ಸಂಜಯಗಾಂಧಿ ನಗರ ಕೊಳೆಗೇರಿಯಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ವಾಸಿಸುತ್ತಿರುವವರ ಅಹವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಿದರು, 
ಜಿಲ್ಲಾ ಸುದ್ದಿ

ಮೂಲಸೌಕರ್ಯ ಒದಗಿಸಿ

ಬಿಡಿಎ ಬಡಾವಣೆಗಳ ನಡುವೆ ಇರುವ 10 ಹಳ್ಳಿಗಳಿಗೆ ತನ್ನ ಹಣದಲ್ಲೇ ಮೂಲಸೌಕರ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ...

ಬೆಂಗಳೂರು: ಬಿಡಿಎ ಬಡಾವಣೆಗಳ ನಡುವೆ ಇರುವ 10 ಹಳ್ಳಿಗಳಿಗೆ ತನ್ನ ಹಣದಲ್ಲೇ ಮೂಲಸೌಕರ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತನ್ನ ಹಣದಲ್ಲೇ ಮೂಲಸೌಕರ್ಯ ಕಲ್ಪಿಸಲು ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆಗಳ ನಡುವೆ ಬರುವ ಈ 10 ಹಳ್ಳಿಗಳಿಗೆ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಲಭ್ಯವಾಗಿಲ್ಲ. ಬಿಡಿಎ ತನ್ನ ಖರ್ಚಿನಲ್ಲೇ ಮೂಲಸೌಕರ್ಯ ಒದಗಿಸಬೇಕು ಎಂದು ಸರ್ಕಾರ ತಿಳಿಸಿತ್ತು. 48 ಕೋಟಿ ವೆಚ್ಚದಲ್ಲಿ ಬಿಡಿಎ ಯೋಜನೆ ರೂಪಿಸಿದ್ದು, ಇದಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕು ಎಂದು ಬಿಡಿಎ ಮನವಿ ಮಾಡಿತ್ತು. ಆದರೆ ಸರ್ಕಾರದ ಹಣ ನೀಡಲು ಸಾಧ್ಯವಿಲ್ಲ, ಬಿಡಿಎ ತನ್ನ ಖರ್ಚಿನಲ್ಲೇ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

10 ಹಳ್ಳಿಗಳಿಗೆ ಮೂಲಸೌಕರ್ಯ ನೀಡಲು ಬಿಡಿಎ ಅಧಿಕಾರಿಗಳು ಸರ್ಕಾರಕ್ಕೆ ಅನುದಾನದ ಮನವಿ ಮಾಡಿದ್ದರು. ಆದರೆ ಈ ಯೋಜನೆಯನ್ನು ಬಿಡಿಎ ತನ್ನ ಹಣದಲ್ಲೇ ಮಾಡಬೇಕು
ಎಂದು ಸೂಚನೆ ನೀಡಲಾಗಿದೆ. ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಲ್ಲಿ 10 ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಿಲ್ಲ. ಬಿಡಿಎ ಬಡಾವಣೆಗಳ ನಡುವೆ ಈ ಪ್ರದೇಶ ಇರುವುದರಿಂದ
ಮೂಲಸೌಕರ್ಯ ನೀಡಲು ಸೂಚನೆ ನೀಡಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಲಿಂಕ್ ರಸ್ತೆ ನಿರ್ಮಾಣ:
ಹೆರೋಹಳ್ಳಿ ಕೆರೆ ಬಳಿಯ ಮಾಗಡಿ ಮುಖ್ಯರಸ್ತೆಯಿಂದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಗಳನ್ನು ಸಂಪರ್ಕಿಸಲು 150 ಅಡಿ ಅಗಲದ ಲಿಂಕ್ ರಸ್ತೆ ಕಾಮಗಾರಿ ಆರಂಭವಾಗಬೇಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳ ವೀಕ್ಷಣೆ ಮಾಡಿದರು.

ಹೆರೋಹಳ್ಳಿ ವಾರ್ಡ್‍ನಲ್ಲಿ ಲಿಂಕ್ ರಸ್ತೆಯನ್ನು 30.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.  1.33 ಕಿಮೀ ಉದ್ದದ ರಸ್ತೆಯಲ್ಲಿ 10.5 ಮೀ.ನ ಎರಡು ಕ್ಯಾರೇಜ್ ವೇ ನಿರ್ಮಿಸಲಾಗುವುದು. ಎರಡೂ ಬದಿಗಳಲ್ಲಿ 7.5 ಮೀ. ಅಗಲದ ಸರ್ವಿಸ್ ರಸ್ತೆ ನಿರ್ಮಾಣವಾಗಲಿದೆ. ಕೆಂಗೇರಿ ಉಪನಗರದಿಂದ ಮಾಗಡಿ ರಸ್ತೆಯನ್ನು ಸಂಪರ್ಕಿಸಲು ಈ ರಸ್ತೆ ಸಮೀಪವಾಗಿದ್ದು, ಇದರಿಂದ ಸ್ಥಳೀಯ ಪ್ರದೇಶಗಳಲ್ಲಿರುವ 21,197 ನಿವೇಶನದಾರರಿಗೆ ಹಾಗೂ 15 ಹಳ್ಳಿಗಳ ನಿವಾಸಿಗಳ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕ್ರಿಮಿನಲ್ ಮೊಕದ್ದಮೆಗೆ ಸೂಚನೆ:
ದುಬಾಸಿಪಾಳ್ಯ ಕೆರೆಯ ಸುತ್ತ ಬೇಲಿ ಹಾಕಿ ಭದ್ರಪಡಿಸಬೇಕು. ಒತ್ತುವರಿ ತೆರವುಗೊಳಿಸಿ ದಾಖಲೆಗಳನ್ನು ತಿದ್ದಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ„ಕಾರಿ ವಿ.ಶಂಕರ್ ಅವರಿಗೆ ಸೂಚಿಸಿದರು. 23.35 ಎಕರೆಯಲ್ಲಿರುವ ದುಬಾಸಿಪಾಳ್ಯ ಕೆರೆಯಲ್ಲಿ 9 ಎಕರೆ ಒತ್ತುವರಿಯಾಗಿದೆ. ಬಿಡಿಎ ನಿರ್ವಹಿಸುತ್ತಿರುವ ಕೆರೆಯಲ್ಲಿ ಒಂದು ಬದಿ ಉದ್ಯಾನ, ಕೆಲವೆಡೆ ತೆಂಗಿನ ಮರಗಳನ್ನು ನೆಟ್ಟು ಒತ್ತುವರಿ ಮಾಡಲಾಗಿದೆ ಎಂದು ಶಾ¸ಕ ಎಸ್.ಟಿ.ಸೋಮಶೇಖರ್ ವಿವರಿಸಿದರು.

ಹೆರೋಹಳ್ಳಿ ಕೆರೆಗೆ ಕೊಳಚೆ ನೀರು ಸೇರುತ್ತಿದ್ದು, ಇದನ್ನು vಡೆಗಟ್ಟಿ ರಾಜಕಾಲುವೆ ದುರಸ್ತಿ ಮಾಡಲಾಗುವುದು ಎಂದು ಸಿಎಂ ಸೂಚಿಸಿದರು. ಕೆಂಗೇರಿ ಕೆರೆ ಅಬಿsವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಬಿಎಂಆರ್‍ಸಿಎಲ್ 10 ಕೋಟಿ ವೆಚ್ಚದಲ್ಲಿ ಎಸ್‍ಟಿಪಿ ನಿರ್ಮಿಸಲು ಮುಂದೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದರು.

ಪೀಣ್ಯ ರಸ್ತೆ ಅಭಿವೃದ್ಧಿಗೆ 100 ಕೋಟಿ ಯೋಜನೆ:
ಪೀಣ್ಯ ಕೈಗಾರಿಕಾ ಸಂಘಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದಸ್ಯರ ಜೊತೆ ಚರ್ಚಿಸಿದರು. ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕಿದ್ದು, ಮುಖ್ಯವಾಗಿ ರಸ್ತೆಗಳ ಅಭಿವೃದ್ಧಿ ಮಾಡಬೇಕಿದೆ. ರಸ್ತೆಗಳಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ಹಾಕಲಾಗುತ್ತಿದ್ದು, ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ರಸ್ತೆ ನಿರ್ಮಾಣವಾದರೂ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ' ಎಂದು ಸಂಘದ ಅಧ್ಯಕ್ಷ ವೆಂಕಟೇಶ್ ಗೋಳು ತೋಡಿಕೊಂಡರು.

ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ಅಂಡರ್‍ಪಾಸ್:
ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ 81 ಕೋಟಿ ವೆಚ್ಚದಲ್ಲಿ ಅಂಡರ್‍ಪಾಸ್ ಹಾಗೂ ಮೇಲ್ಸೇತುವೆ ನಿರ್ಮಿಸುತ್ತಿದ್ದು, ಒಂದು ತಿಂಗಳಲ್ಲಿ ಮೇಲ್ಸೇತುವೆ ಉದ್ಘಾಟನೆಯಾಗಲಿದೆ. ಅಂಡರ್‍ಪಾಸ್ ಕಾಮಗಾರಿಯ ನಿರ್ಮಾಣ ಇನ್ನೂ ಆರಂಭವಾಗಬೇಕಿದ್ದು, ಜಲಮಂಡಳಿಯ 3 ಪೈಪ್‍ಲೈನ್‍ಗಳನ್ನು ಇಲ್ಲಿಂದ ವರ್ಗಾಯಿಸಬೇಕಿದ್ದು, ಬಿಡಿಎ ಹಾಗೂ ಜಲಮಂಡಳಿ ಅಧಿಕಾರಿಗಳು ಶೀಘ್ರದಲ್ಲಿ ಕಾಮಗಾರಿ ನಡೆಸಬೇಕು ಎಂದು ಸೂಚಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!