ಪಶು ಆಹಾರ ದರ ಇಳಿಕೆ
ಕೆಎಂಎಫ್ ನಲ್ಲಿ ಇದೇ ಮೊದಲ ಬಾರಿಗೆ ಪಶು ಆಹಾರ ಬೆಲೆ ಇಳಿಕೆ ಮಾಡಲಾಗಿದೆ.ಪ್ರತಿ ಟನ್‍ಗೆ ರು. 2,500 ಕಡಿಮೆಗೊಳಿಸಲು...
ಬೆಂಗಳೂರು: ಕೆಎಂಎಫ್ ನಲ್ಲಿ ಇದೇ ಮೊದಲ ಬಾರಿಗೆ ಪಶು ಆಹಾರ ಬೆಲೆ ಇಳಿಕೆ ಮಾಡಲಾಗಿದೆ.ಪ್ರತಿ ಟನ್‍ಗೆ ರು. 2,500 ಕಡಿಮೆಗೊಳಿ ಸಲು ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿದ್ದು, ಹೊಸ ದರ ಶುಕ್ರವಾರ ದಿಂದಲೇ ಜಾರಿ ಯಾಗಲಿದೆ. ಹೀಗಾಗಿ ಪ್ರತಿ ಟನ್‍ಗೆ ರು. 15,000 ಇದ್ದ ಪಶು ಆಹಾರ ಈಗ ರು. 12,500ಕ್ಕೆ ದೊರೆಯಲಿದೆ.ಕೆಎಂಎಫ್ ನಲ್ಲಿ ಈತನಕ ಪಶು ಆಹಾರ ದರ ಏರಿಕೆ ಮಾಡಲಾಗುತ್ತಿತ್ತೇ ವಿನಾಕಡಿಮೆ ಮಾಡಿರುವ ಇತಿಹಾಸ ಇರಲಿಲ್ಲ.ಆದರೆ ಈಗ ಏಕಾಏಕಿ ರು. 2,500 ಕಡಿಮೆ ಮಾಡಿ ಬೇಸಿಗೆಯಲ್ಲಿ ರೈತರ ಬವಣೆ ತಪ್ಪಿಸಲಾಗಿದೆ. ಬೇಸಿಗೆ ಯಲ್ಲಿ ಪಶುಆಹಾರ ಕೊರತೆ ಉಂಟಾಗಿ ಹಾಲಿನಉತ್ಪಾದನೆ ದಿನಕ್ಕೆ 63ಲಕ್ಷ ಲೀಟರ್‍ನಿಂದ 57 ಲಕ್ಷಕ್ಕೆ ಇಳಿಕೆಯಾ ಗುತ್ತದೆ. ಇಂಥ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಲು ಮಂಡಳಿ ಸಭೆ ಯಲ್ಲಿ ಚರ್ಚಿಸಿ ಬೆಲೆ ಇಳಿಕೆ ನಿರ್ಧಾರಕ್ಕೆ ಬರಲಾಯಿತು.ಇದರಿಂದ ಪಶು ಆಹಾರ ಖರೀದಿಸುವ ಉಳಿತಾಯವಾಗಲಿದೆ. ಬೆಂಗಳೂರಿನ ರಾಜಾನುಕುಂಟೆ,ಧಾರವಾಡ, ತುಮಕೂರಿನ ಗುಬ್ಬಿ,ಹಾಸನ, ಶಿಕಾರಿಪುರದಲ್ಲಿ ಪಶು ಆಹಾರ ಕೇಂದ್ರಗಳಿದ್ದು, ಇಲ್ಲಿ ನಿತ್ಯ 1400 ಟನ್ ಆಹಾರ ಉತ್ಪಾದನೆ ಮಾಡ ಲಾಗುತ್ತದೆ.ಆದರೆ ಈತನಕ ಸಿಗುತ್ತಿದ್ದ ಪಶು ಆಹಾರದಲ್ಲಿ ಪೌಷ್ಟಿಕತೆ ಇಲ್ಲದೆ ಪಶುಗಳಲ್ಲಿ ಅನಾರೋಗ್ಯ ಸಮಸ್ಯೆ ಮತ್ತು ಹಾಲಿನ ಉತ್ಪಾದನೆಯಲ್ಲಿ ಕೊರತೆ ಉಂಟಾಗಿತ್ತು. ಹೊಸ ಪಶು ಆಹಾರ ವನ್ನು ಉತ್ಪಾದಿಸಲಾರಂಭಿಸಿತು. ಪಶು ಆಹಾರಕ್ಕೆ ಬಳಸುತ್ತಿದ್ದ ಕಚ್ಚಾ ಪದಾರ್ಥ ಗಳನ್ನು ಕಡಿಮೆ ಮಾಡಿ ಮೆಕ್ಕೇಜೋಳ ಬಳಸಲಾಯಿತು. ಇದರಿಂದ ಪಶು ಆಹಾರ ಉತ್ಪಾದನೆಯಲ್ಲಿ ಕೆಎಂಎಫ್ ಹೆಚ್ಚಿನ ಉಳಿತಾಯ ಮಾಡಿತು. ಹೀಗೆ ಉಳಿತಾಯವಾದ ಹಣವನ್ನು ರೈತರಿಗೆ ನೀಡಬೇಕೆಂದು ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.