ಬೆಂಗಳೂರು: ನೂರಾರು ಕೋಟಿ ಟೆಂಡರ್ ಕರೆದು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ವಿದ್ಯುತ್ ಕಾಮಗಾರಿ ಕೆಲಸಗಳು ಸಿಗದೆ ಅನ್ಯಾಯವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ನಿನ್ನೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ವಿದ್ಯುತ್ ಕಾಮಗಾರಿ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಂಘದ ಮುಖಂಡ ಉಮೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯ ರಾಜ್ಯದವರಿಗೆ ಎಸ್ಕಾಂ ಕಂಪನಿಗಳು ನೂರಾರು ಕೋಟಿ ಟೆಂಡರ್ ಕರೆದು ಸ್ಥಳಿಯ ವಿದ್ಯುತ್ ಗುತ್ತಿಗೆದಾರರಿಗೆ ಅನ್ಯಾಯಾವಾಗುತ್ತಿದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ನಿನ್ನೆಯಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ವಿದ್ಯುತ್ ಕಾಮಗಾರಿ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಗುತ್ತಿಗೆಕಾಮಗಾರಿಯನ್ನು ಸಿವಿಲ್ ಕಾಮಗಾರಿಯಿಂದ ಬೇರ್ಪಡಿಸುವುದು, ಪ್ರಕೃತಿ ವಿಕೋಪ, ಮಳೆ, ಗಾಳಿ, ತುರ್ತು ವಿದ್ಯುತ್ ಕಾಮಗಾರಿ ಕೆಲಸಗಳಿಗೆ ಎಸ್.ಆರ್ ದರದ ಮೇಲೆ ಶೇ.50ರಷ್ಟು ಜಾಸ್ತಿ ನೀಡಿ, ಅತಿ ಶೀಘ್ರದಲ್ಲಿ ಕಾಮಗಾರಿ ಹಣ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.