ಬೆಂಗಳೂರು: ಕಾನೂನು ಪದವಿ ಪಡೆದಿರುವುದಾಗಿ ಸುಳ್ಳು ದಾಖಲೆ ನೀಡಿ ರಾಜ್ಯ ವಕೀಲ ಪರಿಷತ್‍ನಲ್ಲಿ ಸನ್ನದು ಪಡೆದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ರಾಜ್ಯ ವಕೀಲ ಪರಿಷತ್ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‍ನ ಅಧ್ಯಕ್ಷ ಪಿ.ಪಿ. ಹೆಗ್ಡೆ, ಈಗಾಗಲೇ ಮಗಧಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವುದಾಗಿ ಸುಳ್ಳು ದಾಖಲೆ ನೀಡಿ ಸನ್ನದು ಪಡೆದಿದ್ದ ಬೆಳಗಾವಿಯ ಶಿವಾಜಿ ಬಾಳಪ್ಪ ಸನದಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿ ಸದ್ಯ ಆತ ಬಂಧನದಲ್ಲಿದ್ದಾನೆ.
ಕೆಲವರು ಮಗಧಾ, ಬಿಹಾರ್, ಅಲಹಾಬಾದ್ ವಿವಿಯಿಂದ ಕಾನೂನು ಪದವಿ ಪಡೆದಿರುವುದಾಗಿ ನಕಲಿ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ.
ನಕಲಿ ಪ್ರಮಾಣ ಪತ್ರ ಪಡೆದವರು ಬೆಳಗಾವಿಯ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಅಭ್ಯಾಸ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ 30 ಜನರ ವಿರುದಟಛಿ ಶಂಕೆ ವ್ಯಕ್ತಪಡಿಸಿದ್ದು ವಿಚಾರಣೆ ಆರಂಭವಾಗಿದೆ.
ಕಾನೂನು ಬಾಹಿರವಾಗಿ ಸನ್ನದು ಪಡೆದವರನ್ನು ಪತ್ತೆಹಚ್ಚಲು ರಾಜ್ಯ ವಕೀಲ ಪರಿಷತ್ ಹಿರಿಯ ವಕೀಲರಾದ ವೈ.ಆರ್.ಸದಾಶಿವ ರೆಡ್ಡಿ, ಮುನಿಯಪ್ಪ, ಸಿ.ಆರ್.ಗೋಪಾಲಸ್ವಾಮಿ, ಕೆ.ಬಿ.ನಾಯಕ್ ಮತ್ತು ಮಲ್ಲೇಶಯ್ಯ ಒಳಗೊಂಡ ಸಮಿತಿ ರಚಿಸಲಾಗಿದೆ. ನಕಲಿ ವಕೀಲರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಮನವಿ ಮಾಡಿದರು.