ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿ ಸಾವು (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ವಿದ್ಯಾರ್ಥಿ ಸಾವು

ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲಿ ಆಟವಾಡುವಾಗ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಾಗಲೂರಿನ ನಾರ್ಥ್ ಡೆಲ್ಲಿ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದಿದೆ...

ಬೆಂಗಳೂರು: ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಆವರಣದಲ್ಲಿ ಆಟವಾಡುವಾಗ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಾಗಲೂರಿನ ನಾರ್ಥ್ ಡೆಲ್ಲಿ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದಿದೆ.

ಪ್ರಕಾಶ್ ಜಾನ್ ಮ್ಯಾಥ್ಯುವ್ಸ್ (15) ಮೃತ ವಿದ್ಯಾರ್ಥಿ. ಶಾಲಾ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಊಟದ ಸಮಯದಲ್ಲಿ ಸಹಪಾಠಿಗಳ ಜತೆ ವಾಲಿಬಾಲ್ ಆಟವಾಡುವಾಗ ಪ್ರಕಾಶ್ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಶಾಲಾ ಸಿಬ್ಬಂದಿ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪ್ರಕಾಶ್ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹೆಣ್ಣೂರು ಸಮೀಪದ ಚಿಕ್ಕಗುಬ್ಬಿಯ ಮಾಪ್ಲೆ ಗ್ರೀನ್ ಅಪಾರ್ಟ್‍ಮೆಂಟ್‍ನಲ್ಲಿ ತಾಯಿ ರೀನಿ ಮೇರಿ ಜತೆ ಪ್ರಕಾಶ್ ವಾಸವಾಗಿದ್ದರು. ತಂದೆ ಜಾನ್ ಮ್ಯಾಥ್ಯುವ್ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಹಲವು ದಿನಗಳಿಂದ ಪ್ರಕಾಶ್ ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ. ಈ ಸಂಬಂಧ ಆತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದರೂ ಹೆಚ್ಚು ಶ್ರಮ ಬೇಕಾಗುವ ವಾಲಿಬಾಲ್ ಆಟವಾಡಿದ್ದೇ ಪ್ರಕಾಶ್ ಸಾವಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬಾಗಲೂರು ಠಾಣೆ ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ನೂತನ ಸಚಿವ ಸಂಪುಟ ರಚನೆ: ದೆಹಲಿಯಲ್ಲಿ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಮಾತುಕತೆ, ಸಹಭೋಜನ

ಮಧ್ಯಪ್ರಾಚ್ಯ ಬಿಕ್ಕಟ್ಟು, ದುರ್ಬಲ Monsoon ಆತಂಕ; Indian Stock Market ಭಾರಿ ಕುಸಿತ!

ಹೊಸ ವರ್ಷದಿಂದ ಎಲ್ಲ Kwality Walls ಐಸ್ ಕ್ರೀಮ್ ಗಳು ಹಾಲು ಆಧಾರಿತ: CEO Peter ter Kulve ಹೇಳಿಕೆ, ಹಾಗಾದ್ರೆ ಇಷ್ಟು ದಿನ ನಾವ್ ತಿಂದಿದ್ದೇನು?

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಆರು ಜನರ ಭೀಕರ ಹತ್ಯೆ

ಹಾರ್ದಿಕ್ ಪಾಂಡ್ಯ ಮುಂದಿನ ನಡೆ ಏನು! 2027 IPL ನಲ್ಲಿ ಯಾವ ತಂಡ ಸೇರಬಹುದು?

SCROLL FOR NEXT