ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜೂನ್ 21ರಂದು ಅಕ್ಷರ ದಾಸೋಹ ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನ

ಅಕ್ಷರ ದಾಸೋಹ ನೌಕರರ ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನವನ್ನು ಜೂನ್ 21 ರಿಂದ ಜೂನ್ 23ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ...

ಪತ್ರಿಕಾಗೋಷ್ಠಿ ನಡೆಸಿದ ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಮಾನುಲ್ಲಾ ಖಾನ್, ವರಲಕ್ಷ್ಮಿ ಮತ್ತಿತರರು.
Mainashree
Updated On : 18 Jun 2015, 3:56 am

ಬೆಂಗಳೂರು: ಅಕ್ಷರ ದಾಸೋಹ ನೌಕರರ ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನವನ್ನು ಜೂನ್ 21 ರಿಂದ ಜೂನ್ 23ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಅಕ್ಷರ ದಾಸೋಹ ಯೋಜನೆಯ ಖಾಸಗಿಕರಣ ನಿಲ್ಲಿಸಿ, ಅನುದಾನ ಕಡಿತ ವಿರೋಧಿಸಿ, ಕನಿಷ್ಟ ಕೂಲಿಗೆ ಒತ್ತಾಯಿಸಿ ಅಖಿಲ ಭಾರತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಮಾನುಲ್ಲಾ ಖಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಕೇಂದ್ರ ಅನುದಾನ ಕಡಿ, ಖಾಸಗಿಕರಣಕ್ಕೆ ಒತ್ತು, ಬಿಸಿಯೂಟದ ಮಧ್ಯೆ ಜಾತಿ ಧರ್ಮದ ವಿಷಬೀಜ ತಡೆಗಟ್ಟಿ, ಸಾಮಾಜಿಕ ವಲಯ ಮತ್ತು ಸರ್ಕಾರದ ಯೋಜನೆಗಳ್ಲಲಿ ದುಡಿಯುವ ಜನರು ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದ ಅವರು, ಜೂನ್ 21ರಂದು ಬೆಂಗಳೂರು ರೈಲ್ವೆ ನಿಲ್ಧಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement