ಬೆಂಗಳೂರು: ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉಪನ್ಯಾಸಕರು ಇಂದಿನ ಅಗತ್ಯಕ್ಕೆ ತಕ್ಕಂತೆ ಅಪ್‍ಡೇಟ್ ಆಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಸಲಹೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ಜ್ಞಾನ ಆಯೋಗ(ಕೆಜೆಎ) ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಮಂಗಳವಾರ ಆಯೋಜಿಸಿದ್ದ `ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ' ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನು ಗುಣವಾಗಿ ಮಾಹಿತಿ ತಂತ್ರಜ್ಞಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಹೊಸ ಛಾಪು ಮೂಡಿ ಸಬೇಕಿದೆ. ಈ ಚಿಂತನೆಯೊಂದಿಗೆ ಉಪಗ್ರಹ ಆಧಾರಿತ ತರಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಣದ ಆಧುನಿಕ ಅಗತ್ಯಗಳಿಗೆ ಅನುಗುಣ ವಾಗಿ ಬೋಧಿಸಲು ಉಪನ್ಯಾಸಕರು ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದರು. ಇನ್ನು 20 ವರ್ಷಗಳಲ್ಲಿ ಭಾರತ ವಿಶ್ವದ `ಸೂಪರ್ ಪವರ್' ದೇಶವಾಗಲಿದೆ. ಆ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಯುವಕರು ಸ್ಪರ್ಧಿಸಲು ಅಣಿಯಾಗಬೇಕು. ಬೌದ್ಧಿಕ ಟ್ಟ ಹೆಚ್ಚಿಸಿಕೊಳ್ಳುವ ಜತೆಗೆ ದೈಹಿಕ ಸಾಮ ಥ್ರ್ಯ ವೃದ್ಧಿಸಿಕೊಳ್ಳಲು ಕ್ರೀಡೆ, ಯೋಗ
ದಂತಹ ಚಟುವಟಿಕೆಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದರು. ಈಗಾಗಲೇ ನಗರ
ಶೈಕ್ಷಣಿಕ ನಗರಿಯಾಗಿ ಗುರುತಿಸಿ ಕೊಂಡಿದೆ.ಕೌಶಲ್ಯ ಮತ್ತು ಗುಣಮಟ್ಟದ ಶಿಕ್ಷಣ
ನೀಡುವ ಉದ್ದೇಶದಿಂದ ಶಿಕ್ಷಣ ನೀತಿಯಲ್ಲೂ ಬದಲಾವಣೆ ತರುವ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಎಸ್.ವಿ. ರಂಗನಾಥ್
ಮಾತನಾಡಿ, ಶಿಕ್ಷಣದ ಮೂಲ ಉದ್ದೇ ಶವೇ ನಿರಂತರ ಕಲಿಕೆ ಹಾಗೂ ಅಭಿವೃದ್ಧಿ . ಅದಕ್ಕೆ ಯಾವುದೇ ವಯೋಮಾನದ ನಿರ್ಬಂಧವಿಲ್ಲ. ಶಿಕ್ಷಣ ವ್ಯವಸ್ಥೆಯು ಜಾಗತಿಕ ಮಟ್ಟದ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಕು. ನಮ್ಮ ದೇಶದಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇದ್ದರೂ, ವಿದ್ಯಾರ್ಥಿಗಳ ವೈಯಕ್ತಿಕ ಅಧ್ಯಯನ ಸಾಮಥ್ರ್ಯ ವೃದ್ಧಿಸಕಿದೆ. ಈ
ನಿಟ್ಟಿನಲ್ಲಿ ಉಪನ್ಯಾಸಕರು ಸಹ ಕಲಿಕೆಯ ಹಂಬಲದೊಂದಿಗೆ ಮಾಹಿತಿ ತಂತ್ರಜ್ಞಾನ
ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೆಂಗಳೂರು ವಿವಿ ಕುಲಪತಿ ಫ್ರೊ.ಬಿ. ತಿಮ್ಮೇಗೌಡ, ವಿಜ್ಞಾನಿ ಡಾ. ಬಿ.ಎನ್. ಸುರೇಶ್ ಉಪಸ್ಥಿತರಿದ್ದರು.