ಅಬ್ದುಲ್ ಕಲಾಂ 
ಜಿಲ್ಲಾ ಸುದ್ದಿ

ಡಾ. ಕಲಾಂ ಶ್ರೇಷ್ಠ ಜಾತ್ಯತೀತ ಮಾನವತಾವಾದಿ: ಸ್ವಾಮಿ ಬುದ್ಧಾನಂದ

ಎಲ್ಲರ ಚಿತ್ತಪರಿಧಿಯನ್ನೂ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆವರಿಸಿದ್ದಾರೆ. ಗಣ್ಯರೆಲ್ಲರೂ ಕಲಾಂ ಅವರೊಂದಿಗೆ ನಡೆಸಿದ್ದ ಮಾತುಕತೆಯನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು : ಎಲ್ಲರ ಚಿತ್ತಪರಿಧಿಯನ್ನೂ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆವರಿಸಿದ್ದಾರೆ. ಗಣ್ಯರೆಲ್ಲರೂ ಕಲಾಂ ಅವರೊಂದಿಗೆ ನಡೆಸಿದ್ದ ಮಾತುಕತೆಯನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಹಿಮಾಚಲ ಪ್ರದೇಶದ ಬೌದ್ಧಮತದ ಸಂಸದರ ನಿಯೋಗವನ್ನು ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಅವರನ್ನು ಭೇಟಿ ಮಾಡಲು ಹೋಗಿದ್ದೆವು,  "ಬುದ್ಧಿಸ್ಟ್ ಪೀಸ್ ವಿಶ್ವವಿದ್ಯಾನಿಲಯ(ಬೌದ್ಧ ಶಾಂತಿ ವಿಶ್ವವಿದ್ಯಾನಿಲಯ) ಸ್ಥಾಪನೆಯ ಬಗ್ಗೆ ಅಂದಿನ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರೊಂದಿಗೆ ಮಾತುಕತೆ ನಡೆಸಿದ್ದಾಗ, ಈ ಯೋಜನೆಯನ್ನು ಕಲಾಂ ತುಂಬಾ ಮೆಚ್ಚಿಕೊಂಡಿದ್ದರು".  ಎಂದು ಗಾಂಧಿ ಪೀಸ್ ಮಿಷನ್ ಯೋಜನೆಯ ಸ್ಥಾಪಕ ಸ್ವಾಮಿ ಬುದ್ಧಾನಂದ, ಅಬ್ದುಲ್ ಕಲಾಂ ಅವರನ್ನು ಸ್ಮರಿಸಿದ್ದಾರೆ.           

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಬೌದ್ಧ ಶಾಂತಿ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದನ್ನು ಕಲಾಂ ಮೆಚ್ಚಿಕೊಂಡಿದ್ದಷ್ಟೇ ಅಲ್ಲದೇ ಆಲಿಘರ್ ಮುಸ್ಲಿ ವಿವಿ ಹಾಗೂ ಹಿಂದೂ ಬನಾರಸ್ ವಿವಿಯ ಮಾದರಿಯಲ್ಲಿರಲಿ ಎಂದು ಮೌಲ್ಯಯುತ ಸಲಹೆಯನ್ನೂ ನೀದಿದ್ದರು ಎಂದು ಸ್ವಾಮಿ ಬುದ್ಧಾನಂದ ಹೇಳಿದ್ದಾರೆ. ಭಾರತಕ್ಕೆ ಮುಂದಿನ ದಿನಗಳಲ್ಲಿ ಇಂಥ ವಿಶ್ವವಿದ್ಯಾನಿಲಯಗಳ ಅವಶ್ಯಕತೆ ಇದೆ ಎಂದು ಕಲಾಂ ಹೇಳಿದ್ದರು. ಕಲಾಂ ಅವರಿಗೆ ಜಾತ್ಯತೀತ ಮಾನವತಾವಾದಿ ದೃಷ್ಟಿಕೋನವಿತ್ತು, ಕೇವಲ ವೈಜ್ಞಾನಿಕ ದೃಷ್ಟಿಕೋನ ಮಾತ್ರ ಕಲಾಂ ಅವರನ್ನು ರೂಪಿಸಿಲ್ಲ ಬದಲಾಗಿ ಜಾತ್ಯಾತೀತ ಮಾನವತಾವಾದಿ ದೃಷ್ಟಿಕೋನವೂ ಅವರನ್ನು ರೂಪಿಸಿತ್ತು, ಭಾರತದ ಪ್ರಬುದ್ಧ ನಾಗರಿಕರಿಗೆ ಕಲಾಂ ಸ್ಪೂರ್ತಿಯಾಗಿರಲಿದ್ದಾರೆ ಎಂದು ಬುದ್ಧಾನಂದ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!