ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಗಣಿತ ಹಾಗೂ ಭೂಗೋಳಶಾಸ್ತ್ರ ಪರೀಕ್ಷೆಯನ್ನು ಮಾ.28ಕ್ಕೆ ಮುಂದೂಡಲಾಗಿದೆ.
ಬುಧವಾರದಿಂದ ನಡೆಯುವ ಎಲ್ಲ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಪಿಯು ನಿರ್ದೇಶಕರು ತಿಳಿಸಿದ್ದಾರೆ. ಇನ್ನೊಂದೆಡೆ ಮಂಗಳವಾರದ ಪರೀಕ್ಷೆ ಮುಂದೂಡಲಾಗಿದೆ. ವಾರ್ತಾ ಇಲಾಖೆಯ ಅಧಿಕೃತ ಟ್ವೀಟ್ ಖಾತೆ ಕರ್ನಾಟಕ ವಾರ್ತೆಯಲ್ಲಿ ಸಂಜೆ 4 ಗಂಟೆಗೆ ಟ್ವೀಟ್ ಮಾಡಿದ್ದಾರೆ. ಪರೀಕ್ಷೆ ಮುಗಿದು 4 ತಾಸು ಆದ ಬಳಿಕ ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಮುದಾಯದ ಮೇಲಿನ ತಮ್ಮ ಆಸಕ್ತಿಯನ್ನು ಸರ್ಕಾರ ಪ್ರದರ್ಶಿಸಿದೆ.