ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ವಾಯುಮಾಲಿನ್ಯ ತಪಾಸಣೆ ಹೆಸರಲ್ಲಿ ವಂಚನೆ, ಬಂಧನ

ನಕಲಿ ಪ್ರಮಾಣಪತ್ರ ವಿತರಿಸುತ್ತಿದ್ದ 6 ಕೇಂದ್ರಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕರ್ನಾಟಕ ವಾಯುಮಾಲಿನ್ಯ ತಪಾಸಣಾ ಕೇಂದ್ರದ ಅಧ್ಯಕ್ಷ ಯೋಗೇಶ್ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ...

ಬೆಂಗಳೂರು: ವಾಹನಗಳನ್ನು ವಾಯುಮಾಲಿನ್ಯ ನಿಯಂತ್ರಣ ನಿಯಮಾನುಸಾರ ತಪಾಸಣೆ ಮಾಡದೆ, ನಕಲಿ ಪ್ರಮಾಣಪತ್ರ ವಿತರಿಸುತ್ತಿದ್ದ 6 ಕೇಂದ್ರಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕರ್ನಾಟಕ ವಾಯುಮಾಲಿನ್ಯ ತಪಾಸಣಾ ಕೇಂದ್ರದ ಅಧ್ಯಕ್ಷ ಯೋಗೇಶ್ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.

ಹಳೆ ಏರ್ ಪೋರ್ಟ್ ರಸ್ತೆ, ಬೈಯಪ್ಪನಹಳ್ಳಿ, ಕೋರಮಂಗಲ ಹಾಗೂ ಕೆ.ಜಿ. ಹಳ್ಳಿಯಲ್ಲಿ ಗ್ರೀನ್ ಸಿಟಿ ಹೆಸರಿನ ತಪಾಸಣಾ ಕೇಂದ್ರಗಳನ್ನು ನಡೆಸುತ್ತಿದ್ದ ಮಾಲೀಕ ಯೋಗೇಶ್, ಸಿಬ್ಬಂದಿ, ಲಿಂಗರಾಜು(23), ರಾಜು(22), ಕೃಷ್ಣ(24) ಹಾಗೂ ವಿದ್ಯಾರಣ್ಯಪುರ ಹರ್ಷಿತ್ ಎಮಿಷನ್ ಟೆಸ್ಟಿಂಗ್ ಕೇಂದ್ರದ ಸಿಬ್ಬಂದಿ ವಿನೋದ್ ರನ್ನು ಬಂಧಿಸಲಾಗಿದೆ. ಮಾಲೀಕ ಸ್ವರೂಪ್ ಪ್ರಭಾಕರ್ ತಲೆಮರೆಸಿಕೊಂಡಿದ್ದಾನೆ. ಜಾಲಹಳ್ಳಿ ಕ್ರಾಸ್ ತ್ರಿವೇಣಿ ಪೆಟ್ರೋಲ್ ಬಂಕ್ ನಲ್ಲಿರುವ ಅಯ್ಯಪ್ಪ ಎಮಿಷನ್ ಟೆಸ್ಟಿಂಗ್ ಕೇಂದ್ರದ ಮಾಲೀಕ ಪುಟ್ಟಮಂಜಯ್ಯ (51) ಹಾಗೂ ಸಿಬ್ಬಂದಿ ನವೀನ್ (23) ಬಂಧಿತರು.

ದಾಳಿ ವೇಳೆ ಪೆಟ್ರೋಲ್, ಡೀಸೆಲ್, ಗ್ಯಾಸ್ ವಾಯುಮಾಲಿನ್ಯ ತಪಾಸಣಾ ಯಂತ್ರಗಳು, ಕಂಪ್ಯೂಟರ್ ಗಳು, ಇಂಟರ್ ನೆಟ್ ಡಾಂಗಲ್, ವೆಬ್ ಕ್ಯಾಮರಾ ಹಾಗೂ ತಪಾಸಣೆಯಿಂದ ಸಂಗ್ರಹಿಸಿದ ಹಣ ಸೇರಿ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಚಾರ ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ ನಗರದಲ್ಲಿ 45 ಲಕ್ಷಕ್ಕೂ ಅಧಿಕ ವಾಹನಗಳಿವೆ. ಇವುಗಳಿಂದ ಭಾರಿ ಪ್ರಮಾಣದಲ್ಲಿ ಹೊಗೆ ಬರುತ್ತಿದ್ದು, ವಾಯುಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ, ವಾಹನಗಳ ಹೊಗೆ ಉಗುಳುವಿಕೆ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇದೆ ಎಂದು ಪರಿಶೀಲಿಸಲು ವಾಹನಗಳನ್ನು ಪ್ರತಿ 6 ತಿಂಗಳಿಗೊಮ್ಮೆ ತಪಾಸಣೆಗೆ ಒಳಪಡಿಸಬೇಕು. ಅದಕ್ಕಾಗಿ ನಗರದಲ್ಲಿ 250 ತಪಾಸಣಾ ಕೇಂದ್ರಗಳಿವೆ.

ಆದರೆ, ಈ ಪೈಕಿ ಹಲವು ಕೇಂದ್ರಗಳು ಅಕ್ರಮದಲ್ಲಿ ತೊಡಗಿವೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜೂನ್ 24ರಂದು ನಗರದ ವಿವಿಧ ಕೇಂದ್ರಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಅಕ್ರಮ ಹೇಗೆ?: ಸೈಲೆನ್ಸರ್ ಪೈಪ್ ಗೆ ಪ್ರೋಬ್ ಕೂಡ ಅಳವಡಿಸದೇ ನಿಗದಿತ ರೀತಿಯಲ್ಲಿ ರೀಡಿಂಗ್ ಪಡೆಯದೇ ಅತಿ ಕಡಿಮೆ ಅವಧಿಯಲ್ಲಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಅದಕ್ಕಾಗಿ ರೀಡಿಂಗ್ ಯಂತ್ರಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಚಿ ನಕಲಿ ದಾಖಲೆ ಸೃಷ್ಟಿಸಿ ಅಸಲಿ ಎಂದು ವಾಹನ ಮಾಲೀಕರಿಗೆ ವಂಚಿಸುತ್ತಿದ್ದರು. ಅಲ್ಲದೇ ಪರಿಸರ ಮಾಲಿನ್ಯಕ್ಕೂ ಕಾರಣರಾಗುತ್ತಿದ್ದರು.

ತಪಾಸಣೆ ಹೇಗೆ?:
ವಾಯುಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ನಿಯಮದಂತೆ ವಾಹನಗಳ ಎಂಜಿನ್ ಗೆ ಮ್ಯಾಗ್ನೆಟಿಕ್ ಸೆನ್ಸರ್, ಬ್ಯಾಟರಿಗೆ ಆಲ್ ಟೆಂಪರೇಚರ್ ಅಳತೆ ಮಾಡುವ ಸಾಧನವನ್ನು ಅಳವಡಿಸಬೇಕು. ಪೆಟ್ರೋಲ್ ವಾಹನಕ್ಕೆ 1 ಬಾರಿ ರೀಡಿಂಗ್ ಹಾಗೂ ಡೀಸೆಲ್ ವಾಹನಕ್ಕೆ ನಾಲ್ಕು ಬಾರಿ ರೀಡಿಂಗ್ ತೆಗೆದುಕೊಂಡು ನಂತರ ಸೈಲೆನ್ಸರ್ ಪೈಪ್ ನಲ್ಲಿ ಪ್ರೋಬ್ ಅಳವಡಿಸಿ ನಾಲ್ಕು ಬಾರಿ ರೀಡಿಂಗ್ ತೆಗೆದುಕೊಳ್ಳಬೇಕು. ಅದಕ್ಕೆ ತರಬೇತಿ ಹೊಂದಿದ ಸಿಬ್ಬಂದಿ ಅವಶ್ಯಕ. ರೀಡಿಂಗ್ ತೆಗೆದುಕೊಳ್ಳುವ ಸಮಯದಲ್ಲಿ ಎಂಜಿನ್ ಸ್ಟಾರ್ಟ್ ಮಾಡಿ ಎಕ್ಸಲರೇಟರ್ ರೈಸ್ ಮಾಡಬೇಕು. ವಾಹನದ ನೋಂದಣಿ ಸಂಖ್ಯೆ ಸಮೇತ ಪ್ರಮಾಣಪತ್ರ ಪ್ರಿಂಟ್ ಔಟ್ ತೆಗೆದು ಸೀಲು ಮತ್ತು ಸಹಿ ಹಾಕಿ ವಾಹನ ಸವಾರರಿಗೆ ನೀಡಬೇಕು.

ವಾಯು ಮಾಲಿನ್ಯ ತಪಾಸಣೆ ಹೆಸರಿನಲ್ಲಿ ಅಕ್ರಮವಾಗಿ ಪ್ರಮಾಣಪತ್ರ ವಿತರಿಸುವ ಕೇಂದ್ರಗಳ ಮೇಲೆ ನಿಗಾ ಇಡಲಾಗಿದ್ದು, ಅಕ್ರಮ ಕಂಡು ಬಂದ ಕೇಂದ್ರಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತದೆ.
-ರಮೇಶ್, ಉಪ ಪೊಲೀಸ್ ಆಯುಕ್ತ, ಸಿಸಿಬಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಸೇರಿ 150ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!