ಏಕಮುಖ ಸಂಚಾರಕ್ಕೆಸವಾರರು ಕಸಿವಿಸಿ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಏಕಮುಖ ಸಂಚಾರಕ್ಕೆಸವಾರರು ಕಸಿವಿಸಿ

ಸದಾ ವಾಹನ ದಟ್ಟಣೆಯಿಂದ ಕೂಡಿರುವ ಸುಬ್ಬಣ್ಣ ವೃತ್ತದಿಂದ ಆನಂದರಾವ್ ವೃತ್ತದವರೆಗಿನ ಮಾರ್ಗವನ್ನು ಏಕಮುಖ ಸಂಚಾರ ಮಾರ್ಗವಾಗಿ ಪರಿವರ್ತಿಸಿರುವ ಕಾರಣ ಆನಂದ್‍ರಾವ್ ವೃತ್ತದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು...

ಬೆಂಗಳೂರು: ಸದಾ ವಾಹನ ದಟ್ಟಣೆಯಿಂದ ಕೂಡಿರುವ ಸುಬ್ಬಣ್ಣ ವೃತ್ತದಿಂದ ಆನಂದರಾವ್ ವೃತ್ತದವರೆಗಿನ ಮಾರ್ಗವನ್ನು ಏಕಮುಖ ಸಂಚಾರ ಮಾರ್ಗವಾಗಿ ಪರಿವರ್ತಿಸಿರುವ ಕಾರಣ ಆನಂದ್‍ರಾವ್ ವೃತ್ತದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ಬುಧವಾರದಿಂದ ತಾತ್ಕಾಲಿಕವಾಗಿ ಗಾಂಧಿನಗರ 5ನೇ ಮುಖ್ಯರಸ್ತೆಯಿಂದ ಬರುವ ವಾಹನಗಳು ನೇರವಾಗಿ ಶಿವಾನಂದ ವೃತ್ತದ ಕಡೆ ತೆರಳಲು ನಿಷೇಧಿಸಲಾಗಿತ್ತು. ಬಲ ತಿರುವು ಪಡೆದು ಶೇಷಾದ್ರಿ ರಸ್ತೆಯಲ್ಲಿ ತೆರಳಲು ಅವಕಾಶ ಇರಲಿಲ್ಲ. ಹೀಗಾಗಿ, ಎಲ್ಲ ವಾಹನಗಳು ಶಿವಾನಂದ ವೃತ್ತದ ಕಡೆ ತೆರಳಿ ಅಲ್ಲಿಂದ ಎಡ ತಿರುವು ಪಡೆದು ಸುಬೇದಾರ್ ಛತ್ರಂ ರಸ್ತೆ, ಬಲ ಪಥದಲ್ಲಿ ಸಂಚರಿಸುವ ವಾಹನಗಳು ಬಲ ತಿರುವು ಪಡೆದು ಕಿನೋ ಚಿತ್ರಮಂದಿರ ಹಾಗೂ ಹಳೇ ಜೆಡಿಎಸ್ ಕಚೇರಿ ಮೂಲಕ ತಾವು ಹೊರಡುವ ಸ್ಥಳಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು.

ಮೊದಲ ದಿನ ವಾಹನ ಸವಾರರು ಗೊಂದಲಕ್ಕೆ ಒಳಗಾದರು. ಅಲ್ಲದೇ, ಸುಬ್ಬಣ್ಣ ವೃತ್ತದ ಮೇಲೆ ಬಿದ್ದಿರುವ ಕಾರಣ ಈ ರಸ್ತೆಯಲ್ಲಿ ಬೆಳಗ್ಗೆಯಿಂದಲೂ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ದಟ್ಟಣೆ ಉಂಟಾಗಿತ್ತು. ಕಿನೋ ಚಿತ್ರಮಂದಿರ, ಖೋಡೆ ವೃತ್ತದ ಕಡೆಯಿಂದ ಬರುವ ವಾಹನಗಳು ಹಳೇ ಜೆಡಿಎಸ್ ಕಚೇರಿ ಕಡೆಯಿಂದಲೇ ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ ಹಾಗೂ ರೇಸ್ ಕೋರ್ಸ್ ರಸ್ತೆಗೆ ತೆರಳಲು ಅವಕಾಶ ಕಲ್ಪಿಸಿರುವುದರಿಂದ ಎಲ್ಲ ವಾಹನಗಳ ಒತ್ತಡ ಶಿವಾನಂದ ವೃತ್ತದ ಮೇಲೆ ಬಿದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video