುನಾಮಕರಣ ಮಾಡಲಾಗಿತ್ತು. ಹೀಗಾಗಿ ಜನಸಾಮಾನ್ಯರ ದಿನ ನಿತ್ಯದ ಸಮಸ್ಯೆಗೆ ಪರಿಹಾರ ದೊರಕುವುದು ಈ ತಿದ್ದುಪಡಿಯಿಂದ ಸ್ಥಗಿತಗೊಳ್ಳುತ್ತದೆ. ಲೋಕಾಯುಕ್ತಕ್ಕೆ ಇರುವಷ್ಟು ಹಲ್ಲನ್ನು ಮುಕ್ಕು ಮಾಡುವ ಬಗ್ಗೆ ಸದ್ದಿಲ್ಲದೆ ಪ್ರಯತ್ನ ಇದೇ ಅಧಿವೇಶನದಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ