ಬೆಂಗಳೂರು: ವಿಎಫ್ಎಸ್ ಗ್ಲೋಬಲ್ ಸಂಸ್ಥೆಯು ದಕ್ಷಿಣ ಆಫ್ರಿಕಾದ ವೀಸಾ ಅರ್ಜಿ ಪ್ರಕ್ರಿಯೆ ಕೇಂದ್ರವನ್ನು ಬೆಂಗಳೂರು ಸೇರಿದಂತೆ ಇನ್ನು 6 ನಗರಗಳಿಗೆ ವಿಸ್ತರಿಸಿದೆ.
ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿರುವ ಪ್ರವಾಸಿಗರು ಹಾಗೂ ಇದಕ್ಕೆ ಸಂಬಂಧಿಸಿದ ಟ್ರಾವೆಲ್ ಏಜೆನ್ಸಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಅಲ್ಲದೇ ಕೋಲ್ಕತ್ತಾ, ಅಹ್ಮದಾಬಾದ್, ಗೋವಾ, ಪುಣೆ, ಜೈಪುರ ಹಾಗೂ ಗುರ್‍ಗಾಂವ್ ನಲ್ಲಿಯೂ ಕೇಂದ್ರ ಆರಂಭಿಸಲಾಗಿದೆ.
ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್‍ನಲ್ಲಿರುವ ಪ್ರೆಸ್ಟೀಜ್ ಆಟ್ರೀಯಾಂನಲ್ಲಿ ವೀಸಾ ಕೇಂದ್ರ ತೆರೆಯಲಾಗಿದ್ದು, ಮಾ.5ರಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಭಾರತದಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಹೊಸದಾಗಿ 7 ವೀಸಾ ಕೇಂದ್ರ ತೆರೆಯಲಾಗಿದೆ. ಜತೆಗೆ ಈ ಪ್ರವಾಸೋದ್ಯಮದಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವಿನ ದ್ವಿಪಕ್ಷೀಯ ಸಂಬಂಧವೃದ್ಧಿಯಾಗಲಿದೆ ಎಂದು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ಹನ್ನೆಲಿ ಸ್ಲ್ಯಾಬರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಿಂದ ಇತ್ತೀಚೆಗೆ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡುವ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂ ರಿನಲ್ಲಿ ಕೇಂದ್ರ ಆರಂಭವಾಗುತ್ತಿರುವುದರಿಂದ ಉದ್ಯಮಕ್ಕೆ ಮತ್ತಷ್ಟು ನೆರವು ನೀಡಲಿದೆ ಎಂದು ಟ್ರಾವೆಲ್ ಟೂರ್ಸ್‍ನ ಅಶ್ವಿನ್ ನಾರಾಯಣನ್ ಹೇಳಿದ್ದಾರೆ.