ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಹಣ ಡಬ್ಲಿಂಗ್ ವಂಚಕರ ಬಂಧನ

ಹಣ ದ್ವಿಗುಣಗೊಳಿಸುವ ಅಮಿಷ ಒಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಚಿಕ್ಕಜಾಲ ಪೊಲೀಸರು ರು.9 ಲಕ್ಷ ನಗದು ಹಾಗೂ 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ...

ಹಣ ಡಬ್ಲಿಂಗ್ ವಂಚಕರ ಬಂಧನ (ಸಾಂದರ್ಭಿಕ ಚಿತ್ರ)
Updated On : 18 Jun 2015, 10:11 am

ಬೆಂಗಳೂರು: ಹಣ ದ್ವಿಗುಣಗೊಳಿಸುವ ಅಮಿಷ ಒಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಚಿಕ್ಕಜಾಲ ಪೊಲೀಸರು ರು.9 ಲಕ್ಷ ನಗದು ಹಾಗೂ 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿಯ ಷಣ್ಮುಗ ಅಲಿಯಾಸ್ ಕುಮಾರ್ (51), ಅಮೃತಹಳ್ಳಿಯ ಓಂಪ್ರಕಾಶ್ (55), ನಾಗರಬಾವಿಯ ಮೋಹನ್ (50) ಮತ್ತು ಆರ್.ಟಿ.ನಗರದ ಚಂದ್ರಶೇಖರ್ ಅಲಿಯಾಸ್ ಚಂದ್ರಪ್ಪ (58) ಬಂಧಿತರು. ವ್ಯಾಪಾರಸ್ಥರು, ಉದ್ಯೋಗಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಸ್ಥರನ್ನು ಪರಿಚಯಿಸಿಕೊಳ್ಳುವ ಆರೋಪಿಗಳು ಅವರ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಅವರ ನೆರವಾಗುವ ನೆಪದಲ್ಲಿ ನೀವು ಕಷ್ಟ ಪಡುವ ಬದಲು ಸುಲಭವಾಗಿ ಹಣ ಸಂಪಾದನೆಗೆ ನಾವು ದಾರಿ ತೋರಿಸುತ್ತೇವೆ. ನಮ್ಮ ಬಳಿ ಸಿಕ್ಕಾಪಟ್ಟೆ `ಕಪ್ಪು ಹಣ' ಇದೆ. ರು.1 ಲಕ್ಷ ಕೊಟ್ಟರೆ ರು.3 ಲಕ್ಷ ನೀಡುವುದಾಗಿ ನಂಬಿಸುತ್ತಿದ್ದರು.

ನಂಬಿದವರು ಹಣ ನೀಡುತ್ತಿದ್ದಂತೆ ಅದನ್ನು ಪಡೆದು ಪರಾರಿಯಾಗುತ್ತಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಬಂಗಾರಪೇಟೆಗೆ ಹೋಗಿದ್ದ ಆರೋಪಿ ಷಣ್ಮುಗ, ಆಯುರ್ವೇದ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ರಿಜ್ವಾನ್ ಎಂಬಾತನ ಪರಿಚಯಿಸಿಕೊಂಡಿದ್ದ. ಆತನ ಹಣಕಾಸಿನ ಸ್ಥಿತಿಯ ಬಗ್ಗೆ ತಿಳಿದುಕೊಂಡು, ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಮೊಬೈಲ್ ಫೋನ್ ನಂಬರ್ ಪಡೆದಿದ್ದ. ರಿಜ್ವಾನ್, ಬೇರೆಯವರ ಬಳಿ ಸಾಲ ಮಾಡಿ ರು.1.30 ಲಕ್ಷ ಹೊಂದಿಸಿದ್ದ. ಬಲೆಗೆ ಬಿದ್ದಿರುವುದನ್ನು ಅರಿತ ಆರೋಪಿ ಷಣ್ಮುಗ, ಚಿಕ್ಕಜಾಲ ಸಮೀಪದ ವಿದ್ಯಾನಗರ ಕ್ರಾಸ್‍ಗೆ ಬರುವಂತೆ ಹೇಳಿದ್ದ. ರಿಜ್ವಾನ್‍ನಿಂದ ರು.1.30 ಲಕ್ಷ ಪಡೆದ ಆರೋಪಿಗಳು ಅರ್ಧಗಂಟೆಯಲ್ಲಿ ರು.3.90 ಲಕ್ಷ ಕೊಡುವುದಾಗಿ ಹೇಳಿ ಹೋದವರು ವಾಪಸ್ಸಾಗಲಿಲ್ಲ. ಇದರಿಂದ ಗಾಬರಿಗೊಂಡ ರಿಜ್ವಾನ್, ಚಿಕ್ಕಜಾಲ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಎಸ್ಸೈ ನವೀನ್, ಸುತ ್ತಮುತ್ತಲ ಪೊಲೀಸ್ ಠಾಣೆಗಳಿಗೆ ವೈರ್‍ಲೆಸ್‍ನಲ್ಲಿ ಮಾಹಿತಿ ನೀಡಿದ್ದರು. ಕೆಲ ಹೊತ್ತಿನಲ್ಲೇ ಆರೋಪಿಗಳು ಬಾಗಲೂರು ಹತ್ತಿರದ ಡಾಭಾದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ತೆರಳಿದ ಸಿಬ್ಬಂದಿ ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement