ಜಿಲ್ಲಾ ಸುದ್ದಿ

ವಿದ್ಯಾನಗರಿ ಲಾಬಿಗೆ ದಕ್ಕೀತೆ ಐಐಟಿ ಪೇಡಾ?

ಐಐಟಿ ಕಿತ್ತಾಟದಲ್ಲಿ ವಿದ್ಯಾನಗರಿ ಧಾರವಾಡದ ಲಾಬಿಯೂ ಜೋರಾಗಿದೆ. ಐಐಟಿಗರಿಗೆ ಪೇಡಾ ತಿನ್ನಿಸಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ...

ಬೆಂಗಳೂರು: ಐಐಟಿ ಕಿತ್ತಾಟದಲ್ಲಿ ವಿದ್ಯಾನಗರಿ ಧಾರವಾಡದ ಲಾಬಿಯೂ ಜೋರಾಗಿದೆ. ಐಐಟಿಗರಿಗೆ ಪೇಡಾ ತಿನ್ನಿಸಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ. ಸಾಕಷ್ಟು ಅಂಶಗಳು ಧಾರವಾಡದ ಪರವಾಗಿಯೂ ಇವೆ.

ಐಐಟಿ ಕೂಗು ಕೇಳಿಬಂದ ದಿನದಿಂದಲೂ ಧಾರವಾಡದ ಹೆಸರು ಮುಂಚೂಣಿಯಲ್ಲಿದೆ. ಇದಕ್ಕೆ ಬೇಕಾದ ಎಲ್ಲ ಶೈಕ್ಷಣಿಕ, ಭೌಗೋಳಿಕ ಅರ್ಹತೆ ಹಾಗೂ ರಾಜಕೀಯ ಕಾರಣಗಳನ್ನು ಧಾರವಾಡ ಹೊಂದಿದೆ.

ಇದೇ ಕಾರಣಕ್ಕಾಗಿ ಈ ಹಿಂದೆ ಯು. ಎನ್.ರಾವ್ ಅವರು ಸಲ್ಲಿಸಿದ್ದ ವರದಿಯೊಂದರಲ್ಲೂ ಧಾರವಾಡದಲ್ಲಿ ಐಐಟಿ ಆರಂಭಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಎಲ್ಲವನ್ನೂ ದಕ್ಷಿಣ ಕರ್ನಾಟಕ ಅಥವಾ ಬೆಂಗಳೂರಿನಲ್ಲೇ ತುಂಬಬೇಡಿ ಎಂಬ ಕೂಗಿ ನಿಂದಲೇ ಧಾರವಾಡದ ಹೆಸರು ಮೊದಲು ಪ್ರಸ್ತಾಪವಾಗುತ್ತಿದೆ.

ರಾಜ್ಯದ ವಾಣಿಜ್ಯ ನಗರಿ ಎಂದೇ ಖ್ಯಾತವಾಗಿ ರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಆರಂಭ ದಿಂದಲೂ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಾತಿನಿಧ್ಯ ಪಡೆದಿದೆ. ಮುಂಬೈ ರಾಜ್ಯದ ಅವಧಿಯಿಂದಲೂ ಧಾರವಾಡ ಶೈಕ್ಷಣಿಕವಾಗಿ ಮುಂದು ವರೆದಿತ್ತು.

ಉ್ತತರ ಕನ್ನಡ, ದಾವಣಗೆರೆ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಧಾರವಾಡವು ವಿದ್ಯಾದಾನ ಮಾಡುವ ನಗರವಾಗಿತ್ತು.

ಶೈಕ್ಷಣಿಕ ಹಿನ್ನೆಲೆ
ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಹೆಸರು ಬಂದರೆ ಮೊದಲು ಕೇಳಿಬರುವುದು ಕರ್ನಾಟಕ
ವಿಶ್ವವಿದ್ಯಾಲಯದ ಹೆಸರು. ಆರು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿರುವ ರಾಜ್ಯದ ಅತಿ ಹಳೆಯ ವಿವಿ ಇರುವ ಜಾಗಕ್ಕೆ ಐಐಟಿ ಬಂದರೆ ವಿದ್ಯಾ ನಗರಿಯನ್ನು ಜ್ಞಾನನಗರಿಯನ್ನಾಗಿ ಮಾಡಲಿದೆ. ಧಾರವಾಡದಲ್ಲಿ ಕಲ್ಲು ಹೊಡೆದರೆ ಸಾಹಿತಿಗಳ ಮನೆಯ ಮೇಲೆ ಬೀಳುತ್ತದೆ ಎನ್ನುವುದನ್ನು ಎಂಜಿನಿಯರ್‍ಗಳ ಮನೆ ಮೇಲೆ ಬೀಳುತ್ತದೆ ಎಂದು ಗಾದೆ ಬದಲಾಯಿಸಲೂ

ಅವಕಾಶವಿದೆ. ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಯೋಜನೆ ಕೂಡ ಸರ್ಕಾರದ ಮುಂದಿದೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದ

ವಿಜ್ಞಾನ ಸಂಶೋಧನಾ ಕೇಂದ್ರವನ್ನು ಇದೇ ವಿವಿಯ ಕ್ಯಾಂಪಸ್‍ನಲ್ಲಿ ತೆರೆಯಲಾಗಿದೆ. ಜತೆಗೆ ಎಸ್‍ಡಿಎಂ ಹಾಗೂ ಬಿವಿಬಿ ಎಂಜಿನಿಯರಿಂಗ್ ಕಾಲೇಜುಗಳು ತಾಂತ್ರಿಕ ವಿಭಾಗಕ್ಕೆ

ಬೆನ್ನೆಲುಬಾಗಿ ನಿಂತರೆ, ಎಸ್‍ಡಿಎಂನ ವೈದ್ಯ ಹಾಗೂ ದಂತವೈದ್ಯ ಕಾಲೇಜುಗಳು ಅವಳಿ ನಗರದ ಶೈಕ್ಷಣಿಕ ಹಿನ್ನೆಲೆಗೆ ಕಿರೀಟಪ್ರಾಯದಂತಿವೆ. ತೀರಾ ಇತ್ತೀಚಿನವರೆಗೂ ಧಾರವಾಡಕರ್ನಾಟಕ ವಿಶ್ವವಿದ್ಯಾಲಯ ಬಿಟ್ಟರೇ ಬೇರೆಗತಿಯಿಲ್ಲ ಎಂಬ ಸ್ಥಿತಿ ಇತ್ತು.

ಎಲ್ಲ ಲಾಬಿಗಳ ಕೇಂದ್ರವಿದು:
ಉತ್ತರಕರ್ನಾಟಕ ಎಂಬ ಮಾತು ಆರಂಭವಾಗುವುದೇ ಧಾರವಾಡದಿಂದ. ಈ ಹಿನ್ನೆಲೆಯಲ್ಲಿಉತ್ತರ ಕರ್ನಾಟಕದ ಲಾಬಿ ಹೆಸರಲ್ಲಿ ಧಾರವಾಡಕ್ಕೆ ಐಐಟಿ ತರಲು ಸ್ಥಳೀಯ ರಾಜಕಾರಣಿಗಳು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ನಂಜುಂಡಪ್ಪ ವರದಿಯೂ ಬೆನ್ನಿಗಿರುವುದರಿಂದ ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ.

ಇನ್ನೊಂದೆಡೆ ಈಲಾಬಿಯ ಜತೆಗೆ ಉತ್ತರ ಕರ್ನಾಟಕದಮಟ್ಟಿಗೆ ಉತ್ತಮ ಮೂಲಸೌಕರ್ಯ ಹೊಂದಿರುವ ನಗರವೆಂಬ ಖ್ಯಾತಿಗೆ ಹುಬ್ಬಳ್ಳಿ-ಧಾರವಾಡ ಪಾತ್ರವಾಗಿದೆ.ಇನ್ನು ಭೌಗೋಳಿಕವಾಗಿಯೂ ಧಾರವಾಡ ನಗರ ಐಐಟಿಗೆ ಹೇಳಿಮಾಡಿಸಿದಂತಿದೆ.ಅರೆ ಮಲೆನಾಡಿನ ವಾತಾವರಣ ಹೋಲುವಪೇಡಾ ನಗರಿ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಬೇನೆಯಾಗಲಾರದು. ಜತೆಗೆ ಐಐಟಿನಿರ್ಮಿಸಲು ಅಗತ್ಯವಿರುವ 500 ಎಕರೆಈಗಾಗಲೇ ಲಭ್ಯವಿದ್ದು, ಕೆಐಎಡಿಬಿಯಸ್ವಾಧಿನದಲ್ಲಿದೆ. ಸರ್ಕಾರ ಒಪ್ಪಿಗೆ ನೀಡಿದರೆಕೂಡಲೇ ಐಐಟಿ ನಿರ್ಮಾಣ ಕಾಮಗಾರಿಆರಂಭಿಸಬಹುದಾಗಿದೆ.

ಮತ್ತೊಂದು ವಿಶೇಷವೆಂದರೆ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಬೇರೆನಗರದಿಂದ ತಲುಪುವ ಪ್ರತಿಯೊಂದುರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದೆ.ಅದರಲ್ಲೂ ಬೆಂಗಳೂರು-ಪುಣೆ ಚತುಷ್ಪಥರಸ್ತೆಯು ಮೂಲಸೌಕರ್ಯ ಅಭಿವೃದ್ಧಿಗೆಮತ್ತಷ್ಟು ಇಂಬು ನೀಡಲಿದೆ. ಹಾಗೆಯೇಇದೇ ರಾಷ್ಟ್ರೀಯ ಹೆದ್ದಾರಿಯು ಕೈಗಾರಿಕಾಕಾರಿಡಾರ್ ಆಗಿ ಅಭಿವೃದ್ಧಿ ಹೊಂದುತ್ತಿದೆ.

ವಾಣಿಜ್ಯ ನಗರಿ ಎಂದು ಖ್ಯಾತಿಯಾಗಿರುವ ಹುಬ್ಬಳ್ಳಿ-ಧಾರವಾಡವು ಕೈಗಾರಿಕೀರಣದಿಂದಲೂ ದೂರವಿಲ್ಲ. ಐಟಿ ಪಾರ್ಕ್ನ್ನೂ ನೆಪ ಮಾತ್ರಕ್ಕೆ ನಿರ್ಮಿಸಲಾಗಿದೆ. ಸೂಕ್ತಮೂಲಸೌಕರ್ಯ ನೀಡಿದರೆ ಹುಬ್ಬಳ್ಳಿಯಲ್ಲಿಕಚೇರಿ ಆರಂಭಿಸಲು ಇನ್ಫೋಸಿಸ್ ಕೂಡಬಯಸಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅವಳಿ ನಗರಗಳ ಮಧ್ಯದ ರಸ್ತೆಯನ್ನುಚತುಷ್ಪಥಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಇನ್ನೊಂದೆಡೆ ಧಾರವಾಡವುಕರ್ನಾಟಕದ ಪ್ರಮುಖ ನಗರಗಳಲ್ಲೊಂದುಎಂದು ಸಾರಲು ಮತ್ತೊಂದು ಗರಿಮೆಯೆಂದರೆ ಹೈಕೋರ್ಟ್ ಪೀಠ. ಇತ್ತೀಚೆಗೆಈ ಸಂಚಾರ ಪೀಠಕ್ಕೆ ಕಾಯಂ ಮಾನ್ಯತೆಯನ್ನುನೀಡಲಾಗಿದೆ.ಎಲ್ಲಕ್ಕಿಂತ ಮುಜಖ್ಯವಾಗಿ ಧಾರವಾಡಎಲ್ಲ ಗದ್ದಲ, ಗಲಾಟೆಗಳಿಂದಲೂ ದೂರ.ಅಲ್ಲಿ ಯಾವ ಗಲಾಟೆಯೂ ಇಲ್ಲ. ಕಾವೇರಿ,ಕಾವು ಏರುವ ಕೋಮು ಗಲಭೆ, ನೈತಿಕ ಪೊಲೀಸ್‍ಗಿರಿ, ಕನ್ನಡ-ಹಿಂದಿ, ಕನ್ನಡ-ಮರಾಠಿ, ಕನ್ನಡ- ತಮಿಳು ಈ ಯಾವ ಗದ್ದಲಗಳೂ ಧಾರವಾಡವನ್ನು ತಟ್ಟಿಲ್ಲದಿ ರುವದೂಕೂಡ ಒಂದು ಪ್ಲಸ್ ಪಾಯಿಂಟ್.
ಶೆಟ್ಟರ್ ವಾದವೇನು?
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡವುಐಐಟಿಗೆ ಹೇಳಿಮಾಡಿಸಿದಂತಹ ಜಾಗವಾಗಿದೆ ಎನ್ನುವುದು ಪ್ರತಿಪಕ್ಷ ನಾಯಕಜಗದೀಶ್ ಶೆಟ್ಟರ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.ಮುಖ್ಯಮಂತ್ರಿಯಾಗಿದ್ದಾಗಲೂ ಐಐಟಿ ಸ್ಥಾಪನೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದಶೆಟ್ಟರ್, ಧಾರವಾಡದಲ್ಲಿಯೇ ಐಐಟಿ ಸ್ಥಾಪಿಸಬೇಕೆಂಬ ಹೋರಾಟಕ್ಕೆ ಬೆನ್ನೆಲುಬಾಗಿನಿಂತಿದ್ದಾರೆ. ಸಾಮಾಜಿಕ ಹಾಗೂ ಭೌಗೋಳಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿಧಾರವಾಡವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಎಲ್ಲವನ್ನೂ ಬೆಂಗಳೂರಿಗೆತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನಂಜುಂಡಪ್ಪ ವರದಿಯಲ್ಲೂ ಉತ್ತರಕರ್ನಾಟಕಕ್ಕೆ ಪ್ರಾತಿನಿಧ್ಯ ಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಧಾರವಾಡ ಉತ್ತಮ ಆಯ್ಕೆಯಾಗುತ್ತದೆ. ವಿಮಾನ, ರೇಲ್ವೆ ಹಾಗೂ ರಸ್ತೆ ಸಾರಿಗೆ ಸಂಪರ್ಕವನ್ನುಹೊಂದಿರುವುದರಿಂದ ವಿದ್ಯಾರ್ಥಿಗಳಿಗೂ ಸುಲಭವಾಗುತ್ತದೆ ಎಂದು ಶೆಟ್ಟರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!