ಮ್ಯಾಗಿ ನೂಡಲ್ಸ್ 
ಜಿಲ್ಲಾ ಸುದ್ದಿ

ರಾಜ್ಯದ ಮ್ಯಾಗಿಗೆ ಇನ್ನು ಕೋಲ್ಕತಾ ಪರೀಕ್ಷೆ

ರಾಜ್ಯದಲ್ಲಿ ಉತ್ಪಾದನೆಯಾಗಿ ಮಾರಾಟವಾಗುತ್ತಿರುವ ನೆಸ್ಲೆ ಕಂಪನಿಯ ಮ್ಯಾಗಿಗೆ ಬೆಂಗಳೂರಿನ ಖಾಸಗಿ ಪ್ರಯೋಗಾಲಯಗಳು ಕ್ಲೀನ್ ಚಿಟ್ ನೀಡಿದ್ದು...

ಬೆಂಗಳೂರು: ರಾಜ್ಯದಲ್ಲಿ ಉತ್ಪಾದನೆಯಾಗಿ ಮಾರಾಟವಾಗುತ್ತಿರುವ ನೆಸ್ಲೆ ಕಂಪನಿಯ ಮ್ಯಾಗಿಗೆ ಬೆಂಗಳೂರಿನ ಖಾಸಗಿ ಪ್ರಯೋಗಾಲಯಗಳು ಕ್ಲೀನ್ ಚಿಟ್ ನೀಡಿದ್ದು, ಇಲ್ಲಿನ ಮ್ಯಾಗಿಯಲ್ಲಿ ಸೀಸ ಅನುಮತಿ ಮಿತಿ ಮೀರಿಲ್ಲ ಎಂದು ಸ್ಪಷ್ಟಪಡಿಸಿವೆ. ಈ ನಡುವೆಯೇ ರಾಜ್ಯ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೋಲ್ಕತಾದಲ್ಲಿರುವ ಕೇಂದ್ರ ಸರ್ಕಾರದ ಆಹಾರ ಪದಾರ್ಥಗಳ ಪ್ರಯೋಗಾಲಯಕ್ಕೆ ಕಳುಹಿಸಲು ತಯಾರಾಗಿದೆ.
ಮಂಗಳವಾರ ರಾಜ್ಯದ ಆಹಾರ ಸುರಕ್ಷತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಟಿಯುವಿ ಎಸ್ ಯುಡಿ ಪ್ರಯೋಗಲಾಯದ ವರದಿ ಕೈ ಸೇರಿದ್ದು ಅದರಲ್ಲಿ ರಾಜ್ಯದ ಮ್ಯಾಗಿಯಲ್ಲಿ ಅಪಾಯಕಾರಿಯಾಗುವಷ್ಟು ಸೀಸ ಇಲ್ಲ, ಅನುಮತಿ ಮಿತಿ ಮೀರಿಲ್ಲ ಎಂದು ಸ್ಪಷ್ಟವಾಗಿದೆ.

ಮುಂದೇನು?: ಮ್ಯಾಗಿಯಲ್ಲಿ ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರ ಬಗ್ಗೆ ಆರೋಪಗಳು ಕೇಳಿ ಬಂದ ತಕ್ಷಣವೇ ಆರೋಗ್ಯ ಸಚಿವ ಯು.ಟಿ ಖಾದರ್ ನಿರ್ದೇಶನದಂತೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಮೈಸೂರಿನ ಸಿಎಫ್ ಟಿ ಆರ್ ಐ ಅನ್ನು ಸಂಪರ್ಕಿಸಿ ಮ್ಯಾಗಿಯನ್ನು ಪರಿಶೀಲಿಸಿ ಕೊಡುವಂತೆ ಕೋರಿದ್ದರು. ಆದರೆ, ಸಿಎಫ್ ಟಿ ಆರ್ ಐ ತನ್ನ ನಿಯಮಗಳನ್ನು ಮುಂದಿಟ್ಟು ನಾವು ಪರಿಶೀಲಿಸಲು ಬರುವುದಿಲ್ಲ. ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷಿಸಿಕೊಳ್ಳಿ ಇಲ್ಲವಾದರೇ ಪಶ್ಚಿಮ ಬಂಗಾಳದ ಸರ್ಕಾರಿ ಲ್ಯಾಬ್ ಗೆ ಕಳುಹಿಸುವಂತೆ ಸಲಹೆ ನೀಡಿದ್ದರು. ಪೀಣ್ಯದ ಟಿಯುವಿ ಎಸ್ ಯುಡಿ ಲ್ಯಾಬೋರೇಟರಿ ಮಂಗಳವಾರ ಸರ್ಕಾರಕ್ಕೆ ವರದಿ ನೀಡಿದೆ.  ಇದೀಗ ಈ ಎರಡು ವರದಿ ಹಾಗೂ ನೆಸ್ಲೆ ಮ್ಯಾಗಿಯನ್ನು ಕೊಲ್ಕೊತ್ತಾದ ಕೇಂದ್ರಕ್ಕೆ ಸಂಬಂದಪಟ್ಟ ಪ್ರಯೋಗಲಾಯಕ್ಕೆ ಕಳುಹಿಸಲಾಗುತ್ತದೆ. ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿ ಖುದ್ದಾಗಿ ಕೊಲ್ಕೋತಾಗೆ ತೆರಳಲಿದ್ದಾರೆ.

ನಿರ್ಬಂಧ ಮುಂದುವರಿಕೆ:
ಆರೋಗ್ಯ ಸಚಿವರು ಪ್ರಕಟಿಸಿದಂತೆ ಮ್ಯಾಗಿ ಮೇಲಿನ ನಿರ್ಬಂಧ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಎರಡು ಖಾಸಗಿ ಲ್ಯಾಬ್ ಗಳ ಮೂವಕ ಪರಿಶೀಲನೆ ನಡೆಸಿದೆ. ಆದರೂ ಇನ್ನೊಂದು ಹಂತದ ಪರೀಕ್ಷೆ ಮಾಡಿಸಲು ಉದ್ದೇಶಿಸಿದೆ. ಅದರಲ್ಲೂ ಸರ್ಕಾರಿ ವ್ಯವಸ್ಥೆಯಲ್ಲಿ ಅದು ಪರಿಶೀಲನೆಗೊಳಪಟ್ಟರೆ ಇನ್ನಷ್ಟು ಖಚಿತತೆ ಇರುತ್ತದೆ. ಎಷ್ಟು ದಿನವಾಗಬಹುದು ಎಂದು ಹೇಳಲಾಗದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರದ ಲ್ಯಾಬ್ ನಲ್ಲಿ ಮ್ಯಾಗಿಯಲ್ಲಿರುವ ಸೀಸದ ಅಂಶ ಮೋನೊಸೋಡಿಯಂ ಗ್ಲುಟಮೇಟ್ ಸೇರಿದಂತೆ ಬೇರೆ ಬೇರೆ ಪರೀಕ್ಷೆ ನಡೆಯುತ್ತದೆ. ಅಲ್ಲಿನ ವರದಿಯ ಮೇಲೆ ತೀರ್ಮಾನವಾಗುತ್ತದೆ ಎಂದು ಹೇಳಿದ ಅವರು ನೆಸ್ಲೆ ಹೊರತಾಗಿ ಬೇರೆ ಕಂಪನಿಗಳ ಮ್ಯಾಗಿಯನ್ನು ಪರಿಶೀಲನೆಗೊಳಪಡಿಸಲಾಗುತ್ತಿದೆ. ಅವುಗಳ ವರದಿ ಬರಲು ಇನ್ನಷ್ಟು ದಿನಹಿಡಿಯಲಿದೆ ಎಂದು ತಿಳಿಸಿದರು.

ನಿರ್ಬಂಧ ಆದೇಶ ಅನುಷ್ಠಾನ
ರಾಜ್ಯದಲ್ಲಿ ಮ್ಯಾಗಿಯ ಉತ್ಪಾದನೆ ನಿಲ್ಲಿಸುವಂತೆ ಸಂಬಂಧಪಟ್ಟ ಘಟಕಕ್ಕೆ ಲಿಖಿತ ಮುಖೇನ ಸರ್ಕಾರ ಸೂಚಿಸಿದ್ದು, ಅದರಂತೆ ಉತ್ಪಾದನೆ ನಿಂತಿದೆ. ಇದರೊಟ್ಟಿಗೆ ಈಗಾಗಲೇ ದಾಸ್ತಾನು ಇರುವುದನ್ನು ಮಾರುಕಟ್ಟೆ ಸರಬರಾಜು ಮಾಡದಂತೆ ಸೂಚಿಸಲಾಗಿದೆ. ಚಿಲ್ಲರೆ ಅಂಗಡಿಗಳಲ್ಲಿ ಮ್ಯಾಗಿ ಮಾರಾಟ ಆಗದಂತೆ ಸೋಮವಾರದಿಂದಲೇ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಹಂತದಲ್ಲಿ ಡಿಎಚ್ ಓ ಹಾಗೂ ಆಹಾರ ಸುರಕ್ಷತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರ. ಅಂಗಡಿಗಳಿಗೆ ಭೇಟಿ ಕೊಟ್ಟು  ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!