ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಪಂದ್ಯಗಳಿಗೆ ಆನ್ ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬುಕಿಯನ್ನು ಬಂಧಿಸಿ ರು.2 ಲಕ್ಷ ನಗದು ಹಾಗೂ ಟಿ.ವಿ ವಶಪಡಿಸಿಕೊಂಡಿದ್ದಾರೆ.
ರಾಜಾಜಿನಗರದ ಅರುಣ್ ಬಂಧಿತ. ಬೆಟ್ ಫೇರ್ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ಕಟ್ಟುವವರನ್ನು ಸಂಪರ್ಕಿಸುತ್ತಿದ್ದ ಈತನಿಗೆ ಪ್ರಮುಖ ಬುಕ್ಕಿ ಅನಿಲ್ ಎಂಬಾತನೊಂದಿಗೆ ಸಂಪರ್ಕ ಇದೆ.
ಶನಿವಾರ ಭಾರತ-ಜಿಂಬಾಬ್ವೆ ನಡುವಿನ ಪಂದ್ಯಕ್ಕೆ ಫೇವರೇಟ್ ತಂಡಕ್ಕೆ ರು.200 ಹಾಗೂ ದುರ್ಬಲ ತಂಡದ ಪರ ರು.1000 ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ. ಮಾಹಿತಿ ಆಧರಿಸಿ ರಾಜಾಜಿನಗರದಲ್ಲಿರುವ ಸಾಯಿರಾಮ್ ಎಂಟರ್ ಪ್ರೈಸಸ್ ಮೇಲೆ ದಾಳಿ ನಡೆಸಿ ಆರೋಪಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.