ಬೆಂಗಳೂರು: ಕೇಂದ್ರದ ಮಾಜಿ ಸಚಿವ, ಕನ್ನಡಿಗ ಡಾ. ಎಂ. ವೀರಪ್ಪ ಮೊಯ್ಲಿ ಅವರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪುರಸ್ಕಾರ ಲಭಿಸಿದೆ. ಸರಸ್ವತಿ ಸಮ್ಮಾನ್ ಪಡೆದ ಎರಡನೇ ಕನ್ನಡಿಗ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಕೆ.ಕೆ ಬಿರ್ಲಾ ಫೌಂಡೇಶನ್ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಮೊಯ್ಲಿಯವರು ರಚಿಸಿದ ರಾಮಾಯಣ ಮಹಾನ್ವೇಷಣಂ ಕೃತಿಗೆ ಲಭ್ಯವಾಗಿದೆ.