ಜಿಲ್ಲಾ ಸುದ್ದಿ

ಸುಪಾರಿ ಕೊಲೆ ಆರೋಪಿಗಳ ಸೆರೆ

ಮಾವನ ಹತ್ತು ಕೋಟಿ ಮೌಲ್ಯದ ಆಸ್ತಿಗೆ ಒಡೆಯನಾಗುವ ಉದ್ದೇಶದಿಂದ ಸುಪಾರಿ ಕೊಟ್ಟು ಹೆಂಡತಿಯ ಅಕ್ಕನ ಗಂಡನ ಕೊಲೆ ಮಾಡಿಸಿದವ ಸೇರಿ 7 ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ಮಾವನ ಹತ್ತು ಕೋಟಿ ಮೌಲ್ಯದ ಆಸ್ತಿಗೆ ಒಡೆಯನಾಗುವ ಉದ್ದೇಶದಿಂದ ಸುಪಾರಿ ಕೊಟ್ಟು ಹೆಂಡತಿಯ ಅಕ್ಕನ ಗಂಡನ ಕೊಲೆ ಮಾಡಿಸಿದವ ಸೇರಿ 7 ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಆರ್. ಟಿ. ನಗರದ ಆನಂದ್ ಕುಮಾರ್ (34), ಕಲಾಸಿಪಾಳ್ಯದ ಮಹಮದ್ ಫೈಸಲ್ (26), ಸೆಂದಿಲ್‍ಕುಮÁರ್ (30), ಬಿಳೇಕಳ್ಳಿಯ ರಘುನಾಥ (24), ನಾಯಂಡಹಳ್ಳಿ ಅಂಬೇಡ್ಕರ್ ನಗರದ ಪ್ರಶಾಂತ್ (29), ಜೆ.ಪಿ.ನಗರದ ಸತೀಶ (19) ಮತ್ತು ತಮಿಳುನಾಡಿನ ಶ್ರೀನಿವಾಸ (23) ಬಂಧಿತರು.

ಫೆ.17ರ ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಎಇಸಿಎಸ್ ಬಡಾವಣೆಯಲ್ಲಿ ಟ್ಯಾಂಕರ್ ನೀರು ಪೂರೈಕೆದಾರ ವೆಂಕಟಶಿವ ರೆಡ್ಡಿಯನ್ನು (45) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿತ್ತು.

ಘಟನೆ ವಿವರ
ಬೆಗೂರು ನಿವಾಸಿ ಭೈರಪ್ಪ ಎಂಬುವರ ಹಿರಿಯ ಮಗಳು ತನುಜಾ ಎಂಬುವನ್ನು  ವೆಂಕಟಶಿವ ರೆಡ್ಡಿ ವಿವಾಹವಾಗಿದ್ದ. ಕಿರಿಯ ಪುತ್ರಿ ಕುಸುಮಾ ಅವರನ್ನು ಬಂಧಿತ ಆನಂದ್‍ಕುಮಾರ್ ವಿವಾಹವಾಗಿದ್ದ. ಬೇಗೂರು ಸುತ್ತಮುತ್ತ ಭೈರಪ್ಪ ಅವರಿಗೆ ಸೇರಿದ ರು.10 ಕೋಟಿ ಮೌಲ್ಯದ ಜಮೀನಿದೆ.

ಭೈರಪ್ಪರ ಒಬ್ಬನೇ ಮಗ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ಆಸ್ತಿಯನ್ನು ದೊಡ್ಡ  ಅಳಿಯನಾಗಿದ್ದ ವೆಂಕಟಶಿವ ರೆಡ್ಡಿ ನೋಡಿ ಕೊಳ್ಳುತ್ತಿದ್ದ. ಪತ್ನಿ ಮತ್ತು ಮಕ್ಕಳ ಜತೆ ಆನಂದ್ ಆರ್.ಟಿ.ನಗರದಲ್ಲಿ ನೆಲೆಸಿದ್ದು, ಸಮೀಪದಲ್ಲೇ ತರಕಾರಿ ಅಂಗಡಿ ನಡೆಸುತ್ತಿದ್ದ. ಮಾವನ ಆಸ್ತಿ ಪಾಲು ವಿಚಾರವಾಗಿ ವೆಂಕಟ ಶಿವರೆಡ್ಡಿ ಮತ್ತು ಆನಂದ್ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ಪಾಲು ಮಾಡದೆ ಒಬ್ಬನೇ ಅನುಭವಿಸುತ್ತಿದ್ದಾನೆ ಎಂದು ಆನಂದ್, ವೆಂಕಟಶಿವ ರೆಡ್ಡಿ ಜತೆ ಜಗಳವಾಡುತ್ತಿದ್ದ.

ಸಂಬಂಧಿಕರು ಹಾಗೂ ಊರಿನ ಹಿರಿಯ ಮುಖಂಡರು ಹಲವು ಬಾರಿ ರಾಜಿ ಸಂಧಾನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಇಡೀ ಆಸ್ತಿಗೆ ತಾನೇ ಮಾಲೀಕನಾಗುವ ಉದ್ದೇಶದಿಂದ ಆನಂದ್, ವೆಂಕಟಶಿವರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದ. ತರಕಾರಿ ತರುತ್ತಿದ್ದಾಗ ಸಿಟಿ ಮಾರುಕಟ್ಟೆಯಲ್ಲಿ ಪರಿಯಯವಾದ ಮಹಮದ್ ಫೈಸಲ್ ಮತ್ತು ಸೆಂದಿಲ್ ಕುಮಾರ್ ಬಳಿ ತನಗೆ ತೊಂದರೆ ನೀಡುತ್ತಿರುವ ವೆಂಕಟಶಿವರೆಡ್ಡಿಯನ್ನು ಕೊಲೆ ಮಾಡುವ ವಿಚಾರ ಹೇಳಿದ್ದ. ಇದಕ್ಕೆ ಒಪ್ಪಿಕೊಂಡ ಫೈಸಲ್ ಮತ್ತು ಸೆಂದಿಲ್‍ಕುಮಾರ್ ಬಳಿ ತನಗೆ ತೊಂದರೆ ನೀಡುತ್ತಿರುವ ವೆಂಕಟ ಶಿವರೆಡ್ಡಿಯನ್ನು ಕೊಲೆ ಮಾಡುವ ವಿಚಾರ ಹೇಳಿದ್ದ. ಇದಕ್ಕೆ ಒಪ್ಪಿಕೊಂಡ  ಫೈಸಲ್ ಮತ್ತು ಸೆಂದಿಲ್ ರು.5 ಲಕ್ಷಕ್ಕೆ ಸುಪಾರಿ ಪಡೆದಿದ್ದರು.

ಸುಪಾರಿ ಹಣ ಪಡೆದ ಫೈಸಲ್, ರಘು, ಸೀನ, ಸತೀಶ್ ಮತ್ತು ಪ್ರಶಾಂತ್‍ಗೆ ಕೊಲೆ ಮಾಡುವ ಜವಾಬ್ದಾರಿ ನೀಡಿದ್ದ. ಫೆ.17ಮಧ್ಯಾಹ್ನ  ನೀರು ಬೇಕಿದೆ ಎಂದು ಹೇಳಿ ವೆಂಕಟಶಿವರೆಡ್ಡಿಯನ್ನು ಪರಪ್ಪನ ಅಗ್ರಹಾರ ಬಳಿ ಕರೆಸಿಕೊಂಡಿದ್ದರು. ಆದರೆ ಹತ್ಯೆ ಸಾಧ್ಯವಾಗಿರಲಿಲ್ಲ. ಹೀಗಾಗಿ ರಾತ್ರಿ 8 ಗಂಟೆಗೆ ಮತ್ತೆ ಕರೆ ಮಾಡಿ ಎಇಸಿಎಸ್ ಬಡಾವಣೆಗೆ ಕರೆಸಿಕೊಂಡು ಕೊಲೆ ಮಾಡಿದ್ದರು.

ಕೊಲೆಯಾಗುವ ಭೀತಿಯಿಂದ ಹತ್ಯೆ!
ವೆಂಕಟಶಿವರೆಡ್ಡಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಆರೋಪಿ ಆನಂದ್ ಯಾರಿಗೂ ಅನುಮಾನ ಬಾರದಂತೆ ನಟಿಸಿದ್ದ. ಆದರೆ, ತನಿಖೆ ಆರಂಭಿಸಿದ ಪೊಲೀಸರಿಗೆ ಅತ್ತಿಬೆಲೆ ಬಳಿ ನಾಲ್ವರು ಆರೋಪಿಗಳು ಸಿಕ್ಕಿಬಿದ್ದರು. ಅವರ ವಿಚಾರಣೆ ಬಳಿಕ ನಿಜವಾದ ಆರೋಪಿ ಆನಂದ್‍ನ ಸಂಚು ಬಯಲಾಗಿದೆ. ಆದರೆ, ವಿಚಾರಣೆ ವೇಳೆ ವೆಂಕಟಶಿವರೆಡ್ಡಿ ನನ್ನನ್ನೇ ಕೊಲೆ ಮಾಡಿಸಿ ಆಸ್ತಿಯನ್ನು ತಾನೇ ಅನುಭವಿಸುವ ಸಂಚು ರೂಪಿಸಿದ್ದ. ಹೀಗಾಗಿ, ರು.5 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದೆ ಎಂದು ಆನಂದ್ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!