ಬೀದರ್/ ಅಳ್ನಾವರ: ಹೋಳಿ ಮತ್ತಿಗೆ ರಾಜ್ಯದಲ್ಲಿ ಶುಕ್ರವಾರ ಐವರು ಬಲಿಯಾಗಿದ್ದಾರೆ.
ಮಹಾರಾಷ್ಟ್ರದ ಉದಗೀರ್‍ನಲ್ಲಿ ಹೋಳಿ ಆಚರಿಸಿ ಜಿಲ್ಲೆಯ ಮರೂರ್‍ಗೆ ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದ ನಾಲ್ವರು ಟೆಂಪೋ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಉದಗೀರ್ ನ ಸಂತೋಷ ಗಾಯಕವಾಡ (30), ಮಹಾದು ಶಂಕರ ವರದಳೆ (18), ದಿಗಂಬರ (30) ಹಾಗೂ ಮರೂರ್ ಗ್ರಾಮದ ಉಮೇಶ ಸಿದ್ದರಾಮಪ್ಪ ಪಾಟೀಲ್(22) ಮೃತರು. ಅಪಘಾತದ ನಂತರ ಟೆಂಪೋ ಚಾಲಕ ಪರಾರಿಯಾಗಿದ್ದಾನೆ.
ಹೋಳಿ ಹಬ್ಬದಲ್ಲಿ ಬಣ್ಣದಾಟ ಆಡಿ ಈಜಲು ಬಂದಿದ್ದ ಧಾರವಾಡದ ಯುವಕ ಪ್ರದೀಪ ಜಂಬೋಟಿ (26) ಹುಲಿಕೇರಿ ಕೆರೆಯಲ್ಲಿ ಮುಳುಗಿ ಅಸುನೀಗಿದ್ದಾರೆ.
ಇವರು ಧಾರವಾಡದ ಕಮಲಾಪುರ ನಿವಾಸಿ. ನಾಲ್ಕೈದು ಜನ ಬಣ್ಣದಾಟದ ಬಳಿಕ ಈಜಲು ಬಂದಿದ್ದರು. ಕೆರೆ ಆಳ ತಿಳಿಯದೇ ಈಜಲು ಹೋದ ಪ್ರದೀಪ ಮುಳುಗಿ ಮೃತಪಟ್ಟಿದ್ದಾರೆ.