ಎಸ್ಎಲ್ ಭೈರಪ್ಪ 
ಜಿಲ್ಲಾ ಸುದ್ದಿ

ಎಸ್.ಎಲ್ ಭೈರಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ಈ ಹಿಂದೆ ರಾಷ್ಟ್ರೀಯ ಫ್ರೊಫೆಸರ್ ಸ್ಥಾನ ಗಳಿಸಿದ್ದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್ ಭೈರಪ್ಪನವರಿಗೆ ಮತ್ತೊಂದು ಗೌರವದ ಸುದ್ದಿ.

ಬೆಂಗಳೂರು: ಈ ಹಿಂದೆ ರಾಷ್ಟ್ರೀಯ ಫ್ರೊಫೆಸರ್ ಸ್ಥಾನ ಗಳಿಸಿದ್ದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್ ಭೈರಪ್ಪನವರಿಗೆ ಮತ್ತೊಂದು ಗೌರವದ ಸುದ್ದಿ. ಕೇಂದ್ರ ಸಾಹಿತ್ಯ ಅಕಾಡೆಮಿ ಭೈರಪ್ಪ ಅವರಿಗೆ ಫೆಲೋ ಸ್ಥಾನ ಮಾನ ನೀಡಿದೆ.

ಸೋಮವಾರ ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭೈರಪ್ಪನವರ ಜತೆ ತೆಲುಗಿನ ಖ್ಯಾತ ಕವಿ ಸಿ. ನಾರಾಯಣ ರೆಡ್ಡಿ ಅವರೂ ಈ ಫೆಲೋ ಗೌರವಕ್ಕೆ ಭಾಜನ ರಾಗಿದ್ದಾರೆ. ಈ ಫೆಲೋ ಗೌರವ ಆಜೀವ ಪರ್ಯಂತವಾಗಿದ್ದು, ಮಾಸಿಕ ರು.1 ಲಕ್ಷವನ್ನು ಗೌರವಧನವಾಗಿ ನೀಡಲಾಗುತ್ತದೆ.

ಹಿರಿಯ ಪತ್ರಕರ್ತ ಹಾಗೂ ಕಸ್ತೂರಿ ಮಾಸ ಪತ್ರಿಕೆ ಸಂಪಾದಕ ಜಿ.ಎನ್. ರಂಗನಾಥ್ ರಾವ್ ರಿಗೆ 2014ನೇ ಸಾಲಿನ ಅನುವಾದಿತ ಕೃತಿಗಳಿಗೆ ನೀಡಲಾಗುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೋಹನದಾಸ ಒಂದು ಸತ್ಯ ಕಥೆ'  ಅನುವಾದಿತ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರು. 50 ಸಾವಿರ ಹಾಗೂ ತಾಮ್ರದ ಫಲಕ ಒಳಗೊಂಡಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video