ಬೆಂಗಳೂರು: ಬಿಬಿಎಂಪಿ ಚುನಾವಣೆ ವಿಚಾರವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಂತೆ ನಿಧಾನವಾಗಿ ಗರಿದೆಗರಿದ್ದ ಚುನಾವಣಾ ಕಾವು ಕೊಂಚ ಕಡಿಮೆಯಾಗಿದೆ.
ಅಷ್ಟೇ ಅಲ್ಲದೆ ಎಲ್ಲಾ ಪಕ್ಷಗಳ ನಾಯಕರು ಮತ್ತು ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಮುಳುಗಿರುವುದರಿಂದ ಬೆಂಗಳೂರಿನಲ್ಲಿ ಚನಾವಣೆ ಚಟುವಟಿಕೆಗಳು ಕಾಣಿಸುತ್ತಿಲ್ಲ. ಚುನಾವಣೆ ನಡೆಸಬೇಕಿರುವ ರಾಜ್ಯ ಚುನಾವಣಾ ಆಯೋಗ ಕೂಡ ಸಭೆ, ಮಾಹಿತಿ ಪತ್ರ ರವಾನೆ ಹಾಗೂ ಮತದಾರರ ನೋಂದಣಿ ಕಾರ್ಯದಲ್ಲಿ ತೊಡಗಿದ್ದು, ಅಲ್ಲಿಯೂ ಮಹತ್ವದ
ಚಟುವಟಿಕೆಗಳು ನಡೆಯುತ್ತಿಲ್ಲ. ಈಗಾಗಲೇ ಒಂದು ಸುತ್ತು ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆ ಪೂರೈಸಿರುವ ಆಯೋಗ ಸೋಮವಾರ ಮತ್ತೆ ಅಧಿಕಾರಿಗಳ ಸಭೆ ನಡೆಸಿತು.
ಪ್ರತಿ 5 ವಿಧಾನಸಭಾ ಕ್ಷೇತ್ರಗಳಲ್ಲಿಗೆ ಒಬ್ಬರಂತೆ ಐವರು ಐಎಎಸ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ ನೇಮಕ ಮಾಡಿತು. ಅಲ್ಲದೆ ಪ್ರತಿ ಕ್ಷೇತ್ರಕ್ಕೂ ಒಬ್ಬ ಕೆಎಎಸ್ ಆಧಿಕಾರಿಗಳನ್ನು ವೀಕ್ಷಕರನ್ನಾಗಿ ಮಾಡಲಾಯಿತು. ಇದಲ್ಲದೆ ಆಯೋಗದಲ್ಲಿ ಬಿರುಸಿನ ಸಿದ್ಧತೆ ನಡೆಯಲಿಲ್ಲ. ಇನ್ನು ಚುನಾವಣಾ ಆಕಾಂಕ್ಷಿಗಳ ಸದ್ದು ಕೂಡ ಅಷ್ಟಾಗಿ ಕೇಳಿ ಬರುತ್ತಿಲ್ಲ.
ಚುನಾವಣೆ ಕೋರ್ಟ್ ಮೆಟ್ಟಿಲೇರುತ್ತಿರುವ ಮುಂದೆ ಏನಾಗುವುದೋ ಎನ್ನುವ ಭಾವ ಆಕಾಂಕ್ಷಿಗಳನ್ನು ಕಾಡುತ್ತಿದೆ. ಒಂದುವೇಳೆ ಕೋರ್ಟ್ ನಲ್ಲಿ ಕೇಸು ಸ್ವೀಕೃತವಾದರೆ ಚುನಾವಣೆ ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಯಾವುದೇ ರಾಜಕೀಯ ಪಕ್ಷಗಳ ಜಿಲ್ಲಾ ನಾಯಕರು ಸಭೆ ನಡೆಸುವ ಪ್ರಯತ್ನ ಮಾಡಿಲ್ಲ. ಒಟ್ಟಾರೆ ಚುನಾವಣೆ ಸಿದಟಛಿತೆ ನಡೆದಿದ್ದರೂ ಕಣಕ್ಕಿಳಿಯುವರ ಸಿದ್ಧತೆ ಇನ್ನೂ
ಆರಂಭವೇ ಆಗಿಲ್ಲ ಎನ್ನುತ್ತಾರೆ ಪಕ್ಷಗಳು ಮುಖಂಡರು.