ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬಡ ಮಕ್ಕಳ ನೆರವಿಗೆ ರನ್ ಫಾರ್ ಆಸ್ಕರ್

ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೆವಿದ್ಯಾಭ್ಯಾಸ ಕೊಡಿಸುವುದು ಸೇರಿದಂತೆ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯುವಜನರು ಆಸಕ್ತಿ...

ರನ್ ಫಾ ರ್ ಆಸ್ಕರ್
Rashmi Kasaragodu
Updated On : 2 Mar 2015, 12:00 pm

ಬೆಂಗಳೂರು: ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೆವಿದ್ಯಾಭ್ಯಾಸ ಕೊಡಿಸುವುದು ಸೇರಿದಂತೆ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯುವಜನರು ಆಸಕ್ತಿ ವಹಿಸಬೇಕಿದೆ ಎಂದು ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಎಚ್.ಎನ್.ಗಿರೀಶ್ ಅಭಿಪ್ರಾಯಪಟ್ಟರು. ಐ 3, ಟೆನ್ಯೂವೈಸ್, ಕನ್ನಡ ಪ್ರಭ, ಸುವರ್ಣ ನ್ಯೂಸ್ ಸಹಯೋಗದೊಂದಿಗೆ ಭಾನುವಾರ ಬೆಳಗ್ಗೆ ನಗರದ ಹೊರವಲಯದ ಕುಂಬಳಗೋಡಿನ ಗಾರ್ಡನ್ ಏಷಿಯಾ ರೆಸಾರ್ಟ್‍ನಲ್ಲಿ ನಡೆದ `ರನ್ ಫಾ ರ್ ಆಸ್ಕರ್' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಸರ್ಕಾರ ಬಡ, ನಿರ್ಗತಿಕ ಮಕ್ಕಳ ಬಗ್ಗೆ ಆಸಕ್ತಿ ವಹಿಸುವುದಕ್ಕಿಂತ ಯುವಜನತೆ ಇಂತಹ ಕೆಲಸಗಳತ್ತ ಗಮನಹರಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಸರ್ಕಾರದ ಯಾವುದೇ ಯೋಜನೆಗಳು ಆ ಮಕ್ಕಳಿಗೆ ತಲುಪುವುದಿಲ್ಲ. ಹಾಗಾಗಿ ಯುವಜನತೆಯನ್ನು ಸೆಳೆಯುವಲ್ಲಿ
ಸಂಘಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಅವರಿಗೆ ಅಗತ್ಯ ನೆರವು ನೀಡಲು ನಾವು ಸಿದ್ಧ  ಎಂದರು.

ಉತ್ತಮ ಪ್ರತಿಕ್ರಿಯೆ
ಆಸ್ಕರ್  ಫೌಡೇಷನ್‍ನ ಮುಖ್ಯಸ್ಥ ಅಶೋಕ್ ಶಂಕರ್ ರಾಥೋಡ್ ಮಾತನಾಡಿ, ಬಡ ಮಕ್ಕಳಿಗಾಗಿ ನಡೆಸುತ್ತಿರುವ `ರನ್ ಫಾರ್ ಆಸ್ಕರ್' ಕಾರ್ಯಕ್ರಮಕ್ಕೆ ಮುಂಬೈನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿಯೂ ಅದೇ ರೀತಿ ಸಾಕಷ್ಟು ಕೊಳೆಗೇರಿಗಳಿವೆ. ಹಾಗಾಗಿ ಅಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು, ಅವರನ್ನು ಬೇರೆ ಬೇರೆ
ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಮುಖ್ಯ ವಾಹಿನಿಗೆ ತರಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಉತ್ತಮವಾದುದು ಎಂದರು.
ಕಡಿಮೆ ಅವಧಿಯಲ್ಲಿ ನಗರದಲ್ಲಿರುವ ಬಡ, ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮೊದಲು ಅವರನ್ನು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿ ನಂತರ ಅವರಿಗೆ ವಿದ್ಯಾಭ್ಯಾಸ
ನೀಡಲಾಗುವುದು. ಅದಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ  ಮಾಡಿಕೊಳ್ಳಲಾಗಿದ್ದು, ಅವರ ಮೂಲಕ ಬಡಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುವುದು. ಪ್ರತಿ ಆರು, ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದ ಆಯೋಜಕ ಸುಜಿತ್  ಮಾತನಾಡಿ, ಮೊದಲ ಹಂತದಲ್ಲಿ ಸುಮಾರು 200 ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಲಾಗಿದ್ದು,
ಮುಂದಿನ ದಿನಗಳಲ್ಲಿ ಮಕ್ಕಳ ಆಯ್ಕೆ  ಹಾಗೂ ಹುಡುಕಾಟ ಪ್ರಕ್ರಿಯೆ  ಆರಂಭವಾಗಲಿದೆ ಎಂದರು. ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು,
ಯುವತಿಯರು, ಮಹಿಳೆಯರು, ಸಂಘಸಂಸ್ಥೆಗಳ ಸದಸ್ಯರು ಸೇರಿದಂತೆ ಸುಮಾರು 5 ಸಾವಿರ ಮಂದಿ 5 ಕಿ.ಮೀ. ಮ್ಯಾರಥಾನ್‍ನಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನ ವಿದ್ಯಾರ್ಥಿ ಆಕಾಶ್, ಬೀದರ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ವೆಂಕಟ್ ಹಾಗೂ ಜೈನ್ ವಿವಿಯ ಪ್ರಥಮ
ವರ್ಷದ ಬಿ.ಕಾಂ. ವಿದ್ಯಾರ್ಥಿ ಶ್ರೀಹರಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. ಈ ಮೂವರನ್ನು ಮಕ್ಕಳಿಗೆ ತರಬೇತಿ ನೀಡಲು ಆಯ್ಕೆ  ಮಾಡಿಕೊಳ್ಳಲಾಗುವುದು ಎಂದು ಆಯೋ ಜಕರು ತಿಳಿಸಿದರು. ಚೇತನ್, ಕೃಷ್ಣ ವಾಗೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿಯೊಂದರಲ್ಲೂ ನಾನು ಪ್ರಥಮವಾಗಿರಬೇಕು ಎಂಬ ಕನಸಿದೆ. ಮ್ಯಾರಥಾನ್‍ನಲ್ಲಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವ ಆಸೆಯಿದೆ. ಈ ಮೂಲಕ ಅದರಿಂದ ಬರುವ ಹಣವನ್ನು ಬಡ ಮಕ್ಕಳಿಗೆ ನೀಡುವ ಯೋಚನೆಯಿದ್ದು, ಉತ್ತಮ ವೇದಿಕೆ ಅಗತ್ಯವಿದೆ. ಈ ಮೂಲಕ ಆ ವೇದಿಕೆ ದೊರೆತಿದೆ.
 ಆಕಾಶ್, ಮ್ಯಾರಥಾನ್‍ನ ಪ್ರಥಮ ವಿಜೇತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement