ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಹಂಚಿಕೆ ಮಾಡಲಾದ ಸೀಟು ಹಂಚಿಕೆಯನ್ನು ವಿರೋಧಿಸಿರುವ ಹಲವು ವಿದ್ಯಾರ್ಥಿಗಳು ಸೋಮವಾರ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಇಟಿ ಸೀಟು ಹಂಚಿಕೆ ಕುರಿತಂತೆ ಅಸಮಧಾನದಿಂದ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳ ಗುಂಪೊಂದು ಪರೀಕ್ಷಾ ಪ್ರಾಧಿಕಾರ ಕಚೇರಿ ಬಳಿ ಬಂದು, ಇದ್ದಕ್ಕಿದ್ದಂತೆ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನ ನಡೆಸಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ಯತ್ನವನ್ನು ವಿಫಲವಾಗುವಂತೆ ಮಾಡಿದರು. ನಂತರ ಅಸಮಧಾನಗೊಂಡಿದ್ದ ಕೆಲವು ವಿದ್ಯಾರ್ಥಿಗಳು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಎನ್.ಗಂಗಾಧರಯ್ಯ ಅವರೊಂದಿಗೆ ವಾಗ್ವಾದಕ್ಕಿಳಿದರು. ಸೀಟಿ ಹಂಚಿಕೆ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆದಿಲ್ಲ, ಸೀಟು ಹಂಚಿಕೆಯಿಂದ ಹಲವು ವಿದ್ಯಾರ್ಥಿಗಳಿಗೆ ಮೋಸವಾಗಿದೆ ಎಂದು ಹೇಳಿದ ವಿದ್ಯಾರ್ಥಿಗಳ ಗುಂಪು ಮತ್ತೊಮ್ಮೆ ಸೀಟು ಹಂಚಿಕೆ ಕಾರ್ಯವಾಗಬೇಕೆಂದು ಪಟ್ಟುಹಿಡಿದು ಮತ್ತೆ ಪ್ರತಿಭಟನೆಯನ್ನು ಮುರಿಸಿದ್ದಾರೆ. .
ಸಿಇಟಿ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 3 ಸುತ್ತಿನ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದು ವಿದ್ಯಾರ್ಥಿಗಳಲ್ಲಿ ಅಸಮಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಧರಣಿ ಕುಳಿತಿದ್ದಾರೆ.