ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ (ಐಸಿಎಆರ್) ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ 
ಜಿಲ್ಲಾ ಸುದ್ದಿ

ಕೃಷಿಯೂ ಲಾಭದಾಯಕ ಉದ್ಯಮವಾಗಲಿ: ಅಯ್ಯಪ್ಪನ್

ಮುಂದಿನ 35 ವರ್ಷಗಳಲ್ಲಿ ಈಗಿರುವ ಮಾಹಿತಿ ತಂತ್ರಜ್ಞಾನದ ಉದ್ಯಮದಂತೆ ಕೃಷಿ ಕ್ಷೇತ್ರವೂ ಸಹ ಲಾಭದಾಯಕ ಉದ್ಯಮದತ್ತ ಕೊಂಡೊಯ್ಯುವ ಕಡೆ ಎಲ್ಲಾ ರೀತಿಯಲ್ಲಿಶ್ರಮ ವಹಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ (ಐಸಿಎಆರ್) ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಹೇಳಿದರು...

ಬೆಂಗಳೂರು: ಮುಂದಿನ 35 ವರ್ಷಗಳಲ್ಲಿ ಈಗಿರುವ ಮಾಹಿತಿ ತಂತ್ರಜ್ಞಾನದ ಉದ್ಯಮದಂತೆ ಕೃಷಿ ಕ್ಷೇತ್ರವೂ ಸಹ ಲಾಭದಾಯಕ ಉದ್ಯಮದತ್ತ ಕೊಂಡೊಯ್ಯುವ ಕಡೆ ಎಲ್ಲಾ ರೀತಿಯಲ್ಲಿಶ್ರಮ ವಹಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ (ಐಸಿಎಆರ್) ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ `ದೇಶದ ಆಹಾರದ ಉತ್ಪಾದನೆ-2050' ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಕೃಷಿ ಕ್ಷೇತ್ರದಲ್ಲೂ ಸಹ ನ್ಯಾನೋ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಪರಿಚಯಿಸುವ ಮೂಲಕ ಯುವಕರನ್ನು ಕೃಷಿಯತ್ತ ಸೆಳೆಯಲು ಮುಂದಾಗಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಎಷ್ಟೇ ಮುಂದುವರಿದಿದ್ದರು, ಕೃಷಿಗೆ ಸಂಬಂಧಿಸಿದಂತೆ ಬೇಕಿರುವ ಯಂತ್ರಗಳು ಹಾಗೂ ಅದರ ತಂತ್ರಜ್ಞಾನದ ಅಭಾವ ಈಗಲೂ ಎದುರಿಸುತ್ತಿದ್ದೇವೆ.

ಇಷ್ಟಿದ್ದರೂ ಇತ್ತೀಚೆಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಕೃಷಿ ಕ್ಷೇತ್ರದಲ್ಲಿ ರೋಬೋಟಿಕ್ ತಂತ್ರಜ್ಞಾನದ ಬಳಕೆ ಮಾಡುವ ಮೂಲಕ ಕ್ಷೇತ್ರದ ಪರಿಣತರಿಗೆ ಅಚ್ಚರಿ ಮೂಡಿಸಿದ್ದಾರೆ. ಆ ರೀತಿಯ ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಕ್ಷೇತ್ರದಲ್ಲಿ ದೈಹಿಕ ಶ್ರಮ ಕಡಿತಗೊಳ್ಳುವಂತಾಗಬೇಕು. ನಮ್ಮಲ್ಲಿ ಯುವಕರ ಶಕ್ತಿ ಮತ್ತು ಸಾಮರ್ಥ್ಯಕ್ಕೇನೂ ಕಡಿಮೆ ಇಲ್ಲ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುವಂತಾಗಬೇಕು ಎಂದರು.

ವಾಸ್ತವವಾಗಿ ನಮ್ಮ ದೇಶದಲ್ಲಿ ಬೆಲೆ ಬೆಳೆಯಲು ಇರುವ ಅವಕಾಶ ಮತ್ತು ವೈವಿಧ್ಯತೆಗಳನ್ನು ಇನ್ಯಾವ ದೇಶದಲ್ಲೂ ಸಹ ಕಾಣ ಸಿಗುವುದಿಲ್ಲ. ಇಂದಿನ ದಿನಮಾನದಲ್ಲಿ ಅಕಾಲಿಕ ಮಳೆಯಿಂದ ಬೆಳೆ ನಾಶವಾಗುವುದಕ್ಕಿಂತ ಬೆಳೆಗಳ ಮೇಲೆ ಮನಸೋ ಇಚ್ಚೆ ಸಿಂಪಡಿಸುವ ರಾಸಾಯನಿಕದಿಂದಲೇ ಬೆಳೆಗಳು ನಾಶವಾಗುತ್ತಿವೆ. ಮಾತ್ರವಲ್ಲದೇ ಹವಾಮಾನ ವೈಪರೀತ್ಯ ಸಹ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಬೀರುತ್ತಿದೆ. ಆದ್ದರಿಂದ ಹವಾಮಾನ ವೈಪರೀತ್ಯದ ಕುರಿತು ಎಚ್ಚರ ವಹಿಸಬೇಕಿದ್ದು, ರೈತರಿಗೆ ಈ ಕುರಿತು ಜ್ಞಾನ ಮತ್ತು ತಿಳಿವಳಿಕೆ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಬಿಟ್ಟು ತೆರಳದಂತೆ ಪ್ರೊತ್ಸಾಹಿಸಬೇಕು ಎಂದರು.

ಸಾಮಾನ್ಯವಾಗಿ ರೈತರೆಂದರೆ ಪಂಚೆ, ಟವಲು ತೊಟ್ಟ ಚಿತ್ರಣವೇ ಕಣ್ಣ ಮುಂದೆ ಬರಲಿದ್ದು, ಆ ದೃಷ್ಟಿಕೋನ ಬದಲಾಗಬೇಕು. ರೈತರು ಸಹ ತಂತ್ರಜ್ಞರೆಂದು ಪರಿಗಣಸುವ ಮೂಲಕ ಅವರಿಗೂ ಸಹ ಸಾಮಾಜಿಕ ಗೌರವ ದೊರೆಯುವಂತಾಗಬೇಕು. ಯುವಕರನ್ನು ಕೃಷಿ ಕ್ಷೇತ್ರದೆಡೆಗೆ ಆಕರ್ಷಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೃಷಿಗೆ ಬೇಕಿರುವ ಅಗತ್ಯ 50 ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲಾ ಮಟ್ಟದಲ್ಲಿ ಕೃಷಿ ಕ್ಷೇತ್ರದ ಮಹತ್ವ ಅರಿಯಲು ಮತ್ತು ಕೃಷಿ ಕ್ಷೇತ್ರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಶಾಲೆ ಆರಂಭಿಸುವ ಕಡೆ ಐಸಿಎಆರ್ ಯೋಜನೆ ರೂಪಿಸಬೇಕಿದೆ. 1965ರಲ್ಲಿ ಆರಂಭವಾದ ಕೃಷಿ ಕ್ರಾಂತಿಗೆ 50 ವರ್ಷ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ ಈ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಐಸಿಎಆರ್ ನಿರ್ಧರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕುಲಪತಿಗಳಾದ ಡಾ.ಸಿ. ರೇಣುಕಾ ಪ್ರಸಾದ್, ಡಾ.ಡಿ.ಎಲ್. ಮಹೇಶ್ವರ್, ಡಾ.ಎಚ್. ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಎನ್.ಕೃಷ್ಣಮೂರ್ತಿ, ಡಾ.ಟಿ.ಕೆ.ಎಸ್.ಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ