ಬೀದಿ ದೀಪ 
ಜಿಲ್ಲಾ ಸುದ್ದಿ

16,498 ಉರಿಯದ ಬೀದಿ ದೀಪ, ರು. 49.52 ಲಕ್ಷ ದಂಡ

ಬಿಬಿಎಂಪಿ ವ್ಯಾಪ್ತಿಯಲ್ಲಿ 16,498 ಬೀದಿ ದೀಪಗಳು ಉರಿಯದಿರುವುದರಿಂದ ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರಿಗೆ ರು. 49.52 ಲಕ್ಷ ದಂಡ ವಿಧಿಸಲಾಗಿದೆ...

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 16,498 ಬೀದಿ ದೀಪಗಳು ಉರಿಯದಿರುವುದರಿಂದ ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರಿಗೆ ರು. 49.52 ಲಕ್ಷ ದಂಡ ವಿಧಿಸಲಾಗಿದೆ.

8 ವಲಯಗಳಲ್ಲಿ ಬೀದಿ ದೀಪ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು 264 ತಂಡ ರಚಿಸಲಾಗಿದೆ. ಆಡಳಿತಾಧಿಕಾರಿ ಟಿ.ಎಂ. ವಿಜಯ ಭಾಸ್ಕರ್, ಆಯುಕ್ತ ಕುಮಾರ ನಾಯಕ್ ಸೇರಿದಂತೆ ತಂಡಗಳು ವಾರ್ಡ್‍ಗಳಲ್ಲಿ ತಪಾಸಣೆ ನಡೆಸಿದ್ದು, ಒಟ್ಟು ಬೀದಿ ದೀಪಗಳ ಸಂಖ್ಯೆ, ಉರಿಯದಿರುವ ದೀಪಗಳ ವಿವರಗಳನ್ನು ಸಂಗ್ರಹಿಸಲಾಗಿತ್ತು. ಜೂ. 6ರಂದು ತಪಾಸಣೆ ಕೈಗೊಂಡ ಸಂದರ್ಭದಲ್ಲಿ ಒಟ್ಟು 16,498 ಬೀದಿ ದೀಪಗಳು ಉರಿಯದಿರುವುದನ್ನು ಪತ್ತೆಯಾಗಿತ್ತು. ಪ್ರತಿ ಬೀದಿ ದೀಪಕ್ಕೆ ರು. 300ರಂತೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದ್ದು ಬಾಕಿ ಹಣದಲ್ಲಿ ವಸೂಲಿ ಮಾಡಲು ಸೂಚಿಸಲಾಗಿದೆ.

ವಲಯ        ಬೀದಿದೀಪ     ಉರಿಯದ ದೀಪ      ದಂಡ (ರು. ಲಕ್ಷ)
ಪೂರ್ವ          91,431             3,615                        10.84
ಪಶ್ಚಿಮ          79,611             2,483                         7.45
ದಕ್ಷಿಣ             68,429            2,798                         8.39
ಬೊಮ್ಮನಹಳ್ಳಿ 49,883           2,021                         6.06
ದಾಸರಹಳ್ಳಿ     23,171           668                            2.04
ಯಲಹಂಕ      40,469           1,744                         5.23
ಆರ್‍ಆರ್ ನಗರ 54,276          1,520                        4.23
ಮಹದೇವಪುರ   45,630         1,649                         4.95
ಒಟ್ಟು                4,52,900      16,498                      49.52

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!