ಇಬ್ಬರು ಚಾಲಕರ ಬೀದಿ ಜಗಳ ತಂದ ದುರಂತ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಇಬ್ಬರು ಚಾಲಕರ ಬೀದಿ ಜಗಳ ತಂದ ದುರಂತ

ರಸ್ತೆಯಲ್ಲಿ ವಾಹನ ನಿಲ್ಲಿಸಿ ಇಬ್ಬರು ಚಾಲಕರು ಬೀದಿ ಜಗಳ ನಡೆಸುತ್ತಿದ್ದರಿಂದ ನಡೆದ ರಸ್ತೆ ಅಪಘಾತದಲ್ಲಿ ಹಾಂಗ್ ಕಾಂಗ್ ಮೂಲದ ಜಾಗೃತಾ ಸಾದ್ವಾನಿ (27) ಮೃತಪಟ್ಟಿದ್ದಾರೆ...

ಬೆಂಗಳೂರು: ರಸ್ತೆಯಲ್ಲಿ ವಾಹನ ನಿಲ್ಲಿಸಿ ಇಬ್ಬರು ಚಾಲಕರು ಬೀದಿ ಜಗಳ ನಡೆಸುತ್ತಿದ್ದರಿಂದ ನಡೆದ ರಸ್ತೆ ಅಪಘಾತದಲ್ಲಿ ಹಾಂಗ್ ಕಾಂಗ್ ಮೂಲದ ಜಾಗೃತಾ ಸಾದ್ವಾನಿ (27) ಮೃತಪಟ್ಟಿದ್ದಾರೆ.

ಚರ್ಮರೋಗದ ಚಿಕಿತ್ಸೆ ಗಾಗಿ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈಕೆ, ತಾಯಿ ಜತೆ ಊರಿಗೆ ಹಿಂತಿರುಗುತ್ತಿದ್ದಳು. ಶನಿವಾರ ರಾತ್ರಿ ಚಿಕ್ಕ ಜಾಲ ಸಮೀಪದ ವಿದ್ಯಾನಗರ ಮೇಲ್ಸೇತುವೆ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ.

ಘಟನೆಯ ವಿವರ:
ಜಾಗೃತಿ ಫ್ರೇಜರ್ ಟೌನ್‍ನಲ್ಲಿರುವ ಚಿಕ್ಕಮ್ಮ ಲೀಲಾ ಅವರ ಮನೆಯಲ್ಲಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚರ್ಮರೋಗಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಮುಗಿದ ಕಾರಣ ಶನಿವಾರ ರಾತ್ರಿ ಹಾಂಗ್‍ಕಾಂಗ್‍ಗೆ ಹಿಂದಿರುಗಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಮೆರು ಕ್ಯಾಬ್ ಗೊತ್ತುಪಡಿಸಿದ್ದರು. ರಾತ್ರಿ ಸುಮಾರು 11ಕ್ಕೆ ತಾಯಿ ಪ್ರಿಯಾ ಸಾದ್ವಾನಿ ಜತೆ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು.

ಈ ನಡುವೆ ಚಿಕ್ಕಜಾಲ ಬಳಿ ಸ್ಯಾಂಟ್ರೋ ಕಾರು ಹಾಗೂ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರ ನಡುವೆ ಜಗಳವಾಗುತ್ತಿತ್ತು. ಹಾಗಾಗಿ ಎರಡೂ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಚಾಲಕರು ಕನಿಷ್ಟ ಇಂಡಿಕೇಟರ್‍ಗಳನ್ನೂ ಹಾಕದೇ ವಾಹನ ನಿಲ್ಲಿಸಿ ಜಗಳಕ್ಕೆ ಇಳಿದಿದ್ದರು. ಮೆರು ಕ್ಯಾಬ್ ಚಾಲಕನಿಗೆ ವಾಹನಗಳು ನಿಂತಿರುವುದು ಕಾಣಿಸಿಲ್ಲ. ವೇಗವಾಗಿ ಬಂದ ಆತನ ಕಾರು ಖಾಸಗಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕ್ಯಾಬ್ ಚಾಲಕ ಹೊನ್ನೇಶ್ (25), ಜಾಗೃತ ಸಾದ್ವಾನಿ ಹಾಗೂ ತಾಯಿ ಪ್ರಿಯ ಸಾದ್ವಾನಿ ಗಾಯಗೊಂಡರು.

ತಕ್ಷಣ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಜಾಗೃತಿ ಮೃತಪಟ್ಟಿ ದ್ದಾರೆ. ಆಕೆಯ ತಾಯಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಾಲಕ ಚೇತರಿಸಿಕೊಂಡಿದ್ದಾನೆ. ಮೃತ ಯುವತಿಗೆ ವಿವಾಹ ನಿಶ್ಚಯವಾಗಿ, ಇನ್ನೊಂದು ತಿಂಗಳಲ್ಲಿ ಆಕೆ ಹಸೆಮಣೆ ಏರಬೇಕಿತ್ತು.ಅಪಘಾತಕ್ಕೆ ಕಾರಣವಾಗಿರುವ ಖಾಸಗಿ ಬಸ್, ಸ್ಯಾಂಟ್ರೋ ಕಾರನ್ನು ಚಿಕ್ಕಜಾಲ ಸಂಚಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿದ ಕಾರಣ ಮೆರು ಕ್ಯಾಬ್ ಚಾಲಕನ ವಿರುದ್ಧ ಮೊಕದ್ದಮೆಯೂ ದಾಖಲಾಗಿದೆ.

ವಿದ್ಯುತ್ ಸ್ಪರ್ಶಿಸಿ ಸಾವು:
ವಿದ್ಯುತ್ ಸ್ಪರ್ಶದಿಂದ ಹೊಟೇಲ್ ಕೆಲಸಗಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಹರೀಶ್ ಮೃತ ವ್ಯಕ್ತಿ.
ಬೆಳಗ್ಗೆ ಟ್ಯಾಂಕ್‍ಗೆ ನೀರು ತುಂಬಿಸಲು ಹೊಟೇಲ್ ಹಿಂಬದಿ ಇದ್ದ ಮೋಟರ್‍ನ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ತಾಗಿ ಕುಸಿದು ಬಿದ್ದಿದ್ದಾನೆ. ಅದನ್ನು ಕಂಡ ಉಳಿದ ಕೆಲಸಗಾರರು ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಾಗಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ