ಕೋಲಾರ: 'ನನಗೆ ಸಾವಿನ ಭೀತಿ ಕಾಡುತ್ತಿದೆ. ಯಾವಾಗ ಸಾವು ಬರುತ್ತೋ ಗೊತ್ತಿಲ್ಲ. ಆದರೆ ಸಾಯುವುದರೊಳಗೆ ಒಳ್ಳೆಯ ಕೆಲಸ ಮಾಡಬೇಕಿದೆ' ಎಂದು ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿಕೊಂಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಜನರು ನೆನಪಿಸಿಕೊಳ್ಳುವಂಥ ಕೆಲಸ ಮಾಡಬೇಕಾಗಿದೆ. ಕೋಲಾರ ಜಿಲ್ಲೆಗೆ ಯಾವುದಾದರೂ ಮೂಲದಿಂದ ನೀರು ತರುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ನೀಲಗಿರಿ ಬೆಳೆ ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಜನರಿಗೆ ಮಾರಕವಾಗುವಂತಹ ಕಾನೂನನ್ನು ಸುಟ್ಟು ಹಾಕುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನೀಲಗಿರಿ ಬೆಳೆ ನಿಷೇಧಿಸುವುದಕ್ಕೆ ಹೊಸ ಕಾನೂನು ಬೇಕಿಲ್ಲ ಎಂದರು.