ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜೂ.12-13ರಂದು ಅಂತಾರಾಷ್ಟ್ರೀಯ ಸುಧಾರಿತ ಕಂಪ್ಯೂಟಿಂಗ್ ಸಮಾವೇಶ

ಸುಧಾರಿತ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಬೋಧಕರ ಜ್ಞಾನವನ್ನು ವಿಸ್ತರಿಸುವ ಉದ್ದೇಶದೊಂದಿಗೆ ಜೂನ್...

ಕಾರ್ಯಕ್ರಮದಲ್ಲಿ ಬಿಎಂಎಸ್ಸಿಇ ಪ್ರಾಂಶುಪಾಲ ಡಾ.ಕೆ ಮಲ್ಲಿಕಾರ್ಜುನ್ ಬಾಬು, ಉಪ ಪ್ರಾಂಶುಪಾಲ ಜಿ.ಎನ್ ಶೇಖರ್ ಹಾಗೂ ಎಐಸಿಸಿ ಜನರಲ್ ಚೇರ್ ಡಾ. ರಾಧಿಕ ಕೆ ಆರ್ ಅವರು ಉಪಸ್ಥಿತರಿದ್ದರು.
Mainashree
Updated On : 5 Jun 2015, 4:05 am

ಬೆಂಗಳೂರು: ಸುಧಾರಿತ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಬೋಧಕರ ಜ್ಞಾನವನ್ನು ವಿಸ್ತರಿಸುವ ಉದ್ದೇಶದೊಂದಿಗೆ ಜೂನ್ 12-13ರಂದು 2015ರ ಅಂತಾರಾಷ್ಟ್ರೀಯ ಸುಧಾರಿತ ಕಂಪ್ಯೂಟಿಂಗ್ ಸಮಾವೇಶವನ್ನು ದೊಡ್ಡ ಬಸವನಗುಡಿಯ ಬಿಎಂಎಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಸಾಮಾಜಿಕ ನೆಟ್ವರ್ಕ್ ವಿಶ್ಲೇಷಣೆ, ಕೃತಕ ಬುದ್ಧಿವಂತಿಕೆ, ಅತ್ಯುನ್ನತ ಪ್ರದರ್ಶನ ಕಂಪ್ಯೂಟಿಂಗ್, ಸುಧಾರಿತ ಕಂಪ್ಯೂಟರ್ ನೆಟ್ ವರ್ಕ್ ಗಳು ಹಾಗೂ ಸುಧಾರಿತ ಆಲ್ಗೋರಿದಮ್ಸ್ ಕುರಿತು ಸಮಾವೇಶ ನಡೆಯಲಿದೆ ಎಂದು ಐಇಇಇ ಬೆಂಗಳೂರು ವಿಭಾಗದ ಅಧ್ಯಕ್ಷ ಎ. ರವಿಕಿರಣ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಬಿಎಂಎಸ್ಸಿಇ ಪ್ರಾಂಶುಪಾಲ ಡಾ.ಕೆ ಮಲ್ಲಿಕಾರ್ಜುನ್ ಬಾಬು, ಉಪ ಪ್ರಾಂಶುಪಾಲ ಜಿ.ಎನ್ ಶೇಖರ್ ಹಾಗೂ ಎಐಸಿಸಿ ಜನರಲ್ ಚೇರ್ ಡಾ. ರಾಧಿಕ ಕೆ ಆರ್ ಅವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement