ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಉಪವಿಭಾಗಾಧಿಕಾರಿ ಮೇಲೆ ಹಲ್ಲೆಗೆ ಯತ್ನ

ನಗರ ಜಿಲ್ಲಾ ದಕ್ಷಿಣ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜು ಮೇಲೆ ಹಲ್ಲೆ ಯತ್ನ ಹಾಗೂ ಜಾತಿನಿಂದನೆ ಮಾಡಿದ ಉಮ್ರಾ ಡೆವಲಪರ್ಸ್ ನ ಇಮ್ರಾನ್ ಖಾನ್ ಬಂಧನಕ್ಕೆ ಆಗ್ರಹಿಸಿ, ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ ಪ್ರತಿಭಟನೆ ನಡೆಸಿತು...

ಉಪವಿಭಾಗಾಧಿಕಾರಿ ಮೇಲೆ ಹಲ್ಲೆಗೆ ಯತ್ನ (ಸಾಂದರ್ಭಿಕ ಚಿತ್ರ)
Updated On : 27 Jun 2015, 11:40 am

ಬೆಂಗಳೂರು: ನಗರ ಜಿಲ್ಲಾ ದಕ್ಷಿಣ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜು ಮೇಲೆ ಹಲ್ಲೆ ಯತ್ನ ಹಾಗೂ ಜಾತಿನಿಂದನೆ ಮಾಡಿದ ಉಮ್ರಾ ಡೆವಲಪರ್ಸ್ ನ ಇಮ್ರಾನ್ ಖಾನ್ ಬಂಧನಕ್ಕೆ ಆಗ್ರಹಿಸಿ, ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ನೌಕರರು, ಸರ್ಕಾರಿ ಭೂಮಿಯನ್ನು ಕ್ರಯ ಮಾಡಿಕೊಡಲು ಅನುಮತಿ ನೀಡುವಂತೆ ಉಮ್ರಾ ಡೆವಲಪರ್ಸ್ ನ ಇಮ್ರಾನ್ ಖಾನ್ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ. ಉಪವಿಭಾಗಾಧಿಕಾರಿ ನಾಗರಾಜು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವಿಚಾರ ಪೊಲೀಸರಿಗೆ ತಿಳಿಸಿದ್ದರೂ ಬಂಧನಕ್ಕೆ ಕ್ರಮ ಕೈಗೊಂಡಿಲ್ಲ.

ಭೂಮಿಯನ್ನು ಪರಿಶೀಲಿಸಿ ನಂತರ ಅನುಮತಿ ನೀಡಲಾಗುವುದು ಎಂದು ಹೇಳಿದ್ದರೂ ಮಾತು ಕೇಳದ ಇಮ್ರಾನ್ ಖಾನ್, ವಕೀಲರ ಹಾಗೂ ನೌಕರರ ಮುಂದೆಯೇ ಜಾತಿ ನಿಂದನೆ ಮಾಡಿದ್ದಾನೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಎನ್. ಮೂರ್ತಿ ಮಾತನಾಡಿ, ಸಚಿವರ ಕೃಪಾರ್ಶಿವಾದವಿರುವ ಕೆಲ ಉದ್ಯಮಿಗಳು ಸರ್ಕಾರಿ ಅಧಿಕಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ. ಉದ್ಯಮಿಯೊಬ್ಬ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದು, ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತಾಗಿದೆ. ದಲಿತ ಅಧಿಕಾರಿಗಳನ್ನು ಹೀನಾಯವಾಗಿ ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಕ್ಷಣೆ ಬೇಕು:
ಸುದ್ದಿಗಾರರೊಂದಿಗೆ ಮಾತನಾಡಿದ ಎಲ್.ಸಿ. ನಾಗರಾಜು, ವಿವಾದಕ್ಕೆ ಕಾರಣವಾಗಿರುವ ಕಲ್ಕೆರೆ ಗ್ರಾಮದ ಜಾಗ ಸರ್ಕಾರಿ ಅಥವಾ ಸಾಗುವಳಿ ಭೂಮಿ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದು ಸ್ಪಷ್ಟನೆ ನೀಡಿದ್ದರೂ, ಬೆದರಿಕೆ ಹಾಕಿದ್ದಾನೆ. ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement