ಅಪಘಾತದಲ್ಲಿ ಸಾವಿಗೀಡಾದ ಯುವತಿ ಅಶ್ವಿನಿ 
ಜಿಲ್ಲಾ ಸುದ್ದಿ

ಅಪಘಾತ: ಯುವತಿ ಸಾವು

ಮಂಗಳವಾರ ತಡರಾತ್ರಿ ಹೆಣ್ಣೂರು ರಿಂಗ್ ರಸ್ತೆಯಲ್ಲಿ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಯುವತಿ ಮೃತಪಟ್ಟು ಬೈಕ್ ಓಡಿಸುತ್ತಿದ್ದ ಯುವಕ ಗಾಯಗೊಂಡಿದ್ದಾನೆ.ಬಿ.ಟೆಕ್ ಪೂರ್ಣಗೊಳಿಸಿ ನಗರದಲ್ಲಿ ಉದ್ಯೋಗ ಹುಡುಕಲು ಬಂದಿದ್ದ ಹೈದರಾಬಾದ್ ಮೂಲದ ಅಶ್ವಿನಿ(24) ಮೃತರಾಗಿದ್ದು...

ಬೆಂಗಳೂರು: ಮಂಗಳವಾರ ತಡರಾತ್ರಿ ಹೆಣ್ಣೂರು ರಿಂಗ್ ರಸ್ತೆಯಲ್ಲಿ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಯುವತಿ ಮೃತಪಟ್ಟು ಬೈಕ್ ಓಡಿಸುತ್ತಿದ್ದ ಯುವಕ ಗಾಯಗೊಂಡಿದ್ದಾನೆ. ಬಿ.ಟೆಕ್ ಪೂರ್ಣಗೊಳಿಸಿ ನಗರದಲ್ಲಿ ಉದ್ಯೋಗ ಹುಡುಕಲು ಬಂದಿದ್ದ ಹೈದರಾಬಾದ್ ಮೂಲದ ಅಶ್ವಿನಿ(24) ಮೃತರಾಗಿದ್ದು, ಬೈಕ್ ಚಲಾಯಿಸುತ್ತಿದ್ದ ಸಿದ್ದಾರ್ಥ
ಎಂಬಾತನಿಗೆ ತೀವ್ರ ಗಾಯಗಳಾಗಿವೆ. ಅವರನ್ನು ವಸಂತನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾರ್ಥ ಹಾಗೂ ಅಶ್ವಿನಿ ಹೈದರಾಬಾದ್‍ನ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಕೆಲಸ ಹುಡುಕಿಕೊಂಡು ಅಶ್ವಿನಿ ನಗರಕ್ಕೆ ಬಂದಿದ್ದು ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಮಂಗಳವಾರ ಇಬ್ಬರು ಪ್ರಕೃತಿ ಬಡಾವಣೆಯಲ್ಲಿರುವ ಹೊಟೇಲ್‍ವೊಂದಕ್ಕೆ ಊಟಕ್ಕೆ ಹೋಗಿದ್ದು ರಾತ್ರಿ 12.30ರ ಸುಮಾರಿಗೆ ವಾಪಸಾಗುತ್ತಿದ್ದರು. ನಾಗವಾರ ಕಡೆಯಿಂದ ಹೆಣ್ಣೂರು ಕಡೆ ಬೈಕ್‍ನಲ್ಲಿ ಹೋಗತ್ತಿದ್ದಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದಿದೆ.

ತೀವ್ರವಾಗಿ ಗಾಯಗೊಂಡು ಅಶ್ವಿನಿ ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಸಿದ್ದಾರ್ಥನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಡಿಕ್ಕಿ ಹೊಡೆದ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಸ್ತೆಯ ಜಂಕ್ಷನ್ ಗಳಲ್ಲಿರುವ ಸಿಸಿ ಕ್ಯಾಮರಾ ಬಳಸಿ ಅಪಘಾತ ಮಾಡಿದ ವಾಹನಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ