ಜೈನ ಸೋದರಿಯರಿಂದ ಸನ್ಯಾಸತ್ವ ಸ್ವೀಕಾರ
ಕೋಲಾರ: ಬೆಂಗಳೂರಿನ ಜೈನ ಯುವತಿಯರಿಬ್ಬರು ಸನ್ಯಾಸ ದೀಕ್ಷೆ ಸ್ವೀಕರಿಸಲು ಸನ್ನದ್ಧರಾಗಿದ್ದಾರೆ. ಅವೆನ್ಯೂ ರಸ್ತೆ ವ್ಯಾಪಾರಿ ಥಾನುಮಲ್ ಅವರ ಪುತ್ರಿ ಯರಾದ ಚೇತನಾ(23) ಹಾಗೂ ಮೋನಿಕಾ (21) ದೀಕ್ಷೆ ಸ್ವೀಕರಿಸಲು ತಯಾರಾದವರು.
ರಾಜಧಾನಿಯಲ್ಲಿಯೇ ಹುಟ್ಟಿ, ಬೆಳೆದ ಇವರು ಬಿಕಾಂ ಪದವೀಧರರು. 6 ವರ್ಷಗಳಿಂದ ಜೈನ ಮತ್ತು ಇನ್ನಿತರೆ ಧರ್ಮಗಳ ವಿಚಾರಧಾರೆಗಳನ್ನು ಅಭ್ಯಸಿಸಿ, ಸಂತರಂತೆಯೇ ಜೀವನ
ಸಾಗಿಸುತ್ತಿರುವ ಸಹೋದರಿಯರು 2015ರ ಏ. 25ಕ್ಕೆ ಗುಜರಾತಿನ ಅಹ್ಮದಾಬಾದ್ ನಲ್ಲಿ ಶಾಸ್ತ್ರೋಕ್ತವಾಗಿ ಜೈನ ಪಂತದ ಗುರುಗಳಾದ ರಾಮಚಂದ್ರ, ಸೂರೀಜಿಯಿಂದ ದೀಕ್ಷೆ
ಸ್ವೀಕರಿಸಲಿದ್ದಾರೆ.